ಯೆರೆಮೀಯ 4:9 - ಪರಿಶುದ್ದ ಬೈಬಲ್9 ಯೆಹೋವನು ಹೇಳುವುದೇನೆಂದರೆ, “ಆ ಸಮಯದಲ್ಲಿ ರಾಜನು ಮತ್ತು ನಾಯಕರು ತಮ್ಮ ಧೈರ್ಯವನ್ನು ಕಳೆದುಕೊಳ್ಳುವರು. ಯಾಜಕರು ಭಯಪಡುವರು; ಪ್ರವಾದಿಗಳು ಬೆರಗಾಗುವರು.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಆ ಕಾಲದಲ್ಲಿ ಅರಸನ ಎದೆಯು ಕುಂದುವುದು, ಅಧಿಪತಿಗಳ ಹೃದಯವು ಕುಗ್ಗುವುದು, ಯಾಜಕರು ಸ್ತಬ್ಧರಾಗುವರು, ಪ್ರವಾದಿಗಳು ಬೆರಗಾಗುವರು” ಎಂದು ಯೆಹೋವನು ನುಡಿಯುತ್ತಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಸರ್ವೇಶ್ವರ ಸ್ವಾಮಿ ಹೀಗೆಂದರು - “ಆ ದಿನದಂದು ಅರಸರು ಎದೆಗುಂದುವರು, ಅಧಿಪತಿಗಳ ಹೃದಯ ಕುಗ್ಗುವುದು. ಯಾಜಕರು ಸ್ತಬ್ಧರಾಗುವರು; ಪ್ರವಾದಿಗಳು ನಿಬ್ಬೆರಗಾಗುವರು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಆ ಕಾಲದಲ್ಲಿ ಅರಸನ ಎದೆಯು ಕುಂದುವದು, ಅಧಿಪತಿಗಳ ಹೃದಯವು ಕುಗ್ಗುವದು, ಯಾಜಕರು ಸ್ತಬ್ಧರಾಗುವರು, ಪ್ರವಾದಿಗಳು ಬೆರಗಾಗುವರು ಎಂದು ಯೆಹೋವನು ಅನ್ನುತ್ತಾನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಆ ದಿವಸದಲ್ಲಿ, “ಅರಸನ ಹೃದಯವೂ ಎದೆಗುಂದುವುದು. ಅಧಿಪತಿಯ ಹೃದಯವೂ ಕುಗ್ಗುವುದು. ಯಾಜಕರು ಭ್ರಮೆಗೊಳ್ಳುವರು. ಪ್ರವಾದಿಗಳು ಸ್ತಬ್ಧರಾಗುವರು,” ಎಂದು ಯೆಹೋವ ದೇವರು ನುಡಿಯುತ್ತಾರೆ. ಅಧ್ಯಾಯವನ್ನು ನೋಡಿ |