ಯೆರೆಮೀಯ 4:19 - ಪರಿಶುದ್ದ ಬೈಬಲ್19 ಅಯ್ಯೋ, ನನ್ನ ದುಃಖ ಮತ್ತು ಚಿಂತೆ ನನ್ನ ಹೊಟ್ಟೆಯಲ್ಲಿ ಸಂಕಟವನ್ನು ಉಂಟುಮಾಡುತ್ತಿವೆ. ನೋವಿನಿಂದ ನಾನು ಬಾಗಿಹೋಗಿದ್ದೇನೆ. ನಾನು ತುಂಬ ಹೆದರಿಕೊಂಡಿದ್ದೇನೆ. ನನ್ನ ಹೃದಯವು ಒಳಗೆ ತಳಮಳಗೊಳ್ಳುತ್ತಿದೆ. ನಾನು ಬಾಯಿ ಮುಚ್ಚಿಕೊಂಡಿರಲಾರೆ. ಏಕೆಂದರೆ, ನಾನು ತುತ್ತೂರಿಯ ಶಬ್ದವನ್ನು ಕೇಳಿದ್ದೇನೆ. ಆ ತುತ್ತೂರಿಯು ಸೈನ್ಯವನ್ನು ಯುದ್ಧಕ್ಕೆ ಕರೆಯುತ್ತಿದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ಹಾ, ನನ್ನ ಕರುಳು! ಕರುಳು! ಯಾತನೆಪಡುತ್ತದೆ; ಆಹಾ, ನನ್ನ ಗುಂಡಿಗೆಯ ಪಕ್ಕಗಳು! ನನ್ನ ಹೃದಯವು ನನ್ನೊಳಗೆ ತಳಮಳಗೊಂಡಿದೆ! ನಾನು ಬಾಯಿಮುಚ್ಚಿಕೊಂಡಿರಲಾರೆ; ನನ್ನ ಆತ್ಮವೇ, ನೀನು ತುತ್ತೂರಿಯ ಶಬ್ದವನ್ನೂ, ಯುದ್ಧದ ಘೋಷವನ್ನೂ ಕೇಳುತ್ತಿಯಲ್ಲಾ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)19 ಅಯ್ಯೋ, ನನ್ನ ಕರುಳು ಯಾತನೆಯಿಂದ ಕಿತ್ತುಬರುವಂತಿದೆ. ಅಕಟಾ ! ನನ್ನ ಗುಂಡಿಗೆಯ ಪಕ್ಕೆಗಳು ಸೀಳುವಂತಿದೆ, ಹೃದಯ ತಳಮಳಗೊಂಡಿದೆ ! ಇನ್ನು ಬಾಯಿಮುಚ್ಚಿಕೊಂಡಿರಲು ನನ್ನಿಂದಾಗದು; ನನ್ನ ಮನವೇ, ಕಾಳಗದ ಕಹಳೆಯನ್ನೂ ಯುದ್ಧದ ಕೋಲಾಹಲವನ್ನೂ ಕೇಳುತ್ತಿರುವೆ, ಅಲ್ಲವೆ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ಹಾ, ನನ್ನ ಕರುಳು! ಕರುಳು! ಯಾತನೆಪಡುತ್ತೇನೆ; ಆಹಾ, ನನ್ನ ಗುಂಡಿಗೆಯ ಪಕ್ಕಗಳು! ನನ್ನ ಹೃದಯವು ನನ್ನೊಳಗೆ ತಳಮಳಗೊಂಡಿದೆ! ನಾನು ಬಾಯಿಮುಚ್ಚಿಕೊಂಡಿರಲಾರೆ; ನನ್ನ ಆತ್ಮವೇ, ನೀನು ತುತೂರಿಯ ಶಬ್ದವನ್ನೂ ಯುದ್ಧಘೋಷವನ್ನೂ ಕೇಳುತ್ತೀಯಲ್ಲಾ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ19 ಓ, ನನ್ನ ಕರುಳು, ನನ್ನ ಕರುಳು! ನಾನು ನೋವಿನಿಂದ ನರಳುತ್ತೇನೆ. ನನ್ನ ಹೃದಯವು ನನ್ನಲ್ಲಿ ತಳಮಳಗೊಂಡಿದೆ. ನಾನು ಮೌನವಾಗಿರಲಾರೆನು; ಓ ನನ್ನ ಪ್ರಾಣವೇ, ತುತೂರಿ ಶಬ್ದವನ್ನೂ, ಯುದ್ಧದ ಆರ್ಭಟವನ್ನೂ ಕೇಳುತ್ತಿರುವೆ. ಅಧ್ಯಾಯವನ್ನು ನೋಡಿ |
ಒಮ್ಮೊಮ್ಮೆ ನನ್ನಷ್ಟಕ್ಕೆ ನಾನೇ ಹೇಳಿಕೊಳ್ಳುತ್ತೇನೆ, “ನಾನು ಯೆಹೋವನನ್ನೇ ಮರೆತುಬಿಡುತ್ತೇನೆ. ಆತನ ಹೆಸರಿನಲ್ಲಿ ಇನ್ನೇನೂ ಮಾತನಾಡುವುದಿಲ್ಲ” ಎಂದುಕೊಂಡರೆ ಆತನ ಸಂದೇಶವು ನನ್ನ ಅಂತರಾಳದಲ್ಲಿ ಉರಿಯುವ ಜ್ವಾಲೆಯಂತಾಗುತ್ತದೆ. ಅದು ಆಳಕ್ಕೆ ಇಳಿದು ನನ್ನ ಎಲುಬುಗಳನ್ನು ಸುಡುವಂತಾಗುತ್ತದೆ. ಯೆಹೋವನ ಸಂದೇಶವನ್ನು ನನ್ನ ಅಂತರಾಳದಲ್ಲಿ ಹಿಡಿದಿಟ್ಟುಕೊಳ್ಳಲು ಪ್ರಯತ್ನ ಮಾಡಿ ನಾನು ದಣಿಯುತ್ತೇನೆ. ಕೊನೆಗೆ ಅದನ್ನು ನನ್ನೊಳಗೆ ಇಟ್ಟುಕೊಳ್ಳಲು ಅಸಾಧ್ಯವಾಗುತ್ತದೆ.
ಯೆಹೋವನು ಹೀಗೆನ್ನುತ್ತಾನೆ: “ಅಮ್ಮೋನಿನ ರಬ್ಬಾ ನಿವಾಸಿಗಳು ಯುದ್ಧದ ಧ್ವನಿಗಳನ್ನು ಕೇಳುವ ಕಾಲ ಬರಲಿದೆ. ಅಮ್ಮೋನಿನ ರಬ್ಬಾ ನಾಶವಾಗಿ ಹಾಳಾದ ಕಟ್ಟಡಗಳ ಗುಡ್ಡವಾಗುವುದು. ಅದರ ಸುತ್ತಮುತ್ತಲಿನ ಪಟ್ಟಣಗಳನ್ನು ಸುಟ್ಟುಹಾಕಲಾಗುವುದು. ಆ ಜನರು ಇಸ್ರೇಲರಿಗೆ ಆ ಪ್ರದೇಶವನ್ನು ಬಿಟ್ಟುಹೋಗುವಂತೆ ಒತ್ತಾಯಿಸಿದರು. ಆದರೆ ಇಸ್ರೇಲರು ಆ ಪ್ರದೇಶವನ್ನು ಬಿಟ್ಟುಹೋಗುವಂತೆ ಅವರನ್ನು ಒತ್ತಾಯಿಸುವರು.” ಯೆಹೋವನು ಹೀಗೆನ್ನುತ್ತಾನೆ:
ಆಗ ದಾನಿಯೇಲನು (ಬೇಲ್ತೆಶಚ್ಚರನು) ಸುಮಾರು ಒಂದು ಗಂಟೆಯವರೆಗೆ ಮೌನವಾಗಿದ್ದನು. ಅವನ ಬುದ್ಧಿಗೆ ತೋರಿದ ವಿಷಯಗಳು ಅವನನ್ನು ಗಾಬರಿಪಡಿಸಿದವು. ಆಗ ರಾಜನು, “ಬೇಲ್ತೆಶಚ್ಚರನೇ, ಕನಸು ಅಥವಾ ಕನಸಿನ ಅರ್ಥವು ನಿನ್ನನ್ನು ಭಯಗೊಳಿಸದಿರಲಿ” ಎಂದು ಧೈರ್ಯ ಹೇಳಿದನು. ಆಗ ಬೇಲ್ತೆಶಚ್ಚರನು ಅರಸನಿಗೆ, “ನನ್ನ ಒಡೆಯನೇ, ಈ ಕನಸು ನಿನ್ನ ವಿರೋಧಿಗಳಿಗೆ ಫಲಿಸಲಿ. ಇದರ ಅರ್ಥವು ನಿನ್ನ ವಿರೋಧಿಗಳ ಅನುಭವಕ್ಕೆ ಬರಲಿ ಎಂದು ನಾನು ಹಾರೈಸುತ್ತೇನೆ.