Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 49:13 - ಪರಿಶುದ್ದ ಬೈಬಲ್‌

13 ಯೆಹೋವನು ಹೀಗೆನ್ನುತ್ತಾನೆ, “ನನ್ನ ಸ್ವಸಾಮರ್ಥ್ಯದಿಂದ ನಾನು ಈ ಪ್ರಮಾಣ ಮಾಡುವೆನು. ನಾನು ಆಣೆಯಿಟ್ಟು ಹೇಳುವೆನು. ಬೊಚ್ರ ನಗರವನ್ನು ನಾಶಮಾಡಲಾಗುವುದು. ಆ ನಗರ ಒಂದು ಹಾಳು ದಿಬ್ಬವಾಗುವುದು. ಬೇರೆ ನಗರಗಳಿಗೆ ದುರ್ಗತಿ ಬರಲಿ ಎಂದು ಶಪಿಸುವಾಗ ಜನರು ‘ಬೊಚ್ರದಂತೆ ಹಾಳಾಗಲಿ’ ಎಂದು ಈ ನಗರದ ಉದಾಹರಣೆಯನ್ನು ಕೊಡುವರು. ಜನರು ಈ ನಗರವನ್ನು ಅವಮಾನ ಮಾಡುವರು. ಬೊಚ್ರ ನಗರದ ಸುತ್ತಮುತ್ತಲಿನ ಪಟ್ಟಣಗಳು ಶಾಶ್ವತವಾಗಿ ಹಾಳುಬೀಳುವವು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಬೊಚ್ರವು ಹಾಳುಬಿದ್ದು ಪರಿಹಾಸ್ಯಕ್ಕೂ, ನಿಂದೆಗೂ ಶಾಪಕ್ಕೂ ಗುರಿಯಾಗಿದೆ. ಅದಕ್ಕೆ ಸೇರಿದ ಊರುಗಳೆಲ್ಲಾ ನಿತ್ಯನಾಶವನ್ನು ಹೊಂದುವವು ಎಂದು ನನ್ನ ಮೇಲೆ ಆಣೆಯಿಟ್ಟಿದ್ದೇನೆ. ಇದು ಯೆಹೋವನ ನುಡಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಬೊಚ್ರ ನಗರವು ಪಾಳುಬೀಳುವುದು. ಜನರು ಅದನ್ನು ನೋಡಿ ಬೆಚ್ಚಿಬೀಳುವರು. ಅದು ಶಾಪಕ್ಕೂ ನಿಂದೆ ಪರಿಹಾಸ್ಯಕ್ಕೂ ಗುರಿಯಾಗುವುದು. ಅದಕ್ಕೆ ಸೇರಿದ ಊರುಗಳೆಲ್ಲ ನಿತ್ಯನಾಶ ಹೊಂದುವುವು. ಇದನ್ನು ಆಣೆಯಿಟ್ಟು ಹೇಳಿದ್ದೇನೆ. ಇದು ಸರ್ವೇಶ್ವರನಾದ ನನ್ನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಬೊಚ್ರವು ಹಾಳುಬಿದ್ದು ಬೆರಗಿಗೂ ನಿಂದೆಗೂ ಶಾಪಕ್ಕೂ ಗುರಿಯಾಗಿ ಅದಕ್ಕೆ ಸೇರಿದ ಊರುಗಳೆಲ್ಲಾ ನಿತ್ಯನಾಶನವನ್ನು ಹೊಂದುವವು ಎಂದು ನನ್ನ ಮೇಲೆ ಆಣೆಯಿಟ್ಟಿದ್ದೇನೆ. ಇದು ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಏಕೆಂದರೆ ಬೊಚ್ರವು ಹಾಳೂ ನಿಂದೆಯೂ ಅಡವಿಯೂ ಶಾಪವೂ ಆಗುವುದೆಂದೂ ಅದರ ಪಟ್ಟಣಗಳೆಲ್ಲಾ ಎಂದೆಂದಿಗೂ ಅಡವಿ ಸ್ಥಳಗಳಾಗುವುವೆಂದೂ, ನನ್ನ ಮೇಲೆ ಪ್ರಮಾಣ ಮಾಡಿಕೊಂಡಿದ್ದೇನೆ,” ಎಂದು ಯೆಹೋವ ದೇವರು ಅನ್ನುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 49:13
21 ತಿಳಿವುಗಳ ಹೋಲಿಕೆ  

ಆತನು ಬೊಚ್ರದಲ್ಲಿ ಮತ್ತು ಎದೋಮಿನಲ್ಲಿ ಕೊಲ್ಲುವ ಸಮಯವನ್ನು ನಿರ್ಧರಿಸಿರುತ್ತಾನೆ. ಯೆಹೋವನ ಖಡ್ಗವು ವಪೆಯಿಂದಲೂ, ಕುರಿಹೋತಗಳ ರಕ್ತದಿಂದಲೂ, ಟಗರುಗಳ ಪಿತ್ತಕೋಶದ ಕೊಬ್ಬಿನಿಂದಲೂ ರಕ್ತಭರಿತವಾಗಿದೆ.


ಬೆಲಗನು ಸತ್ತಮೇಲೆ, ಯೋಬಾಬನು ರಾಜನಾದನು. ಯೋಬಾಬನು ಬೊಚ್ರದವನಾದ ಚೆರಹನ ಮಗನು.


“ನೀನು ನನಗೋಸ್ಕರವಾಗಿ ನಿನ್ನ ಒಬ್ಬನೇ ಮಗನನ್ನು ವಧಿಸಲು ಸಿದ್ಧನಾಗಿದ್ದೆ. ಆದ್ದರಿಂದ ನಾನು ನಿನಗೆ ಈ ವಾಗ್ದಾನವನ್ನು ಮಾಡುತ್ತೇನೆ:


ನನ್ನ ಒಡೆಯನಾದ ಯೆಹೋವನು ತನ್ನ ಹೆಸರಿನ ಮೇಲೆ ಆಣೆಯಿಟ್ಟು ಈ ಮಾತುಗಳನ್ನು ನುಡಿದಿದ್ದಾನೆ. ಸರ್ವಶಕ್ತನಾದ ಯೆಹೋವನ ನುಡಿಗಳಿವು: “ಯಾಕೋಬನು ಹೆಚ್ಚಳಪಡುವಂಥವುಗಳನ್ನು ನಾನು ದ್ವೇಷಿಸುತ್ತೇನೆ. ಅವನ ಬಲವಾದ ಬುರುಜುಗಳನ್ನು ದ್ವೇಷಿಸುತ್ತೇನೆ. ಆದ್ದರಿಂದ ಶತ್ರುಗಳು ಬಂದು ಪಟ್ಟಣವನ್ನೂ ಪಟ್ಟಣದಲ್ಲಿರುವದೆಲ್ಲವನ್ನೂ ಸೂರೆಮಾಡುವಂತೆ ಮಾಡುವೆನು.”


ಆದ್ದರಿಂದ ನಾನು ತೇಮಾನಿನಲ್ಲಿ ಬೆಂಕಿಯನ್ನು ಹಾಕುವೆನು. ಆ ಬೆಂಕಿಯು ಬೋಚ್ರದ ಉನ್ನತ ಗೋಪುರಗಳನ್ನು ನಾಶಮಾಡುವದು.”


ಯೆಹೋವನು ತಾನು ಎರಗಬೇಕಾದ ಪ್ರಾಣಿಯ ಮೇಲೆ ಹಾರಾಡುವ ರಣಹದ್ದಿನಂತೆ ಇರುವನು. ಆತನು ಬೊಚ್ರ ನಗರದ ಮೇಲೆ ತನ್ನ ರೆಕ್ಕೆಗಳನ್ನು ಹರಡುವ ರಣಹದ್ದಿನಂತಿದ್ದಾನೆ. ಆ ಸಮಯದಲ್ಲಿ ಎದೋಮಿನ ಸೈನಿಕರು ಭಯಪಡುವರು. ಪ್ರಸವವೇದನೆಪಡುವ ಹೆಂಗಸಿನಂತೆ ಅವರು ಭಯದಿಂದ ಗೋಳಾಡುವರು.


ಆದರೆ, ಈಜಿಪ್ಟಿನಲ್ಲಿ ವಾಸಮಾಡುತ್ತಿರುವ ಎಲ್ಲಾ ಯೆಹೂದ್ಯರೇ, ಯೆಹೋವನ ಸಂದೇಶವನ್ನು ಕೇಳಿರಿ. ‘ನಾನು ಆಣೆಮಾಡಿ ಹೀಗೆ ಹೇಳುತ್ತೇನೆ. ಈಜಿಪ್ಟಿನಲ್ಲಿ ವಾಸಮಾಡುತ್ತಿರುವ ಯೆಹೂದಿಯರಲ್ಲಿ ಯಾರೊಬ್ಬರೂ ಇನ್ನು ಮುಂದೆ ನನ್ನ ಹೆಸರಿನ ಮೇಲೆ ಆಣೆಯಿಟ್ಟು ಹೇಳಲಾರರು ಎಂದು ನಾನು ನನ್ನ ಮಹತ್ತಾದ ನಾಮದ ಮೇಲೆ ಆಣೆಯಿಟ್ಟುಕೊಂಡು ಹೇಳುತ್ತೇನೆ. ಇನ್ನು ಮುಂದೆ ಎಂದೂ ಅವರು “ದೇವರ ಆಣೆಯಾಗಿ” ಎಂದು ಹೇಳಲಾರರು.


ಎದೋಮಿನಿಂದ ಬರುತ್ತಿರುವ ಇವನು ಯಾರು? ಅವನು ಬೊಜ್ರದಿಂದ ಬರುತ್ತಿದ್ದಾನೆ. ಆತನ ಬಟ್ಟೆಯು ಕಡುಕೆಂಪು ಬಣ್ಣದಿಂದ ತುಂಬಿದೆ. ತನ್ನ ಬಟ್ಟೆಯಲ್ಲಿ ಆತನು ಮಹಿಮಾಸ್ವರೂಪನಾಗಿ ಕಾಣುತ್ತಿದ್ದಾನೆ. ಆತನು ತನ್ನ ಬಲಸಾಮರ್ಥ್ಯಗಳಿಂದಾಗಿ ನೇರವಾಗಿ ನಡೆಯುತ್ತಿದ್ದಾನೆ. ಆತನು, “ನಾನು ಸತ್ಯವನ್ನೇ ಹೇಳುತ್ತೇನೆ, ನಿನ್ನನ್ನು ರಕ್ಷಿಸಲು ನನಗೆ ಸಾಮರ್ಥ್ಯ ಉಂಟು” ಎಂದು ಹೇಳುವನು.


“ನನ್ನ ಪರಾಕ್ರಮದಿಂದ ನಾನು ವಾಗ್ದಾನ ಮಾಡುತ್ತೇನೆ. ನನ್ನ ಆಜ್ಞೆಯು ನ್ಯಾಯವಾದದ್ದೂ ನೀತಿಯುಳ್ಳದ್ದೂ ಆಗಿದೆ. ಇಂಥದ್ದು ನಾನು ಆಜ್ಞಾಪಿಸಿದಂತೆಯೇ ಸಂಭವಿಸುವದು. ಎಲ್ಲಾ ಜನರು ನನ್ನ ಮುಂದೆ ಅಡ್ಡಬೀಳುವರೆಂದು ನಾನು ವಾಗ್ದಾನ ಮಾಡುತ್ತೇನೆ. ಪ್ರತಿಯೊಬ್ಬನೂ ನನ್ನನ್ನು ಹಿಂಬಾಲಿಸಲು ಪ್ರತಿಜ್ಞೆ ಮಾಡುವನು.


ಯಾಕೋಬನ ಸಂತತಿಯವರು ಬೆಂಕಿಯಂತಿರುವರು. ಯೋಸೇಫನ ಜನಾಂಗವು ಬೆಂಕಿಯ ನಾಲಗೆಗಳಂತೆ ಇರುವರು. ಆದರೆ ಏಸಾವಿನ ಜನಾಂಗ ಸುಟ್ಟ ಬೂದಿಯಂತಿರುವರು. ಯೆಹೂದದ ಜನರು ಎದೋಮನನ್ನು ಸುಟ್ಟುಹಾಕುವರು. ಯೆಹೂದದ ಜನರು ಎದೋಮನನ್ನು ನಾಶಮಾಡುವರು. ಆಗ ಏಸಾವಿನ ಜನರಲ್ಲಿ ಯಾರೂ ಉಳಿಯುವದಿಲ್ಲ.” ಯಾಕೆಂದರೆ ಇದು ದೇವರಾದ ಯೆಹೋವನ ಮಾತು.


ಈಜಿಪ್ಟ್ ಬರಿದಾಗುವದು. ಎದೋಮು ಬೆಂಗಾಡಾಗುವದು. ಯಾಕೆಂದರೆ ಅವರು ಯೆಹೂದದ ಜನರೊಂದಿಗೆ ಕ್ರೂರ ರೀತಿಯಲ್ಲಿ ವರ್ತಿಸಿದರು. ಅವರ ದೇಶಗಳಲ್ಲಿ ನಿರಪರಾಧಿಗಳನ್ನು ಕೊಂದರು.


ಬೆಳನು ಸತ್ತಾಗ ಜೆರಹನ ಮಗನಾದ ಯೋಬಾಬನು ಅರಸನಾದನು. ಇವನು ಬೊಚ್ರ ಎಂಬ ಊರಿನವನು.


ಆದ್ದರಿಂದ ಯೆಹೂದ್ಯರ ದೇಶವು ಬರಿದಾದ ಮರುಭೂಮಿಯಾಗುವುದು. ಜನರು ಇಲ್ಲಿಂದ ಹಾದುಹೋಗುವಾಗಲೆಲ್ಲಾ ಸಿಳ್ಳುಹಾಕಿ ತಲೆಯಾಡಿಸುವರು. ದೇಶವು ಹಾಳಾದುದನ್ನು ನೋಡಿ ಬೆರಗಾಗುವರು.


ನಾನು ಈ ನಗರವನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ. ಜೆರುಸಲೇಮಿನಿಂದ ಹಾದುಹೋಗುವಾಗ ಜನರು ಸಿಳ್ಳುಹಾಕಿ ತಲೆಯಾಡಿಸಿ ಹೋಗುವರು. ನಗರವು ಹಾಳಾಗಿರುವುದನ್ನು ಕಂಡು ಅವರು ಬೆರಗಾಗುವರು.


ಸರ್ವಶಕ್ತನಾದ ಯೆಹೋವನು ತನ್ನ ಮೇಲೆ ಆಣೆ ಇಟ್ಟುಕೊಂಡು ಹೀಗೆ ಹೇಳಿದ್ದಾನೆ: “ಬಾಬಿಲೋನೇ, ನಾನು ಖಂಡಿತವಾಗಿ ನಿನ್ನನ್ನು ವೈರಿ ಸೈನಿಕರಿಂದ ತುಂಬಿಸಿಬಿಡುವೆನು. ಅವರು ಮಿಡತೆಗಳ ಸಮೂಹದಂತೆ ವ್ಯಾಪಿಸುವರು. ಆ ಸೈನಿಕರು ನಿನ್ನ ವಿರುದ್ಧ ಯುದ್ಧದಲ್ಲಿ ಜಯಗಳಿಸುವರು. ಅವರು ನಿನ್ನ ಮೇಲೆ ನಿಂತುಕೊಂಡು ಜಯಘೋಷ ಮಾಡುವರು.”


ಕೆರೀಯೋತ್, ಬೊಚ್ರ ಮೊದಲಾದ ಮೋವಾಬಿನ ದೂರದ ಹತ್ತಿರದ ಎಲ್ಲಾ ಪಟ್ಟಣಗಳಿಗೆ ದಂಡನೆ ವಿಧಿಸಲಾಗಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು