Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 48:32 - ಪರಿಶುದ್ದ ಬೈಬಲ್‌

32 ನಾನು ಯೆಜ್ಜೇರಿನ ಜನರೊಂದಿಗೆ ಯೆಜ್ಜೇರಿಗಾಗಿ ಪ್ರಲಾಪಿಸುವೆನು. ಸಿಬ್ಮವೇ, ನಿನ್ನ ದ್ರಾಕ್ಷಿಬಳ್ಳಿಗಳು ಸಮುದ್ರದವರೆಗೂ ಹಬ್ಬಿದ್ದವು; ಅವು ಯೆಜ್ಜೇರ್ ಪಟ್ಟಣದವರೆಗೂ ಚಾಚಿದ್ದವು. ಆದರೆ ವಿನಾಶಕನು ನಿನ್ನ ಹಣ್ಣುಗಳನ್ನು ಮತ್ತು ದ್ರಾಕ್ಷಿಗಳನ್ನು ಕಿತ್ತುಕೊಂಡಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಸಿಬ್ಮದ ದ್ರಾಕ್ಷಾಲತೆಯೇ, ಯಜ್ಜೇರಿನ ನಿಮಿತ್ತ ಅಳುವುದಕ್ಕಿಂತಲೂ ನಿನ್ನನ್ನು ಕಂಡು ಹೆಚ್ಚಾಗಿ ಅಳುವೆನು; ನಿನ್ನ ಶಾಖೆಗಳು ಸಮುದ್ರದಾಚೆಗೂ ಯಜ್ಜೇರಿನ ಸರೋವರದವರೆಗೂ ವ್ಯಾಪಿಸಿದ್ದವಲ್ಲಾ; ಈಗ ನಿನ್ನ ಹಣ್ಣುಹಂಪಲುಗಳ ಮೇಲೆಯೂ ಮತ್ತು ದ್ರಾಕ್ಷಿಯ ಸುಗ್ಗಿಯ ಮೇಲೆಯೂ ಸೂರೆಗಾರನು ಬಿದ್ದಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ‘ಸಿಬ್ಮ’ದ ದ್ರಾಕ್ಷಾಲತೆಯೇ, ಯಜ್ಜೇರಿನ ನಿಮಿತ್ತ ದುಃಖಿಸುವುದಕ್ಕಿಂತಲು ನಿನ್ನನ್ನು ಕಂಡು ಹೆಚ್ಚಾಗಿ ದುಃಖಿಸುತ್ತೇನೆ. ನಿನ್ನ ಶಾಖೆಗಳು ಸಮುದ್ರದಾಚೆಗೂ ಯಜ್ಜೇರಿನ ಸರೋವರದವರೆಗೂ ವ್ಯಾಪಿಸಿವೆ. ಈಗ ನಿನ್ನ ಹಣ್ಣುಹಂಪಲುಗಳ ಮೇಲೆ ಹಾಗು ದ್ರಾಕ್ಷೆಯ ಸುಗ್ಗಿಯ ಮೇಲೆ ಸೂರೆಗಾರ ಬಂದೆರಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಸಿಬ್ಮದ ದ್ರಾಕ್ಷಾಲತೆಯೇ, ಯಜ್ಜೇರಿನ ನಿವಿುತ್ತ ಅಳುವದಕ್ಕಿಂತಲೂ ನಿನ್ನನ್ನು ಕಂಡು ಹೆಚ್ಚಾಗಿ ಅಳುವೆನು; ನಿನ್ನ ಶಾಖೆಗಳು ಸಮುದ್ರದಾಚೆಗೂ ಯಜ್ಜೇರಿನ ಸರೋವರದವರೆಗೂ ವ್ಯಾಪಿಸಿದ್ದವಲ್ಲಾ; ಈಗ ನಿನ್ನ ಹಣ್ಣುಹಂಪಲ ಮೇಲೆಯೂ ದ್ರಾಕ್ಷೆಯ ಸುಗ್ಗಿಯ ಮೇಲೆಯೂ ಸೂರೆಗಾರನು ಬಿದ್ದಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ಸಿಬ್ಮದ ದ್ರಾಕ್ಷಾಲತೆಯೇ, ಯಜ್ಜೇರಿನ ನಿಮಿತ್ತ ಅಳುವುದಕ್ಕಿಂತಲು ನಿನ್ನ ನಿಮಿತ್ತವಾಗಿ ಅಳುವೆನು; ನಿನ್ನ ಬಳ್ಳಿಗಳು ಸಮುದ್ರವನ್ನು ದಾಟಿದವು. ಯಜ್ಜೇರಿನ ಸಮುದ್ರಕ್ಕೆ ಮುಟ್ಟಿದವು; ನಿನ್ನ ಹಣ್ಣುಗಳ ಮೇಲೆಯೂ, ನಿನ್ನ ದ್ರಾಕ್ಷಿ ಸುಗ್ಗಿಯ ಮೇಲೆಯೂ ವಿನಾಶ ಮಾಡುವವನು ಬಿದ್ದಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 48:32
13 ತಿಳಿವುಗಳ ಹೋಲಿಕೆ  

ಮೋಶೆಯು ಯಗ್ಜೇರ್ ಪಟ್ಟಣದ ಗುಟ್ಟನ್ನು ತಿಳಿದುಕೊಂಡು ಬರುವುದಕ್ಕೆ ಕೆಲವು ಜನರನ್ನು ಕಳುಹಿಸಿದ ನಂತರ, ಇಸ್ರೇಲರು ಆ ಪಟ್ಟಣವನ್ನು ವಶಪಡಿಸಿಕೊಂಡರು. ಅದರ ಸುತ್ತಲಿರುವ ಚಿಕ್ಕ ಪಟ್ಟಣಗಳನ್ನು ಅವರು ವಶಪಡಿಸಿಕೊಂಡರು. ಇಸ್ರೇಲರು ಅಲ್ಲಿದ್ದ ಅಮೋರಿಯರನ್ನು ಓಡಿಸಿದರು.


ಕಣಿವೆಯಲ್ಲಿರುವ ಪ್ರದೇಶ, ಬೆಟ್ಟದ ಮೇಲಿನ ಕಿರ್ಯಾತಯಿಮ್, ಸಿಬ್ಮಾ, ಚೆರೆತ್‌ಶಹರ್,


“ದೀಬೋನ್‌ನಲ್ಲಿ ವಾಸಿಸುವ ಜನರೇ, ನಿಮ್ಮ ಗೌರವಾನಿಬತ ಸ್ಥಳದಿಂದ ಕೆಳಗಿಳಿದು ಬನ್ನಿ. ನೆಲದ ಮೇಲೆ ಧೂಳಿನಲ್ಲಿ ಕುಳಿತುಕೊಳ್ಳಿ. ಏಕೆಂದರೆ, ಧ್ವಂಸಕನು ಬರುತ್ತಿದ್ದಾನೆ. ನಿಮ್ಮ ಭದ್ರವಾದ ನಗರಗಳನ್ನು ಅವನು ಹಾಳುಮಾಡುತ್ತಾನೆ.


ವೈರಿಯು ಮೋವಾಬಿನ ಮೇಲೆ ಧಾಳಿ ಮಾಡುವನು. ವೈರಿಯು ಆ ಪಟ್ಟಣಗಳಲ್ಲಿ ಪ್ರವೇಶಮಾಡಿ ಅವುಗಳ ಧ್ವಂಸ ಮಾಡುವನು. ಅವಳ ಅತ್ಯುತ್ತಮ ತರುಣರು ಕೊಲೆಗೀಡಾಗುವರು.” ಈ ಸಂದೇಶವು ರಾಜನಿಂದ ಬಂದಿದೆ. ಆ ರಾಜನ ಹೆಸರು ಸರ್ವಶಕ್ತನಾದ ಯೆಹೋವನು ಎಂದು.


ಪ್ರತಿಯೊಂದು ಪಟ್ಟಣದ ಮೇಲೆ ವಿನಾಶಕನು ಧಾಳಿ ಮಾಡುವನು. ಒಂದು ಪಟ್ಟಣವೂ ತಪ್ಪಿಸಿಕೊಳ್ಳಲಾರದು. ಇಳಿಜಾರು ಪ್ರದೇಶವನ್ನು ನಾಶಪಡಿಸಲಾಗುವುದು. ಎತ್ತರದಲ್ಲಿದ್ದ ಪ್ರದೇಶವನ್ನು ಹಾಳುಮಾಡಲಾಗುವುದು. ಇದನ್ನು ಯೆಹೋವನೇ ಹೇಳಿರುವುದರಿಂದ ನೆರವೇರುವುದು.


ನಾನು ಸ್ವತಃ ಮಿಚ್ಫದಲ್ಲಿ ವಾಸಮಾಡುತ್ತೇವೆ. ಇಲ್ಲಿಗೆ ಬರುವ ಕಸ್ದೀಯರ ಮುಂದೆ ನಿಮ್ಮ ಪರವಾಗಿ ಮಾತನಾಡುತ್ತೇನೆ. ಆ ಕೆಲಸವನ್ನು ನೀವು ನನಗೆ ಬಿಟ್ಟುಬಿಡಿ. ನೀವು ದ್ರಾಕ್ಷಾರಸ, ಹಣ್ಣು ಮತ್ತು ಎಣ್ಣೆ ಇವುಗಳನ್ನು ಸಂಗ್ರಹಿಸಿ ನಿಮ್ಮ ಪಾತ್ರೆಗಳಲ್ಲಿ ತುಂಬಿಸಿಟ್ಟು ನೀವು ಹಿಡಿದುಕೊಂಡ ಪಟ್ಟಣಗಳಲ್ಲಿ ವಾಸಿಸಿರಿ.”


ಹೆಷ್ಬೋನ್, ಯಗ್ಜೇರ್ ಪಟ್ಟಣಗಳನ್ನು ಕೊಟ್ಟರು. ಒಟ್ಟಿನಲ್ಲಿ ಗಾದ್ಯರು ಅವರಿಗೆ ನಾಲ್ಕು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಪ್ರತಿಯೊಂದು ಪಟ್ಟಣಗಳ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು.


ಅಟ್ರೋತ್ಷೋಫಾನ್, ಯಗ್ಜೇರ್, ಯೊಗ್ಬೆಹಾ, ಬೇತ್ನಿಮ್ರಾ,


ರೂಬೇನ್ ಕುಲದವರಿಗೂ ಗಾದ್ ಕುಲದವರಿಗೂ ಬಹಳ ದನಕುರಿಗಳಿದ್ದವು. ಅವರು ಯಗ್ಜೇರ್ ಮತ್ತು ಗಿಲ್ಯಾದ್ ಪ್ರದೇಶಗಳನ್ನು ನೋಡಿದಾಗ ಅವು ಅವರ ಪಶುಗಳ ಮೇವಿಗೆ ಒಳ್ಳೆಯ ಸ್ಥಳವೆಂದು ತಿಳಿದುಕೊಂಡರು.


ಮೋಶೆ ಅವರಿಗೆ ಯಗ್ಜೇರಿನ ಪ್ರದೇಶ ಮತ್ತು ಗಿಲ್ಯಾದಿನ ಎಲ್ಲ ಪಟ್ಟಣಗಳನ್ನೂ ರಬ್ಬಾದ ಹತ್ತಿರವಿದ್ದ ಅರೋಯೇರ್‌ವರೆಗಿನ ಅಮ್ಮೋನಿಯರ ಅರ್ಧಪ್ರದೇಶವನ್ನು ಕೊಟ್ಟನು.


“ಯೆಹೋವನು ಇಸ್ರೇಲರಿಗೆ ಅಧೀನಪಡಿಸಿದ ಈ ಪ್ರದೇಶವು ಅಂದರೆ, ಅಟಾರೋತ್, ದೀಬೋನ್, ಯಗ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬೆಯೋನ್ ಎಂಬ ಪಟ್ಟಣಗಳ ಪ್ರದೇಶವು ಪಶುಗಳ ಮೇವಿಗೆ ಒಳ್ಳೆಯ ಸ್ಥಳವಾಗಿದೆ. ನಿಮ್ಮ ದಾಸರಾದ ನಮಗೆ ಬಹಳ ಪಶುಗಳು ಇವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು