ಯೆರೆಮೀಯ 44:9 - ಪರಿಶುದ್ದ ಬೈಬಲ್9 ನಿಮ್ಮ ಪೂರ್ವಿಕರು ಮಾಡಿದ್ದ ದುಷ್ಟತನವನ್ನು ನೀವು ಮರೆತುಬಿಟ್ಟಿರಾ? ಯೆಹೂದದ ರಾಜರು ಮತ್ತು ರಾಣಿಯರು ಮಾಡಿದ್ದ ದುಷ್ಟತನವನ್ನು ನೀವು ಮರೆತುಬಿಟ್ಟಿರುವಿರಾ? ನೀವು ಮತ್ತು ನಿಮ್ಮ ಪತ್ನಿಯರು ಯೆಹೂದದಲ್ಲಿ ಮತ್ತು ಜೆರುಸಲೇಮಿನ ಬೀದಿಗಳಲ್ಲಿ ಮಾಡಿದ ದುಷ್ಟತನವನ್ನು ಮರೆತುಬಿಟ್ಟಿರಾ? ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ನಿಮ್ಮ ಪೂರ್ವಿಕರು, ಯೆಹೂದದ ಅರಸರು, ಅವರ ಹೆಂಡತಿಯರು, ನೀವು ಮತ್ತು ನಿಮ್ಮ ಹೆಂಡತಿಯರು ಇವರೆಲ್ಲರೂ ಯೆಹೂದ ದೇಶದಲ್ಲಿಯೂ, ಯೆರೂಸಲೇಮಿನ ಬೀದಿಗಳಲ್ಲಿಯೂ ನಡೆಸಿದ ದುರಾಚಾರಗಳನ್ನು ಮರೆತುಬಿಟ್ಟಿರೋ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ನಿಮ್ಮ ಪೂರ್ವಜರು, ಜುದೇಯದ ಅರಸರು, ಅವರ ಪತ್ನಿಯರು, ನೀವು, ನಿಮ್ಮ ಹೆಂಡತಿಯರು, ಇವರೆಲ್ಲರು ಜುದೇಯದ ನಾಡಿನಲ್ಲೂ ಜೆರುಸಲೇಮಿನ ಹಾದಿಬೀದಿಗಳಲ್ಲೂ ನಡೆಸಿದ ದುರಾಚಾರಗಳನ್ನು ನೀವು ಮರೆತುಬಿಟ್ಟಿರೋ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ನಿಮ್ಮ ಪಿತೃಗಳು, ಯೆಹೂದದ ಅರಸರು, ಅವರ ಹೆಂಡಿರು, ನೀವು, ನಿಮ್ಮ ಹೆಂಡಿರು, ಇವರೆಲ್ಲರೂ ಯೆಹೂದದೇಶದಲ್ಲಿಯೂ ಯೆರೂಸಲೇವಿುನ ಬೀದಿಗಳಲ್ಲಿಯೂ ನಡಿಸಿದ ದುರಾಚಾರಗಳನ್ನು ಮರೆತುಬಿಟ್ಟಿರೋ? ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಯೆಹೂದ ದೇಶದಲ್ಲಿಯೂ, ಯೆರೂಸಲೇಮಿನ ಬೀದಿಗಳಲ್ಲಿಯೂ ಅವರು ಮಾಡಿದಂಥ, ನಿಮ್ಮ ಪಿತೃಗಳು ಕೆಟ್ಟತನಗಳನ್ನೂ, ಯೆಹೂದದ ಅರಸರ ಕೆಟ್ಟತನಗಳನ್ನೂ, ಅವರ ಹೆಂಡತಿಯರ ಕೆಟ್ಟತನಗಳನ್ನೂ, ನಿಮ್ಮ ಸ್ವಂತ ಕೆಟ್ಟತನಗಳನ್ನೂ, ನಿಮ್ಮ ಹೆಂಡತಿಯರ ಕೆಟ್ಟತನಗಳನ್ನೂ ಮರೆತು ಬಿಟ್ಟಿದ್ದೀರೋ? ಅಧ್ಯಾಯವನ್ನು ನೋಡಿ |