ಯೆರೆಮೀಯ 44:14 - ಪರಿಶುದ್ದ ಬೈಬಲ್14 ಈಜಿಪ್ಟಿಗೆ ವಲಸೆ ಹೋದ ಕೆಲವೇ ಯೆಹೂದದ ಜನರು ಅಳಿದುಳಿದವರಾಗಿದ್ದಾರೆ. ಒಬ್ಬನೂ ಕೂಡ ನನ್ನ ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾರನು. ಅವರಲ್ಲಿ ಒಬ್ಬನೂ ಜೀವಂತವಾಗಿ ಯೆಹೂದಕ್ಕೆ ಹಿಂತಿರುಗಿ ಬರಲಾರನು. ಆ ಜನರು ಯೆಹೂದಕ್ಕೆ ಹಿಂತಿರುಗಿ ಬಂದು ಅಲ್ಲಿ ವಾಸಮಾಡಬಯಸುವರು, ಆದರೆ ತಪ್ಪಿಸಿಕೊಂಡ ಸ್ವಲ್ಪ ಜನರನ್ನು ಬಿಟ್ಟು ಮಿಕ್ಕವರಾರೂ ಯೆಹೂದಕ್ಕೆ ಹಿಂತಿರುಗುವದಿಲ್ಲ.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ಐಗುಪ್ತಕ್ಕೆ ಹೋಗಿ ಪ್ರವಾಸ ಮಾಡುತ್ತಿರುವ ಯೆಹೂದದ ಉಳಿದ ಜನರು ಸ್ವದೇಶಕ್ಕೆ ಹಿಂದಿರುಗಬೇಕೆಂದು ಎಷ್ಟು ಆಶಿಸಿದರೂ ಅವರಲ್ಲಿ ಯಾರೂ ಉಳಿದು ಅಲ್ಲಿಂದ ತಪ್ಪಿಸಿಕೊಂಡು ಯೆಹೂದಕ್ಕೆ ಹಿಂದಿರುಗುವುದಿಲ್ಲ; ಓಡಿಬರುವ ಸ್ವಲ್ಪ ಜನರೇ ಹೊರತು ಯಾರೂ ಹಿಂದಿರುಗುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ಈಜಿಪ್ಟಿಗೆ ಹೋಗಿ ಪ್ರವಾಸಿಸುತ್ತಿರುವ ಆ ಜುದೇಯದ ಅಳಿದುಳಿದ ಜನರು ಸ್ವದೇಶಕ್ಕೆ ಹಿಂದಿರುಗಬೇಕೆಂದು ಎಷ್ಟು ಆಶಿಸಿದರೂ ಅವರಲ್ಲಿ ಯಾರೂ ಅಲ್ಲಿಂದ ತಪ್ಪಿಸಿಕೊಂಡು ಜುದೇಯಕ್ಕೆ ಹಿಂದಿರುಗಿದರು. ಕೆಲವು ನಿರಾಶ್ರಿತರನ್ನು ಬಿಟ್ಟರೆ ಯಾವನೂ ಹಿಂತಿರುಗುವುದಿಲ್ಲ’.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ಐಗುಪ್ತಕ್ಕೆ ಹೋಗಿ ಪ್ರವಾಸಿಸುತ್ತಿರುವ ಯೆಹೂದಜನಶೇಷದವರು ಸ್ವದೇಶಕ್ಕೆ ಹಿಂದಿರುಗಬೇಕೆಂದು ಎಷ್ಟು ಆಶಿಸಿದರೂ ಅವರಲ್ಲಿ ಯಾರೂ ಉಳಿದು ಅಲ್ಲಿಂದ ತಪ್ಪಿಸಿಕೊಂಡು ಯೆಹೂದಕ್ಕೆ ಹಿಂದಿರುಗುವದಿಲ್ಲ; ಓಡಿಬರುವ ಕೊಂಚ ಜನವೇ ಹೊರತು ಯಾವನೂ ಹಿಂದಿರುಗನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 ಈಜಿಪ್ಟ್ ದೇಶಕ್ಕೆ ಅಲ್ಲಿ ವಾಸಿಸುವುದಕ್ಕೆ ಹೋಗಿರುವ ಯೆಹೂದದ ಉಳಿದಿರುವವರು ತಾವು ತಿರುಗಿಕೊಂಡು, ಯೆಹೂದದಲ್ಲಿ ವಾಸಮಾಡಬೇಕೆಂದು ಮನಸ್ಸು ಮಾಡಿದರೂ, ಒಬ್ಬನಾದರೂ ಯೆಹೂದ ದೇಶಕ್ಕೆ ಹಿಂದಿರುಗುವುದಿಲ್ಲ. ಓಡಿಹೋಗುವ ಸ್ವಲ್ಪ ಜನರೇ ಅಲ್ಲದೆ ಇನ್ಯಾರೂ ಹಿಂತಿರುಗುವುದಿಲ್ಲ,” ಎಂಬುದು. ಅಧ್ಯಾಯವನ್ನು ನೋಡಿ |
ಆದರೆ, ಈಜಿಪ್ಟಿನಲ್ಲಿ ವಾಸಮಾಡುತ್ತಿರುವ ಎಲ್ಲಾ ಯೆಹೂದ್ಯರೇ, ಯೆಹೋವನ ಸಂದೇಶವನ್ನು ಕೇಳಿರಿ. ‘ನಾನು ಆಣೆಮಾಡಿ ಹೀಗೆ ಹೇಳುತ್ತೇನೆ. ಈಜಿಪ್ಟಿನಲ್ಲಿ ವಾಸಮಾಡುತ್ತಿರುವ ಯೆಹೂದಿಯರಲ್ಲಿ ಯಾರೊಬ್ಬರೂ ಇನ್ನು ಮುಂದೆ ನನ್ನ ಹೆಸರಿನ ಮೇಲೆ ಆಣೆಯಿಟ್ಟು ಹೇಳಲಾರರು ಎಂದು ನಾನು ನನ್ನ ಮಹತ್ತಾದ ನಾಮದ ಮೇಲೆ ಆಣೆಯಿಟ್ಟುಕೊಂಡು ಹೇಳುತ್ತೇನೆ. ಇನ್ನು ಮುಂದೆ ಎಂದೂ ಅವರು “ದೇವರ ಆಣೆಯಾಗಿ” ಎಂದು ಹೇಳಲಾರರು.