ಯೆರೆಮೀಯ 45:5 - ಪರಿಶುದ್ದ ಬೈಬಲ್5 ಬಾರೂಕನೇ, ನೀನು ದೊಡ್ಡ ಪದವಿಯನ್ನು ನಿರೀಕ್ಷಿಸುತ್ತಿರುವೆ. ಆದರೆ ನೀನು ಅದನ್ನು ನಿರೀಕ್ಷಿಸಬೇಡ. ಏಕೆಂದರೆ ನಾನು ಎಲ್ಲರಿಗೆ ಭಯಂಕರವಾದ ಸಂಗತಿಗಳನ್ನು ಬರಮಾಡುವೆನು.”’ ಯೆಹೋವನು ಹೀಗೆ ಹೇಳಿದನು, ‘ನೀನು ಅನೇಕ ಸ್ಥಳಗಳಿಗೆ ಹೋಗಬೇಕಾಗಬಹುದು. ಅದರೆ ನೀನು ಎಲ್ಲಿ ಹೋದರೂ ಪ್ರಾಣ ಉಳಿಸಿಕೊಂಡು ಪಾರಾಗುವಂತೆ ನಾನು ಮಾಡುತ್ತೇನೆ.’” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಮಹಾಪದವಿಯನ್ನು ನಿರೀಕ್ಷಿಸಿಕೊಳ್ಳುತ್ತೀಯೋ? ನಿರೀಕ್ಷಿಸ ಬೇಡ; ಆಹಾ, ನಾನು ನರಜನ್ಮದವರೆಲ್ಲರಿಗೂ ಕೇಡನ್ನು ಉಂಟುಮಾಡುವೆನು; ಆದರೆ ನೀನು ಎಲ್ಲಿಗೆ ಹೋದರೂ ಪ್ರಾಣವೊಂದನ್ನೇ ಉಳಿಸಿಕೊಳ್ಳುವುದಕ್ಕೆ ನಿನಗೆ ಅವಕಾಶ ಕೊಡುವೆನು. ಇದು ಯೆಹೋವನಾದ ನನ್ನ ನುಡಿ.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ನಿನಗೆ ಮಾತ್ರ ಪ್ರತ್ಯೇಕ ಸ್ಥಾನಮಾನಗಳನ್ನು ನಿರೀಕ್ಷಿಸುತ್ತಿಯೋ? ನಿರೀಕ್ಷಿಸಬೇಡ. ಹೌದು, ಮಾನವ ಜನಾಂಗವನ್ನೇ ನಾನು ದಂಡಿಸಲಿದ್ದೇನೆ. ಆದರೆ ನೀನು ಎಲ್ಲಿಗೆ ಹೋದರೂ ನಿನ್ನ ಪ್ರಾಣವೊಂದನ್ನು ಕೊಳ್ಳೆಯಂತೆ ಉಳಿಸಿಕೊಳ್ಳಲಿಕ್ಕೆ ಅವಕಾಶ ನೀಡುತ್ತೇನೆ. ಇದು ಸರ್ವೇಶ್ವರನಾದ ನನ್ನ ನುಡಿ.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಮಹಾಪದವಿಯನ್ನು ನಿರೀಕ್ಷಿಸಿಕೊಳ್ಳುತ್ತೀಯೋ? ನಿರೀಕ್ಷಿಸಬೇಡ; ಆಹಾ, ನಾನು ನರಜನ್ಮದವರೆಲ್ಲರಿಗೂ ಕೇಡನ್ನುಂಟುಮಾಡುವೆನು; ಆದರೆ ನೀನು ಎಲ್ಲಿಗೆ ಹೋದರೂ ಪ್ರಾಣವೊಂದನ್ನೇ ಬಾಚಿಕೊಂಡುಹೋಗುವದಕ್ಕೆ ನಿನಗೆ ಅವಕಾಶಕೊಡುವೆನು. ಇದು ಯೆಹೋವನಾದ ನನ್ನ ನುಡಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಹಾಗಾದರೆ ನೀನು ನಿನಗೋಸ್ಕರ ದೊಡ್ಡವುಗಳನ್ನು ಹುಡುಕುತ್ತೀಯೋ? ಹುಡುಕಬೇಡ. ನಾನು ಎಲ್ಲಾ ಶರೀರದ ಮೇಲೆ ಕೇಡನ್ನು ತರುತ್ತೇನೆಂದು ಯೆಹೋವ ದೇವರು ಹೇಳುತ್ತಾರೆ. ಆದರೂ ನೀನು ಹೋಗುವ ಎಲ್ಲಾ ಸ್ಥಳಗಳಲ್ಲಿ ನಿನ್ನ ಪ್ರಾಣವನ್ನು ನೀನು ಉಳಿಸಿಕೊಳ್ಳುವಂತೆ ಮಾಡುವೆನು, ಎಂದು ನಿನಗೆ ಹೇಳಿದ್ದಾರೆ,’ ಎಂದನು.” ಅಧ್ಯಾಯವನ್ನು ನೋಡಿ |
ಯೆಹೋವನು ಹೀಗೆ ಹೇಳುತ್ತಾನೆ: “ನನ್ನನ್ನು ಕಾದುಕೊಂಡಿರಿ. ನೀವು ನನ್ನ ನ್ಯಾಯತೀರ್ಪಿನ ತನಕ ಕಾದುಕೊಂಡಿರಿ. ನಾನು ಬೇರೆ ಜನಾಂಗಗಳನ್ನು ಇಲ್ಲಿಗೆ ಕರೆದು ನಿಮ್ಮನ್ನು ಶಿಕ್ಷಿಸುವಂತೆ ಮಾಡುವ ಹಕ್ಕು ನನಗಿದೆ. ನಿಮ್ಮ ಮೇಲೆ ನನಗಿರುವ ಸಿಟ್ಟು ತೋರಿಸಲು ನಾನು ಆ ಜನಾಂಗಗಳನ್ನು ಉಪಯೋಗಿಸುವೆನು. ನಿಮ್ಮ ಮೇಲೆ ನಾನು ಎಷ್ಟರಮಟ್ಟಿಗೆ ಕೋಪಗೊಂಡಿದ್ದೇನೆ ಎಂದು ಅವರ ಮೂಲಕ ನಿಮಗೆ ತಿಳಿದುಬರುವುದು. ಆಗ ಇಡೀ ದೇಶವೇ ನಾಶವಾಗುವುದು.