Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 5:22 - ಪರಿಶುದ್ದ ಬೈಬಲ್‌

22 ನೀವು ನನಗೆ ಅಂಜುವುದಿಲ್ಲವೇ?” ಇದು ಯೆಹೋವನ ಸಂದೇಶ: “ನೀವು ನನ್ನ ಎದುರಿಗೆ ಭಯದಿಂದ ನಡುಗುವುದಿಲ್ಲವೇ? ಸಾಗರಗಳಿಗೆ ಗಡಿಯಂತೆ ದಡವನ್ನು ನಿರ್ಮಿಸಿದವನು ನಾನೇ. ಸಮುದ್ರವು ನಿರಂತರವಾಗಿ ತನ್ನ ಸೀಮೆಯಲ್ಲಿಯೇ ಹರಿಯಬೇಕೆಂದು ಹಾಗೆ ಮಾಡಿದೆ. ತೆರೆಗಳು ದಡವನ್ನು ಅಪ್ಪಳಿಸಬಹುದು ಆದರೆ ಅವುಗಳು ಅದನ್ನು ನಾಶಮಾಡಲಾರವು. ತೆರೆಗಳು ಬರುವಾಗ ಭೋರ್ಗರೆಯಬಹುದು, ಆದರೆ ದಡವನ್ನು ದಾಟಿಹೋಗಲಾರವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ನೀವು ನನಗೆ ಅಂಜುವುದಿಲ್ಲವೋ, ನನ್ನೆದುರಿಗೆ ನಡುಗುವುದಿಲ್ಲವೋ? ಸಮುದ್ರವು ದಾಟದ ಹಾಗೆ ಅದಕ್ಕೆ ಮರಳನ್ನು ನಿತ್ಯನಿಬಂಧನೆಯಿಂದ ಮೇರೆಯನ್ನಾಗಿ ನೇಮಿಸಿದ್ದೇನಷ್ಟೆ. ತೆರೆಗಳು ಅಲ್ಲಕಲ್ಲೋಲವಾದರೂ ಮೀರಲಾರವು, ಭೋರ್ಗರೆದರೂ ಹಾಯಲಾರವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ನೀವು ನನಗೆ ಅಂಜುವುದಿಲ್ಲವೋ? ನನ್ನೆದುರಿಗೆ ನಡುಗುವುದಿಲ್ಲವೊ? ಕಡಲು ದಾಟದ ಹಾಗೆ ಅದಕ್ಕೆ ಮರಳನ್ನು ನಿತ್ಯನಿಬಂಧನೆಯಿಂದ ಮೇರೆಯನ್ನಾಗಿ ನೇಮಿಸಿದವನು ನಾನು.ತೆರೆಗಳು ಅಲ್ಲಕಲ್ಲೋಲವಾದರೂ ಅದನ್ನು ಮೀರಲಾರವು. ಭೋರ್ಗರೆದರೂ ಹಾಯಲಾರವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ನೀವು ನನಗೆ ಅಂಜುವದಿಲ್ಲವೋ, ನನ್ನೆದುರಿಗೆ ನಡುಗುವದಿಲ್ಲವೋ? ಸಮುದ್ರವು ದಾಟದ ಹಾಗೆ ಅದಕ್ಕೆ ಮರಳನ್ನು ನಿತ್ಯನಿಬಂಧನೆಯಿಂದ ಮೇರೆಯನ್ನಾಗಿ ನೇವಿುಸಿದ್ದೇನಷ್ಟೆ. ತೆರೆಗಳು ಅಲ್ಲಕಲ್ಲೋಲವಾದರೂ ಮೀರಲಾರವು, ಭೋರ್ಗರೆದರೂ ಹಾಯಲಾರವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ನೀವು ನನಗೆ ಭಯಪಡುವುದಿಲ್ಲವೋ?” ಎಂದು ಯೆಹೋವ ದೇವರು ಹೇಳುತ್ತಾರೆ. “ನನ್ನ ಸಮ್ಮುಖದಲ್ಲಿ ನಡುಗುವುದಿಲ್ಲವೋ? ನಾನು ಮರಳನ್ನು ನಿತ್ಯ ನೇಮವಾಗಿ ಸಮುದ್ರಕ್ಕೆ, ಅದು ದಾಟಕೂಡದ ಹಾಗೆ ಮೇರೆಯಾಗಿಟ್ಟಿದ್ದೇನೆ. ಅದರ ತೆರೆಗಳು ಎದ್ದರೂ ದಡ ಮೀರಲಾರವು; ಘೋಷಿಸಿದರೂ ಅದನ್ನು ದಾಟಲಾರವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 5:22
29 ತಿಳಿವುಗಳ ಹೋಲಿಕೆ  

ನೀನು ಸಮುದ್ರಗಳಿಗೆ ಮೇರೆಗಳನ್ನು ಗೊತ್ತುಪಡಿಸಿರುವುದರಿಂದ ನೀರಿನಿಂದ ಭೂಮಿಯು ಮತ್ತೆಂದಿಗೂ ಆವೃತವಾಗದು.


ದೇವರು ಸಮುದ್ರದ ಮೇಲೆ ಬೆಳಕು ಮತ್ತು ಕತ್ತಲೆಗಳು ಸಂಧಿಸುವ ಸ್ಥಳದಲ್ಲಿ ಕ್ಷಿತಿಜವನ್ನು ಗಡಿರೇಖೆಯನ್ನಾಗಿ ಎಳೆದಿದ್ದಾನೆ.


ಆತನು ಸಮುದ್ರಗಳ ನೀರಿಗೆ ಎಲ್ಲೆಕಟ್ಟನ್ನು ಹಾಕಿದಾಗಲೂ ಭೂಮಿಗೆ ಅಸ್ತಿವಾರಗಳನ್ನು ಹಾಕಿದಾಗಲೂ ನಾನು ಅಲ್ಲಿದ್ದೆನು.


ನಾನು ನಿನ್ನಲ್ಲಿ ಭಯವುಳ್ಳವನಾಗಿದ್ದೇನೆ. ನಾನು ನಿನ್ನ ತೀರ್ಪುಗಳಿಗೆ ಅಂಜಿಕೊಂಡಿದ್ದೇನೆ.


“ಈ ಪುಸ್ತಕದಲ್ಲಿ ಬರೆದಿರುವ ಎಲ್ಲಾ ಆಜ್ಞೆಗಳಿಗೂ ಉಪದೇಶಗಳಿಗೂ ನೀವು ವಿಧೇಯರಾಗಬೇಕು. ನಿಮ್ಮ ದೇವರಾದ ಯೆಹೋವನು ಅದ್ಭುತನೂ ಭಯಂಕರನೂ ಆಗಿರುವುದರಿಂದ ಆತನ ಹೆಸರನ್ನು ನೀವು ಗೌರವಿಸಬೇಕು.


ಯೆಹೋವನು ಸಮುದ್ರಕ್ಕೆ ಗದರಿಸಿದಾಗ ಅದು ಒಣಗಿಹೋಗುವುದು. ಆತನು ಎಲ್ಲಾ ನದಿಗಳನ್ನು ಬತ್ತಿಸಿಬಿಡುವನು. ಕರ್ಮೆಲ್ ಮತ್ತು ಬಾಷಾನಿನ ಫಲವತ್ತಾದ ನೆಲಗಳು ಒಣಗಿ ಪಾಳುಬೀಳುವವು. ಲೆಬನೋನಿನ ಪುಷ್ಪವು ಬಾಡಿಹೋಗುವದು.


ದೇವರೇ, ಪ್ರತಿಯೊಬ್ಬರೂ ನಿನ್ನನ್ನು ಗೌರವಿಸಬೇಕು. ನೀನು ಪ್ರತಿಯೊಂದು ಜನಾಂಗಕ್ಕೂ ರಾಜನಾಗಿರುವೆ. ಅವರೆಲ್ಲರೂ ನಿನಗೆ ಗೌರವ ತೋರಿಸಬೇಕು. ಜನಾಂಗಗಳಲ್ಲಿ ಎಷ್ಟೋ ಮಂದಿ ಜ್ಞಾನಿಗಳಿದ್ದಾರೆ ಆದರೆ ಅವರಲ್ಲಿ ಒಬ್ಬರೂ ನಿನ್ನಷ್ಟು ಜ್ಞಾನಿಗಳಲ್ಲ.


ಯೇಸು ಎಚ್ಚೆತ್ತು ಬಿರುಗಾಳಿ ಮತ್ತು ಅಲೆಗಳಿಗೆ, “ಪ್ರಶಾಂತವಾಗಿರಿ! ಮೊರೆಯದಿರಿ!” ಎಂದು ಆಜ್ಞಾಪಿಸಿದನು. ಆಗ ಬಿರುಗಾಳಿ ನಿಂತುಹೋಯಿತು ಮತ್ತು ಸರೋವರವು ಪ್ರಶಾಂತವಾಯಿತು.


ಪ್ರಭುವೇ, ಜನರೆಲ್ಲರೂ ನಿನಗೆ ಭಯಗೊಳ್ಳುತ್ತಾರೆ; ಜನರೆಲ್ಲರೂ ನಿನ್ನ ಹೆಸರನ್ನು ಸ್ತುತಿಸುತ್ತಾರೆ. ನೀನು ಮಾತ್ರ ಪರಿಶುದ್ಧನಾದವನು. ನೀನು ಯೋಗ್ಯವಾದ ಕಾರ್ಯಗಳನ್ನು ಮಾಡುತ್ತೀ ಎಂಬುದು ಸ್ಪಷ್ಟವಾಗಿರುವುದರಿಂದ ಜನರೆಲ್ಲರೂ ನಿನ್ನ ಸನ್ನಿಧಿಗೆ ಬಂದು ನಿನ್ನನ್ನು ಆರಾಧಿಸುತ್ತಾರೆ.”


ಯೆಹೋವನು ಆಕಾಶದ ಮೇಲೆ ತನಗಾಗಿ ಮೇಲುಪ್ಪರಿಗೆಗಳನ್ನು ಕಟ್ಟಿದನು. ಭೂಮಿಯ ಮೇಲೆ ಆಕಾಶವನ್ನು ಹರಡಿದನು. ಸಮುದ್ರದ ನೀರನ್ನು ಕರೆದು ಭೂಮಿಯ ಮೇಲೆ ಮಳೆಗೆರೆಯುವಂತೆ ಮಾಡುವನು. ಆತನ ಹೆಸರು ಯೆಹೋವ.


ಯೆಹೋವನೇ ರಾಜನು! ಜನಾಂಗಗಳು ಭಯದಿಂದ ನಡುಗಲಿ. ಆತನು ಕೆರೂಬಿಗಳ ಮೇಲೆ ರಾಜನಂತೆ ಕುಳಿತುಕೊಂಡಿದ್ದಾನೆ. ಭೂಮಿಯು ಭಯದಿಂದ ನಡುಗಲಿ.


ಆತನು ನೀರುಗಳನ್ನು ಒಟ್ಟುಗೂಡಿಸಿ ಸಮುದ್ರವನ್ನು ನಿರ್ಮಿಸಿದನು; ಮಹಾಸಾಗರಕ್ಕೆ ಸ್ಥಳವನ್ನು ಗೊತ್ತುಪಡಿಸಿದನು.


“ಜನರಿಗೆ ಹೆದರಬೇಡಿ. ಅವರು ಶರೀರವನ್ನು ಮಾತ್ರ ಕೊಲ್ಲಬಹುದು. ಆತ್ಮವನ್ನು ಅವರು ಕೊಲ್ಲಲಾರರು. ಶರೀರವನ್ನೂ ಆತ್ಮವನ್ನೂ ನರಕಕ್ಕೆ ಹಾಕಬಲ್ಲ ದೇವರಿಗೆ ಭಯಪಡಿರಿ.


ನಾನು ಮನೆಗೆ ಬಂದಾಗ ಅಲ್ಲಿ ಯಾರೂ ಇರಲಿಲ್ಲ. ನಾನು ಎಷ್ಟು ಕರೆದರೂ ಯಾರೂ ಉತ್ತರ ಕೊಡಲಿಲ್ಲ. ನಿಮ್ಮನ್ನು ರಕ್ಷಿಸಲು ನನ್ನಿಂದ ಸಾಧ್ಯವಿಲ್ಲವೆಂದು ನೀವು ನೆನಸುತ್ತೀರಾ? ನಿಮ್ಮ ಎಲ್ಲಾ ಕಷ್ಟಗಳಿಂದ ನಿಮ್ಮನ್ನು ಪಾರುಮಾಡಲು ನನಗೆ ಸಾಮರ್ಥ್ಯವಿದೆ. ಇಗೋ, ನಾನು ಸಮುದ್ರಕ್ಕೆ ಒಣಗಿಹೋಗು ಎಂದು ಹೇಳಿದರೆ ಹಾಗೆಯೇ ಆಗುವದು. ಮೀನುಗಳು ನೀರಿಲ್ಲದೆ ಸತ್ತು ನಾರುವವು.


ನೀವು ಯಾರಿಗೆ ಭಯಪಡಬೇಕೆಂದರೆ, ನಿಮ್ಮನ್ನು ಕೊಂದು ನರಕಕ್ಕೆ ಹಾಕಲು ಅಧಿಕಾರವುಳ್ಳಾತನಿಗಷ್ಟೇ (ದೇವರಿಗೆ). ಹೌದು, ಆತನೊಬ್ಬನಿಗೇ ನೀವು ಭಯಪಡಬೇಕು.


ನಾನೊಂದು ಹೊಸ ಶಾಸನವನ್ನು ಮಾಡುತ್ತಿದ್ದೇನೆ. ಈ ಶಾಸನವು ನನ್ನ ರಾಜ್ಯದ ಎಲ್ಲ ಭಾಗಗಳ ಜನರಿಗೆ ಅನ್ವಯಿಸುವುದು. ನೀವೆಲ್ಲರೂ ದಾನಿಯೇಲನ ದೇವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು. ದಾನಿಯೇಲನ ದೇವರೇ ಜೀವಸ್ವರೂಪನಾದ ದೇವರು. ಆತನು ನಿರಂತರವೂ ಇರುವಾತನಾಗಿದ್ದಾನೆ. ಆತನ ಸಾಮ್ರಾಜ್ಯವು ಎಂದಿಗೂ ಹಾಳಾಗುವದಿಲ್ಲ. ಆತನ ಆಧಿಪತ್ಯವು ಎಂದಿಗೂ ಮುಗಿಯುವದಿಲ್ಲ.


ಯೆಹೋವನ ಆಜ್ಞೆಗಳನ್ನು ಪರಿಪಾಲಿಸುವ ನೀವು ಆತನು ಹೇಳುವ ಸಂಗತಿಗಳನ್ನು ಕಿವಿಗೊಟ್ಟು ಕೇಳಬೇಕು. ಆತನು ಹೇಳುವುದೇನೆಂದರೆ, “ನಿಮ್ಮ ಸಹೋದರರು ನಿಮ್ಮನ್ನು ದ್ವೇಷಿಸಿದರು. ನೀವು ನನ್ನನ್ನು ಅನುಸರಿಸಿದ್ದರಿಂದ ನಿಮ್ಮ ಮೇಲೆರಗಿದರು. ‘ಯೆಹೋವನು ಸನ್ಮಾನ ಹೊಂದಿದ ಬಳಿಕ ನಿಮ್ಮ ಬಳಿಗೆ ಬರುತ್ತೇವೆ. ಆಮೇಲೆ ನಿಮ್ಮ ಆನಂದವನ್ನು ಅನುಭವಿಸುತ್ತೇವೆ’ ಎಂದು ನಿಮ್ಮ ಸಹೋದರರು ಅಂದರು. ಆ ದುಷ್ಟ ಜನರು ಶಿಕ್ಷಿಸಲ್ಪಡುವರು.”


ಬಳಿಕ ದೇವರು, “ಆಕಾಶದ ಕೆಳಗಿರುವ ನೀರೆಲ್ಲಾ ಒಟ್ಟಿಗೆ ಸೇರಿಕೊಂಡು ಒಣನೆಲವು ಕಾಣಿಸಲಿ” ಅಂದನು. ಹಾಗೆಯೇ ಆಯಿತು.


“ಯೋಬನೇ, ಭೂಮಿಯ ಗರ್ಭದೊಳಗಿಂದ ನುಗ್ಗಿ ಬರುವ ಸಮುದ್ರದ ನೀರನ್ನು ನಿಲ್ಲಿಸುವುದಕ್ಕಾಗಿ ಬಾಗಿಲುಗಳನ್ನು ಮುಚ್ಚಿದವರು ಯಾರು?


ಸಮುದ್ರಗಳು ಭೋರ್ಗರೆಯುತ್ತಾ ನೊರೆಕಾರಿದರೂ ಅವುಗಳ ಅಲ್ಲೋಲಕಲ್ಲೋಲಗಳಿಂದ ಬೆಟ್ಟಗಳು ನಡುಗಿದರೂ ನಮಗೇನೂ ಭಯವಿಲ್ಲ.


ಒಣಎಲೆಯು ಸುಟ್ಟುಹೋಗುವಂತೆ ಪರ್ವತಗಳು ಸುಟ್ಟು ಭಸ್ಮವಾಗುವವು. ಬೆಂಕಿಯಲ್ಲಿ ನೀರು ಕುದಿಯುವಂತೆ ಪರ್ವತಗಳು ಕುದಿಯುವವು. ಆಗ ನಿನ್ನ ಶತ್ರುಗಳು ನಿನ್ನ ವಿಷಯವಾಗಿ ತಿಳಿಯುವರು. ಆಗ ಜನಾಂಗದವರೆಲ್ಲಾ ನಿನ್ನನ್ನು ನೋಡಿ ಭಯದಿಂದ ನಡುಗುವರು.


ನೀವು ಕೆಟ್ಟದ್ದನ್ನು ಮಾಡಿದರೆ ಆ ಕೆಟ್ಟತನ ನಿಮಗೆ ಶಿಕ್ಷೆಯಾಗುವಂತೆ ಮಾತ್ರ ಮಾಡುತ್ತದೆ. ನಿಮಗೆ ವಿಪತ್ತು ಬರುತ್ತದೆ. ಆ ವಿಪತ್ತು ನಿಮಗೊಂದು ಪಾಠವನ್ನು ಕಲಿಸುತ್ತದೆ. ಅದರ ಬಗ್ಗೆ ಯೋಚಿಸಿರಿ. ಆಗ ನಿಮ್ಮ ದೇವರಿಗೆ ವಿಮುಖರಾಗುವುದು ಎಷ್ಟು ಕೆಟ್ಟದ್ದೆಂದು ನಿಮಗೆ ಗೊತ್ತಾಗುತ್ತದೆ. ನನಗೆ ಭಯಭಕ್ತಿ ತೋರದೆ ಇರುವದು ತಪ್ಪು.” ಈ ಸಂದೇಶವು ನನ್ನ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನಿಂದ ಬಂದಿತು.


“ಆದ್ದರಿಂದ ಇಸ್ರೇಲೇ, ನಿನಗೆ ವಿರುದ್ಧವಾಗಿ ಈ ಸಂಗತಿಗಳನ್ನು ಮಾಡುತ್ತೇನೆ. ಇಸ್ರೇಲೇ, ನಿನ್ನ ದೇವರನ್ನು ಸಂಧಿಸಲು ನಿನ್ನನ್ನು ತಯಾರು ಮಾಡಿಕೊ.”


ಪ್ರವಾದಿಯು ಹೋಗಿ ರಸ್ತೆಯ ಮೇಲೆ ಬಿದ್ದಿರುವ ದೇಹವನ್ನು ಕಂಡನು. ಕತ್ತೆ ಮತ್ತು ಸಿಂಹವು ಆ ದೇಹದ ಹತ್ತಿರ ಇನ್ನೂ ನಿಂತಿದ್ದವು. ಸಿಂಹವು ಆ ದೇಹವನ್ನು ತಿಂದಿರಲಿಲ್ಲ ಮತ್ತು ಕತ್ತೆಗೆ ತೊಂದರೆಯನ್ನೂ ಮಾಡಿರಲಿಲ್ಲ.


ಆದಕಾರಣವೇ ಜನರು ದೇವರಲ್ಲಿ ಭಯಭಕ್ತಿಯಿಂದಿರುವರು. ದೇವರಾದರೋ ತಮ್ಮನ್ನು ಜ್ಞಾನಿಗಳೆಂದು ಭಾವಿಸಿಕೊಂಡಿರುವ ಗರ್ವಿಷ್ಠರನ್ನು ಗೌರವಿಸುವುದಿಲ್ಲ.”


ಯೆಹೋವನು ಹೀಗೆನ್ನುತ್ತಾನೆ: “ಹಗಲಿನಲ್ಲಿ ಸೂರ್ಯನು ಪ್ರಕಾಶಿಸುವಂತೆ ಮಾಡುವಾತನೂ ರಾತ್ರಿಯಲ್ಲಿ ಚಂದ್ರನೂ ನಕ್ಷತ್ರಗಳೂ ಪ್ರಕಾಶಿಸುವಂತೆ ಮಾಡುವಾತನೂ ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸುವಂತೆ ಸಮುದ್ರವನ್ನು ಕೆರಳಿಸುವಾತನೂ ಸರ್ವಶಕ್ತನಾದ ಯೆಹೋವನೆಂಬ ಹೆಸರಿನಿಂದ ಪ್ರಖ್ಯಾತನೂ ಆಗಿರುವ ಯೆಹೋವನು.”


ಜನರು ಇದನ್ನು ನೋಡಿದಾಗ ಅವರು ಯೆಹೋವನಿಗೆ ಭಯಪಟ್ಟು ಗೌರವಿಸಿದರು. ಅವರು ಆತನಿಗೆ ಯಜ್ಞವನ್ನರ್ಪಿಸಿ ಹರಕೆ ಹಾಕಿಕೊಂಡರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು