ಯೆರೆಮೀಯ 48:11 - ಪರಿಶುದ್ದ ಬೈಬಲ್11 “ಮೋವಾಬಿಗೆ ಕಷ್ಟವೆಂಬುದೇ ಗೊತ್ತಿಲ್ಲ. ಮೋವಾಬ್ ಮಡ್ಡಿ ತಂಗಿಸಲು ಬಿಟ್ಟ ದ್ರಾಕ್ಷಾರಸದಂತಿದೆ. ಅದನ್ನು ಒಂದು ಪಾತ್ರೆಯಿಂದ ಮತ್ತೊಂದು ಪಾತ್ರೆಗೆ ಒಮ್ಮೆಯೂ ಸುರಿದಿಲ್ಲ. ಅದನ್ನು ಒಮ್ಮೆಯೂ ಸೆರೆಹಿಡಿದಿಲ್ಲ. ಆದ್ದರಿಂದ ಅದರ ರುಚಿ ಮೊದಲಿದ್ದ ಹಾಗೆ ಇದೆ. ಅದರ ವಾಸನೆಯಲ್ಲಿ ಬದಲಾವಣೆಯಾಗಿಲ್ಲ.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಮೋವಾಬು ಚಿಕ್ಕಂದಿಂದಲೂ ನೆಮ್ಮದಿಯಾಗಿದೆ; ಅದು ಮಡ್ಡಿಯ ಮೇಲೆ ನಿಂತಿರುವ ದ್ರಾಕ್ಷಾರಸದಂತಿದೆ; ಅದನ್ನು ಪಾತ್ರೆಯಿಂದ ಪಾತ್ರೆಗೆ ಯಾರೂ ಹೊಯ್ಯಲಿಲ್ಲ, ಅದು ಸೆರೆಹೋಗಲಿಲ್ಲ; ಆದಕಾರಣ ಅದರ ರುಚಿಯು ಅದರಲ್ಲಿದೆ, ಅದರ ವಾಸನೆಯು ಬೇರ್ಪಡಲಿಲ್ಲ.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ಮೋವಾಬು ಚಿಕ್ಕತನದಿಂದಲೂ ನೆಮ್ಮದಿಯಾಗಿದೆ. ಅದು ಮಡ್ಡಿಯ ಮೇಲೆ ನಿಂತಿರುವ ದ್ರಾಕ್ಷಾರಸದಂತಿದೆ. ಅದನ್ನು ಪಾತ್ರೆಯಿಂದ ಪಾತ್ರೆಗೆ ಯಾರೂ ಹೊಯ್ಯಲಿಲ್ಲ. ಅದು ಎಂದೂ ಸೆರೆಹೋಗಲಿಲ್ಲ. ಆದಕಾರಣ ಅದರ ರುಚಿ ಅದರಲ್ಲಿದೆ. ಅದರ ವಾಸನೆ ಮಾರ್ಪಡಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ಮೋವಾಬು ಚಿಕ್ಕತನದಿಂದಲೂ ನೆಮ್ಮದಿಯಾಗಿದೆ; ಅದು ಮಡ್ಡಿಯ ಮೇಲೆ ನಿಂತಿರುವ ದ್ರಾಕ್ಷಾರಸದಂತಿದೆ; ಅದನ್ನು ಪಾತ್ರೆಯಿಂದ ಪಾತ್ರೆಗೆ ಯಾರೂ ಹೊಯ್ಯಲಿಲ್ಲ, ಅದು ಸೆರೆಹೋಗಲಿಲ್ಲ; ಆದಕಾರಣ ಅದರ ರುಚಿಯು ಅದರಲ್ಲಿದೆ, ಅದರ ವಾಸನೆಯು ಬೇರ್ಪಡಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 “ಮೋವಾಬು ತನ್ನ ಚಿಕ್ಕಂದಿನಿಂದ ಸುಖವಾಗಿತ್ತು; ಅದು ತನ್ನ ಮಡ್ಡಿಯ ಮೇಲೆ ನಿಂತಿರುವ ದ್ರಾಕ್ಷಾರಸದಂತೆ ಸುಮ್ಮನೆ ಇತ್ತು; ಒಂದು ಪಾತ್ರೆಯೊಳಗಿಂದ ಮತ್ತೊಂದು ಪಾತ್ರೆಗೆ ಹೊಯ್ಯಲಾಗುವುದಿಲ್ಲ; ಸೆರೆಗೆ ಹೋಗಲಿಲ್ಲ; ಆದ್ದರಿಂದ ಅದರ ರುಚಿ ಅದರಲ್ಲಿ ಉಂಟು; ಅದರ ವಾಸನೆ ಬೇರೆ ಆಗಲಿಲ್ಲ. ಅಧ್ಯಾಯವನ್ನು ನೋಡಿ |
“ಹಿಂದಿನ ಕಾಲದಲ್ಲಿ, ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ನಮ್ಮನ್ನು ಹಾಳುಮಾಡಿದನು; ನಮ್ಮನ್ನು ಹಿಂಸಿಸಿದನು; ನಮ್ಮ ಜನರನ್ನು ಸೆರೆ ಒಯ್ದನು. ಆಗ ನಾವು ಒಂದು ಬರಿದಾದ ಪಾತ್ರೆಯಂತಾದೆವು. ಅವನು ನಮ್ಮ ಎಲ್ಲಾ ಉತ್ತಮ ವಸ್ತುಗಳನ್ನು ತೆಗೆದುಕೊಂಡು ಹೋದನು. ತನಗೆ ತೃಪ್ತಿಯಾಗುವವರೆಗೆ ಎಲ್ಲವನ್ನು ತಿಂದು ತೇಗಿದ ರಾಕ್ಷಸನಂತಿದ್ದನು. ಅವನು ನಮ್ಮೆಲ್ಲ ಉತ್ಕೃಷ್ಠ ವಸ್ತುಗಳನ್ನು ಕಿತ್ತುಕೊಂಡು ನಮ್ಮನ್ನು ದೂರ ಎಸೆದನು.