ಯೆರೆಮೀಯ 5:6 - ಪರಿಶುದ್ದ ಬೈಬಲ್6 ಆದ್ದರಿಂದ ಕಾಡಿನ ಸಿಂಹವು ಅವರ ಮೇಲೆರಗುವುದು, ಮರಳುಗಾಡಿನ ತೋಳವು ಅವರನ್ನು ಕೊಂದು ಬಿಡುವದು. ಅವರ ನಗರಗಳ ಹತ್ತಿರ ಚಿರತೆಯು ಅಡಗಿಕೊಂಡಿದೆ. ನಗರದಿಂದ ಹೊರಗೆ ಬಂದವರನ್ನೆಲ್ಲ ಅದು ಚೂರುಚೂರು ಮಾಡುವುದು. ಯೆಹೂದದ ಜನರು ಮತ್ತೆಮತ್ತೆ ಪಾಪಗಳನ್ನು ಮಾಡಿದ್ದರಿಂದ ಹೀಗಾಗುವದು. ಅವರು ಅನೇಕಸಲ ಯೆಹೋವನಿಂದ ದೂರ ಹೋಗಿದ್ದಾರೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಆದಕಾರಣ ಅಡವಿಯ ಸಿಂಹವು ಅವರನ್ನು ಕೊಲ್ಲುವುದು, ಕಾಡಿನ ತೋಳವು ಕೊಳ್ಳೆ ಹೊಡೆಯುವುದು, ಚಿರತೆಯು ಅವರ ಪಟ್ಟಣಗಳಿಗೆ ಹೊಂಚುಹಾಕಿ ಅಲ್ಲಿಂದ ಹೊರಡುವ ಪ್ರತಿಯೊಬ್ಬನನ್ನೂ ಸೀಳುವುದು. ಅವರ ಅಪರಾಧಗಳು ಬಹಳ, ಅವರ ದ್ರೋಹಗಳು ಅಪಾರ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ಆದಕಾರಣ ಅಡವಿಯ ಸಿಂಹ ಅವರನ್ನು ಕೊಲ್ಲುವುದು ಕಾಡಿನ ತೋಳ ಕೊಳ್ಳೆಹೊಡೆಯುವುದು ಚಿರತೆ ಅವರ ಪಟ್ಟಣಗಳಿಗೆ ಹೊಂಚುಹಾಕುವುದು ಅಲ್ಲಿಂದ ಹೊರಬರುವ ಪ್ರತಿಯೊಬ್ಬನನ್ನು ಸೀಳುವುದು. ಅವರ ಅಪರಾಧಗಳೋ ಬಹಳ, ಅವರ ದ್ರೋಹಗಳೋ ಅಪಾರ ! ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ಆದಕಾರಣ ಅಡವಿಯ ಸಿಂಹವು ಅವರನ್ನು ಕೊಲ್ಲುವದು, ಕಾಡಿನ ತೋಳವು ಕೊಳ್ಳೆಮಾಡುವದು, ಚಿರತೆಯು ಅವರ ಪಟ್ಟಣಗಳಿಗೆ ಹೊಂಚುಹಾಕಿ ಅಲ್ಲಿಂದ ಹೊರಡುವ ಪ್ರತಿಯೊಬ್ಬನನ್ನೂ ಸೀಳುವದು; ಅವರ ಅಪರಾಧಗಳು ಬಹಳ, ಅವರ ದ್ರೋಹಗಳು ಅಪಾರ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ6 ಹೀಗಿರುವುದರಿಂದ ಅಡವಿಯ ಸಿಂಹವು ಅವರನ್ನು ದಾಳಿಮಾಡುವುದು. ಕಾಡಿನ ತೋಳವು ಅವರನ್ನು ಸೂರೆಮಾಡುವುದು. ಚಿರತೆ ಅವರ ಪಟ್ಟಣಗಳ ಮೇಲೆ ಕಾವಲಾಗಿರುವುದು. ಅಲ್ಲಿಂದ ಹೊರಗೆ ಬರುವವರೆಲ್ಲರೂ ಸೀಳಲಾಗುವರು. ಏಕೆಂದರೆ, ಅವರ ದ್ರೋಹಗಳು ಬಹಳವಾಗಿವೆ. ಅವರ ಹಿಂಜಾರುವಿಕೆಯು ಹೆಚ್ಚಾಗಿವೆ. ಅಧ್ಯಾಯವನ್ನು ನೋಡಿ |
“ಜೋರ್ಡನ್ ನದಿಯ ಸಮೀಪದ ದಟ್ಟವಾದ ಕಾಡಿನಿಂದ ಫಕ್ಕನೆ ಒಂದು ಸಿಂಹ ಬರುವದು. ಅದು ಹೊಲಗಳಲ್ಲಿದ್ದ ಜನರ ದನಕುರಿಗಳ ಹಟ್ಟಿಗಳಿಗೆ ನುಗ್ಗುವುದು. ನಾನು ಆ ಸಿಂಹದಂತೆ ಇದ್ದೇನೆ. ನಾನು ಎದೋಮ್ ನಗರಕ್ಕೆ ಹೋಗಿ ಆ ಜನರನ್ನು ಹೆದರಿಸುವೆನು; ಅವರು ಓಡಿಹೋಗುವಂತೆ ಮಾಡುವೆನು. ಅವರ ತರುಣರಲ್ಲಿ ಯಾರೂ ನನ್ನನ್ನು ತಡೆಯಲಾರರು. ನನ್ನತೆ ಯಾರೂ ಇಲ್ಲ. ಯಾರೂ ನನ್ನನ್ನು ಪ್ರತಿಭಟಿಸುವದಿಲ್ಲ. ಅವರ ನಾಯಕರಲ್ಲಿ ಯಾರೂ ನನ್ನ ವಿರುದ್ಧ ನಿಲ್ಲುವದಿಲ್ಲ.”
ನೀವು ಕೆಟ್ಟದ್ದನ್ನು ಮಾಡಿದರೆ ಆ ಕೆಟ್ಟತನ ನಿಮಗೆ ಶಿಕ್ಷೆಯಾಗುವಂತೆ ಮಾತ್ರ ಮಾಡುತ್ತದೆ. ನಿಮಗೆ ವಿಪತ್ತು ಬರುತ್ತದೆ. ಆ ವಿಪತ್ತು ನಿಮಗೊಂದು ಪಾಠವನ್ನು ಕಲಿಸುತ್ತದೆ. ಅದರ ಬಗ್ಗೆ ಯೋಚಿಸಿರಿ. ಆಗ ನಿಮ್ಮ ದೇವರಿಗೆ ವಿಮುಖರಾಗುವುದು ಎಷ್ಟು ಕೆಟ್ಟದ್ದೆಂದು ನಿಮಗೆ ಗೊತ್ತಾಗುತ್ತದೆ. ನನಗೆ ಭಯಭಕ್ತಿ ತೋರದೆ ಇರುವದು ತಪ್ಪು.” ಈ ಸಂದೇಶವು ನನ್ನ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನಿಂದ ಬಂದಿತು.
ಈ ಪೀಳಿಗೆಯ ಜನರೇ, ಯೆಹೋವನ ಸಂದೇಶದ ಕಡೆಗೆ ಗಮನ ಕೊಡಿ, “ಇಸ್ರೇಲಿನ ಜನರಿಗೆ ನಾನು ಮರಳುಗಾಡಿನಂತೆ ಇರುವೆನೇ? ನಾನು ಗಾಢಾಂಧಕಾರಮಯವಾದ ಮತ್ತು ಅಪಾಯಕಾರಿಯಾದ ಭೂಮಿಯಂತೆ ಇರುವೆನೇ? ನನ್ನ ಜನರು, ‘ನಮಗೆ ಇಷ್ಟವಾದ ಮಾರ್ಗವನ್ನು ಅನುಸರಿಸಲು ನಾವು ಸ್ವತಂತ್ರರಾಗಿದ್ದೇವೆ. ಯೆಹೋವನೇ, ನಾವು ಪುನಃ ನಿನ್ನಲ್ಲಿಗೆ ಬರುವದಿಲ್ಲ’ ಎಂದು ಹೇಳುತ್ತಾರೆ. ಅವರು ಹಾಗೆ ಏಕೆ ಹೇಳುತ್ತಾರೆ?