8 ಭೋರ್ಗರೆಯುವ ನೈಲ್ ನದಿಯಂತೆ ಈಜಿಪ್ಟ್ ಬರುತ್ತಿದೆ. ಬಲಿಷ್ಠವಾಗಿಯೂ ಮತ್ತು ರಭಸವಾಗಿಯೂ ಹರಿಯುವ ನದಿಯಂತೆ ಬರುತ್ತಿದೆ. ‘ನಾನು ಬಂದು ಭೂಮಿಯ ಮೇಲೆಲ್ಲ ವ್ಯಾಪಿಸಿಕೊಳ್ಳುವೆನು. ನಾನು ನಗರಗಳನ್ನೂ ಅಲ್ಲಿದ್ದ ಜನರನ್ನೂ ನಾಶಮಾಡುವೆನು’ ಎಂದು ಈಜಿಪ್ಟ್ ಹೇಳುತ್ತಿದೆ.
8 ಐಗುಪ್ತವೇ ನೈಲ್ ನದಿಯಂತೆ ಉಬ್ಬಿದೆ; ಐಗುಪ್ತವೆಂಬ ಪ್ರವಾಹವೇ ನೈಲ್ ನದಿಯ ಶಾಖೆಗಳ ಹಾಗೆ ತುಂಬಿ ತುಳುಕುತ್ತದೆ; ‘ನಾನು ಉಬ್ಬಿಕೊಂಡು ಲೋಕದಲ್ಲೆಲ್ಲಾ ಹಬ್ಬುವೆನು, ಪಟ್ಟಣವನ್ನು ಪಟ್ಟಣದ ನಿವಾಸಿಗಳನ್ನು ನಾಶಮಾಡುವೆನು’ ಅಂದುಕೊಳ್ಳುತ್ತದೆ.
8 ಈಜಿಪ್ಟ್ ನದಿ ಉಬ್ಬಿದೆ, ನೈಲ್ ನದಿಯಂತೆ ಈಜಿಪ್ಟೆಂಬ ಪ್ರವಾಹವೇ ತುಂಬಿ ತುಳುಕುತ್ತಿದೆ ನೈಲಿನ ಶಾಖೆಗಳಂತೆ, ‘ನಾನು ಉಬ್ಬಿಕೊಂಡು ಲೋಕದೊಳಗೆಲ್ಲಾ ಹಬ್ಬುವೆನು ನಗರಗಳನ್ನೂ ಅವುಗಳ ನಿವಾಸಿಗಳನ್ನೂ ನಾಶಮಾಡುವೆನು’ ಎಂದುಕೊಳ್ಳುತ್ತಿರುವುದು.
8 ಈಜಿಪ್ಟ್ ನೈಲ್ ನದಿಯ ಪ್ರಳಯದ ಹಾಗೆ ಏರುತ್ತದೆ; ಅದರ ನೀರು ನದಿಗಳ ಹಾಗೆ ಕದಲುತ್ತವೆ; ‘ನಾನು ಏರುತ್ತೇನೆ, ಭೂಮಿಯನ್ನು ಮುಚ್ಚುತ್ತೇನೆ; ಪಟ್ಟಣವನ್ನೂ, ಅದರ ನಿವಾಸಿಗಳನ್ನೂ ನಾಶಮಾಡುತ್ತೇನೆ,’ ಎಂದು ಅವಳು ಹೇಳುತ್ತಾಳೆ.
“ನರಪುತ್ರನೇ, ಈಜಿಪ್ಟಿನ ರಾಜನಾದ ಫರೋಹನಿಗೆ ಈ ಶೋಕಗೀತೆಯನ್ನು ಹಾಡು. ಅವನಿಗೆ ಹೀಗೆ ಹೇಳು: “‘ಜನಾಂಗಗಳ ಮಧ್ಯೆ ಹೆಮ್ಮೆಯಿಂದ ನಡೆದಾಡುತ್ತಿರುವ ಮೃಗರಾಜನಂತೆ ನೀನಿರುವೆ ಎಂದು ನೀನು ಭಾವಿಸಿದ್ದೆ. ಆದರೆ ನಿಜವಾಗಿಯೂ ನೀನು ಸರೋವರದಲ್ಲಿರುವ ಪೇರ್ಮೊಸಳೆಯಾಗಿರುವೆ. ನೀರಿನ ಹೊಳೆಗಳಲ್ಲಿ ನೀನು ನಿನ್ನ ದಾರಿಯನ್ನು ಮಾಡುವೆ. ನಿನ್ನ ಕಾಲುಗಳಿಂದ ಆ ನೀರನ್ನು ನೀನು ಕೆಸರಾಗಿ ಮಾಡುವೆ. ನೀನು ಈಜಿಪ್ಟಿನ ಹೊಳೆಗಳನ್ನು ಕದಡಿಸುವೆ.’”
‘ನನ್ನ ಒಡೆಯನಾದ ಯೆಹೋವನು ಹೀಗೆ ಹೇಳಿದ್ದಾನೆ ಎಂದು ಅವರಿಗೆ ತಿಳಿಸು, “‘ಈಜಿಪ್ಟಿನ ರಾಜನಾದ ಫರೋಹನೇ, ನಾನು ನಿನಗೆ ವಿರುದ್ಧವಾಗಿದ್ದೇನೆ. ನೀನು ನೈಲ್ ನದಿಯ ದಡದಲ್ಲಿ ಮಲಗಿರುವ ಪೇರ್ಮೊಸಳೆ, “ಇದು ನಾನು ನಿರ್ಮಿಸಿದ ಹೊಳೆ” ಎಂದು ನೀನು ಹೇಳಿಕೊಳ್ಳುವೆ.
“ಉತ್ತರದ ರಾಜನ ಮಗನು ಯುದ್ಧದ ಸಿದ್ಧತೆಯನ್ನು ಮಾಡುವನು. ಅವರಿಬ್ಬರೂ ಸೇರಿ ಒಂದು ದೊಡ್ಡ ಸೈನ್ಯವನ್ನು ಕೂಡಿಸುವರು. ಆ ಸೈನ್ಯವು ರಭಸದಿಂದ ಬಂದ ಪ್ರವಾಹದಂತೆ ದೇಶದಲ್ಲೆಲ್ಲ ಸಂಚರಿಸಿ ಯುದ್ಧ ಮಾಡುತ್ತಾ ದಕ್ಷಿಣ ರಾಜನ ದುರ್ಗದವರೆಗೆ ನುಗ್ಗುವದು.