ಯೆರೆಮೀಯ 4:22 - ಪರಿಶುದ್ದ ಬೈಬಲ್22 ದೇವರು, “ನನ್ನ ಜನರು ಮೂರ್ಖರಾಗಿದ್ದಾರೆ. ಅವರು ನನ್ನನ್ನು ಅರಿಯದವರಾಗಿದ್ದಾರೆ. ಅವರು ಮೂಢ ಮಕ್ಕಳಾಗಿದ್ದಾರೆ. ಅವರು ಅವಿವೇಕಿಗಳಾಗಿದ್ದಾರೆ. ಅವರು ದುಷ್ಕೃತ್ಯದಲ್ಲಿ ನಿಪುಣರಾಗಿದ್ದಾರೆ. ಅವರು ಒಳ್ಳೆಯದನ್ನು ಮಾಡಲರಿಯದವರಾಗಿದ್ದಾರೆ” ಎಂದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201922 ನನ್ನ ಜನರು ಮೂರ್ಖರು, ನನ್ನನ್ನು ತಿಳಿಯರು; ಮೂಢಸಂತತಿಯವರು, ಅವಿವೇಕಿಗಳು; ದುಷ್ಕಾರ್ಯದಲ್ಲಿ ನಿಪುಣರು, ಸತ್ಕಾರ್ಯವನ್ನು ಮಾಡಲು ಅರಿಯರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)22 ಸರ್ವೇಶ್ವರ ಹೀಗೆನ್ನುತ್ತಾರೆ: ನನ್ನ ಜನರು ಮೂರ್ಖರು, ನನ್ನನ್ನು ತಿಳಿಯರು. ಪೆದ್ದ ಮಕ್ಕಳು, ಬುದ್ಧಿಯಿಲ್ಲದವರು ಕೇಡುಮಾಡುವುದರಲ್ಲಿ ಪ್ರವೀಣರು ಒಳಿತನ್ನು ಮಾಡಲು ಅರಿಯರು ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)22 ನನ್ನ ಜನರು ಮೂರ್ಖರು, ನನ್ನನ್ನು ತಿಳಿಯರು; ಮೂಢಸಂತತಿಯವರು, ಅವಿವೇಕಿಗಳು; ದುಷ್ಕಾರ್ಯದಲ್ಲಿ ನಿಪುಣರು, ಸತ್ಕಾರ್ಯವನ್ನು ಮಾಡಲರಿಯರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ22 “ಏಕೆಂದರೆ ನನ್ನ ಜನರು ಮೂಢರಾಗಿದ್ದಾರೆ. ನನ್ನನ್ನು ಅವರು ಅರಿಯರು; ಮೂರ್ಖ ಮಕ್ಕಳಾಗಿದ್ದಾರೆ, ಅವರು ಗ್ರಹಿಕೆಯಿಲ್ಲದವರು; ಕೆಟ್ಟದ್ದನ್ನು ಮಾಡುವುದಕ್ಕೆ ಜಾಣರಾಗಿದ್ದಾರೆ, ಆದರೆ ಒಳ್ಳೆಯದನ್ನು ಮಾಡುವುದಕ್ಕೆ ಅರಿಯರು.” ಅಧ್ಯಾಯವನ್ನು ನೋಡಿ |