ಯೆರೆಮೀಯ 4:26 - ಪರಿಶುದ್ದ ಬೈಬಲ್26 ನಾನು ನೋಡಿದಾಗ ಫಲವತ್ತಾದ ಭೂಮಿಯು ಮರಳುಗಾಡಾಗಿತ್ತು. ಆ ಪ್ರದೇಶದ ಎಲ್ಲಾ ನಗರಗಳು ಹಾಳಾಗಿ ಹೋಗಿದ್ದವು. ಯೆಹೋವನು ತನ್ನ ಭಯಂಕರವಾದ ಕೋಪದಿಂದ ಇದನ್ನು ಮಾಡಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201926 ನಾನು ನೋಡಲಾಗಿ ಫಲವತ್ತಾದ ಭೂಮಿಯು ಕಾಡಾಗಿತ್ತು, ಅಯ್ಯೋ! ಅಲ್ಲಿನ ಊರುಗಳೆಲ್ಲಾ ರೋಷಾಗ್ನಿಯುಕ್ತನಾದ ಯೆಹೋವನ ಪ್ರತ್ಯಕ್ಷತೆಯಿಂದ ಬಿದ್ದುಹೋಗಿದ್ದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)26 ಇನ್ನೂ ನೋಡಿದೆ - ಸೊಂಪಾದ ನಾಡು ಈಗ ಸುಡುಗಾಡು ಅಕಟಾ ! ಸರ್ವೇಶ್ವರನ ಮುಂದೆ, ಅವರ ಕೋಪಾಗ್ನಿಯ ಮುಂದೆ ಊರುಗಳೆಲ್ಲವು ಪಾಳುಬಿದ್ದಿದ್ದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)26 ನಾನು ನೋಡಲಾಗಿ ಫಲವತ್ತಾದ ಭೂವಿುಯು ಕಾಡಾಗಿತ್ತು. ಅಕಟಾ! ಅಲ್ಲಿನ ಊರುಗಳೆಲ್ಲಾ ರೋಷಾಗ್ನಿಯುಕ್ತನಾದ ಯೆಹೋವನ ಪ್ರತ್ಯಕ್ಷತೆಯಿಂದ ಬಿದ್ದು ಹೋಗಿದ್ದವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ26 ನಾನು ನೋಡಿದೆನು, ಇಗೋ, ಫಲವುಳ್ಳ ಸ್ಥಳವು ಮರುಭೂಮಿಯಾಯಿತು; ಅದರ ಪಟ್ಟಣಗಳೆಲ್ಲಾ ಯೆಹೋವ ದೇವರ ಮುಂದೆಯೂ, ಅವರ ಉಗ್ರಕೋಪದ ಉರಿಯ ಮುಂದೆಯೂ ಬಿದ್ದು ಹೋಗಿದ್ದವು. ಅಧ್ಯಾಯವನ್ನು ನೋಡಿ |