ಯೆರೆಮೀಯ 41:17 - ಪರಿಶುದ್ದ ಬೈಬಲ್17-18 ಯೋಹಾನಾನನೂ ಉಳಿದ ಸೇನಾಧಿಪತಿಗಳೂ ಕಸ್ದೀಯರಿಗೆ ಹೆದರಿದರು. ಬಾಬಿಲೋನಿನ ರಾಜನು ಗೆದಲ್ಯನನ್ನು ಯೆಹೂದದ ಅಧಿಪತಿಯಾಗಿ ನೇಮಿಸಿದ್ದನು. ಆದರೆ ಇಷ್ಮಾಯೇಲನು ಗೆದಲ್ಯನನ್ನು ಕೊಲೆ ಮಾಡಿದನು. ಇದರಿಂದ ಕಸ್ದೀಯರಿಗೆ ಕೋಪ ಬರಬಹುದೆಂದು ಯೋಹಾನಾನನು ಭಯಪಟ್ಟನು. ಆದ್ದರಿಂದ ಈಜಿಪ್ಟಿಗೆ ಓಡಿಹೋಗಬೇಕೆಂದು ಅವರು ನಿರ್ಧರಿಸಿದರು. ಈಜಿಪ್ಟಿಗೆ ಹೋಗುವ ದಾರಿಯಲ್ಲಿ ಅವರು ಗೇರುಥ್ ಕಿಮ್ಹಾಮಿನಲ್ಲಿ ಇಳಿದುಕೊಂಡರು. ಗೇರುಥ್ ಕಿಮ್ಹಾಮು ಬೆತ್ಲೆಹೇಮ್ ಪಟ್ಟಣದ ಸಮೀಪದಲ್ಲಿದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 ಅವರು ಕಸ್ದೀಯರ ಭಯದಿಂದ ಐಗುಪ್ತಕ್ಕೆ ವಲಸೆಹೋಗಬೇಕೆಂದು ಬೇತ್ಲೆಹೇಮಿನ ಸಮೀಪವಾಗಿರುವ ಗೇರುಥ್ ಕಿಮ್ಹಾಮಿನಲ್ಲಿ ಇಳಿದುಕೊಂಡರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)17 ಬಾಬಿಲೋನಿಯರ ಭಯದಿಂದ ಈಜಿಪ್ಟಿಗೆ ವಲಸೆಹೋಗಬೇಕೆಂದು ಬೆತ್ಲೆಹೇಮಿನ ಸಮೀಪದಲ್ಲಿರುವ ಗೇರುಥ್ ಕಿಮ್ಹಾಮಿನಲ್ಲಿ ಇಳಿದುಕೊಂಡರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)17 ಕಸ್ದೀಯರ ಭಯದಿಂದ ಐಗುಪ್ತಕ್ಕೆ ವಲಸೆಹೋಗಬೇಕೆಂದು ಬೇತ್ಲೆಹೇವಿುನ ಸಮೀಪವಾಗಿರುವ ಗೇರುಥ್ ಕಿಮ್ಹಾವಿುನಲ್ಲಿ ಇಳಿದುಕೊಂಡರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ17 ಈಜಿಪ್ಟಿಗೆ ಹೋಗುವುದಕ್ಕೆ ಬೇತ್ಲೆಹೇಮಿನ ಬಳಿಯಲ್ಲಿರುವ ಗೇರುಥ್ ಕಿಮ್ಹಾಮಿನಲ್ಲಿ ಇಳಿದುಕೊಂಡರು. ಅಧ್ಯಾಯವನ್ನು ನೋಡಿ |