Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 38:25 - ಪರಿಶುದ್ದ ಬೈಬಲ್‌

25 ನಾನು ನಿನ್ನೊಂದಿಗೆ ಮಾತನಾಡಿದ್ದನ್ನು ಆ ಅಧಿಕಾರಿಗಳು ಪತ್ತೆ ಹಚ್ಚಬಹುದು. ಅವರು ನಿನ್ನ ಹತ್ತಿರ ಬಂದು, ‘ಯೆರೆಮೀಯನೇ, ನೀನು ರಾಜನಾದ ಚಿದ್ಕೀಯನಿಗೆ ಏನು ಹೇಳಿದೆ? ಚಿದ್ಕೀಯನು ನಿನಗೆ ಏನು ಹೇಳಿದನು? ಪ್ರಾಮಾಣಿಕವಾಗಿ ಎಲ್ಲವನ್ನು ನಮಗೆ ಹೇಳು; ಇಲ್ಲವಾದರೆ ನಾವು ನಿನ್ನನ್ನು ಕೊಂದುಬಿಡುತ್ತೇವೆ’ ಎನ್ನಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ನಾನು ನಿನ್ನ ಸಂಗಡ ಮಾತನಾಡಿದ ಸುದ್ದಿಯನ್ನು ಪ್ರಧಾನರು ಕೇಳಿ ನಿನ್ನ ಬಳಿಗೆ ಬಂದು, ‘ನೀನು ಅರಸನಿಗೆ ಹೇಳಿದ್ದನ್ನು ನಮಗೆ ತಿಳಿಸು; ನಮಗೆ ಮರೆಮಾಡದಿದ್ದರೆ ನಿನ್ನನ್ನು ಕೊಲ್ಲುವುದಿಲ್ಲ; ಅರಸನು ನಿನಗೆ ಹೇಳಿದ್ದನ್ನೂ ತಿಳಿಸು’ ಎಂದು ಪ್ರಶ್ನೆಮಾಡಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ನಾನು ನಿನ್ನ ಸಂಗಡ ಮಾತಾಡಿದ ಸುದ್ದಿಯನ್ನು ಪದಾಧಿಕಾರಿಗಳು ಕೇಳಿ ನಿನ್ನ ಬಳಿಗೆ ಬಂದು, ‘ಅರಸನಿಗೆ ಏನು ಹೇಳಿದೆ? ನಮಗೆ ತಿಳಿಸು, ನಮಗೆ ಮರೆಮಾಡದೆ ತಿಳಿಸಿದರೆ ನಿನ್ನನ್ನು ಕೊಲ್ಲುವುದಿಲ್ಲ. ಅರಸನಿಗೆ ಏನು ಹೇಳಿದೆ? ತಿಳಿಸು, ಎಂದು ಪ್ರಶ್ನೆ ಹಾಕಿದರೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ನಾನು ನಿನ್ನ ಸಂಗಡ ಮಾತಾಡಿದ ಸುದ್ದಿಯನ್ನು ಪ್ರಧಾನರು ಕೇಳಿ ನಿನ್ನ ಬಳಿಗೆ ಬಂದು - ನೀನು ಅರಸನಿಗೆ ಹೇಳಿದ್ದನ್ನು ನಮಗೆ ತಿಳಿಸು; ನಮಗೆ ಮರೆಮಾಡದಿದ್ದರೆ ನಿನ್ನನ್ನು ಕೊಲ್ಲೆವು; ಅರಸನು ನಿನಗೆ ಹೇಳಿದ್ದನ್ನೂ ತಿಳಿಸು ಎಂದು ಪ್ರಶ್ನೆಮಾಡಿದ ಪಕ್ಷದಲ್ಲಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಆದರೆ ಪ್ರಧಾನರು ನಾನು ನಿನ್ನ ಸಂಗಡ ಮಾತಾಡಿದ್ದೇನೆಂದು ಕೇಳಿ, ‘ನಿನ್ನ ಬಳಿಗೆ ಬಂದು, ನೀನು ಅರಸನಿಗೆ ಹೇಳಿದ್ದನ್ನು ನಮಗೆ ಮರೆಮಾಡದೆ ತಿಳಿಸು. ನಾವು ನಿನ್ನನ್ನು ಕೊಂದುಹಾಕುವುದಿಲ್ಲ. ಅರಸನು ನಿನ್ನ ಸಂಗಡ ಮಾತಾಡಿದ್ದನ್ನು ಸಹ ತಿಳಿಸು,’ ಎಂದು ಹೇಳಿದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 38:25
4 ತಿಳಿವುಗಳ ಹೋಲಿಕೆ  

ಆ ರಾಜ್ಯಾಧಿಕಾರಿಗಳು ಅವನನ್ನು ಪ್ರಶ್ನಿಸುವದಕ್ಕಾಗಿ ಯೆರೆಮೀಯನಲ್ಲಿಗೆ ಬಂದರು. ರಾಜನು ಆಜ್ಞಾಪಿಸಿದಂತೆ ಯೆರೆಮೀಯನು ಅವರಿಗೆ ಎಲ್ಲವನ್ನು ಹೇಳಿದನು. ಆಗ ಆ ಅಧಿಕಾರಿಗಳು ಯೆರೆಮೀಯನನ್ನು ಬಿಟ್ಟುಹೋದರು. ಯೆರೆಮೀಯನ ಮತ್ತು ರಾಜನ ಸಂಭಾಷಣೆಯನ್ನು ಯಾರೂ ಕೇಳಿರಲಿಲ್ಲ.


ಆಗ ಚಿದ್ಕೀಯನು ಯೆರೆಮೀಯನಿಗೆ ಹೀಗೆ ಹೇಳಿದನು: “ನಾನು ನಿನ್ನ ಸಂಗಡ ಮಾತನಾಡುತ್ತಿದ್ದೆ ಎಂದು ಯಾರಿಗೂ ಹೇಳಬೇಡ. ಇಲ್ಲವಾದರೆ ನೀನು ಸಾಯುವೆ.


ರಾಜನಾದ ದಾವೀದನು ಆ ಸ್ತ್ರೀಗೆ, “ನಾನು ಕೇಳುವ ಪ್ರಶ್ನೆಗೆ ನೀನು ಉತ್ತರವನ್ನು ಹೇಳಲೇಬೇಕು” ಎಂದು ಉತ್ತರಿಸಿದನು. ಆ ಸ್ತ್ರೀಯು, “ರಾಜನಾದ ನನ್ನ ಒಡಯನೇ, ದಯವಿಟ್ಟು ನಿನ್ನ ಪ್ರಶ್ನೆಯನ್ನು ಕೇಳು” ಎಂದಳು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು