ಯೆರೆಮೀಯ 38:22 - ಪರಿಶುದ್ದ ಬೈಬಲ್22 ಯೆಹೂದದ ರಾಜನ ಅರಮನೆಯಲ್ಲಿ ಉಳಿದ ಎಲ್ಲಾ ಸ್ತ್ರೀಯರನ್ನು ಬಾಬಿಲೋನಿನ ಸೈನ್ಯಾಧಿಕಾರಿಗಳ ಬಳಿಗೆ ತರಲಾಗುವುದು. ನಿನ್ನ ಸ್ತ್ರೀಯರು ಹಾಡನ್ನು ಹಾಡಿ ನಿನ್ನನ್ನು ತಮಾಷೆ ಮಾಡುವರು. ಆ ಸ್ತ್ರೀಯರು ಹೀಗೆ ಹೇಳುವರು: ‘ನಿನಗಿಂತಲೂ ಪ್ರಬಲರಾಗಿದ್ದ ನಿನ್ನ ಒಳ್ಳೆಯ ಸ್ನೇಹಿತರು ನಿನ್ನನ್ನು ತಪ್ಪುದಾರಿಗೆ ಎಳೆದರು. ಆ ಸ್ನೇಹಿತರನ್ನು ನೀನು ತುಂಬಾ ನಂಬಿಕೊಂಡಿದ್ದೆ. ನಿನ್ನ ಪಾದಗಳು ಕೆಸರಿನಲ್ಲಿ ಹೂತಿವೆ. ನಿನ್ನ ಸ್ನೇಹಿತರು ನಿನ್ನಿದ ದೂರವಾಗಿದ್ದಾರೆ.’ ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201922 ಯೆಹೂದದ ಅರಸನ ಮನೆಯಲ್ಲಿ ಉಳಿದಿರುವ ಸಕಲ ಸ್ತ್ರೀಯರು ಬಾಬೆಲಿನ ಅರಸನ ಸರದಾರರ ಬಳಿಗೆ ತರಲ್ಪಟ್ಟವರಾಗಿ ನಿನ್ನನ್ನು ಪ್ರೇರೇಪಿಸಿ ಒಳಪಡಿಸಿಕೊಂಡಿದ್ದ ನಿನ್ನ ಆಪ್ತಮಿತ್ರರು ನಿನ್ನ ಕಾಲುಗಳ ಬದಿಯಲ್ಲಿ ಹೂತದ್ದನ್ನು ನೋಡಿ ಹಿಂದಿರುಗಿದ್ದಾರೆ ಎಂದು ನಿಂದಿಸುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)22 ಜುದೇಯದ ಅರಸನ ಮನೆಯಲ್ಲಿ ಉಳಿದಿರುವ ಎಲ್ಲ ಮಹಿಳೆಯರನ್ನು ಬಾಬಿಲೋನಿಯದ ಅರಸನ ದಳಪತಿಗಳ ಬಳಿಗೆ ತರಲಾಗುವುದು. ಆ ಮಹಿಳೆಯರೇ: ‘ಆಪ್ತ ಮಿತ್ರರು ನಿನ್ನನ್ನು ವಂಚಿಸಿ ಒಳಪಡಿಸಿಕೊಂಡರು; ನಿನ್ನ ಕಾಲುಗಳು ಬದಿಯಲ್ಲಿ ಹೂತಿರುವುದನ್ನು ನೋಡಿಯೂ ನಿನ್ನಿಂದ ದೂರವಾದರು’ ಎಂದು ತಮ್ಮನ್ನು ನಿಂದಿಸುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)22 ಯೆಹೂದದ ಅರಸನ ಮನೆಯಲ್ಲಿ ಉಳಿದಿರುವ ಸಕಲ ಸ್ತ್ರೀಯರು ಬಾಬೆಲಿನ ಅರಸನ ಸರದಾರರ ಬಳಿಗೆ ತರಲ್ಪಟ್ಟವರಾಗಿ ನಿನ್ನನ್ನು ಪ್ರೇರಿಸಿ ಒಳಪಡಿಸಿಕೊಂಡಿದ್ದ ನಿನ್ನ ಆಪ್ತವಿುತ್ರರು ನಿನ್ನ ಕಾಲುಗಳು ಬದಿಯಲ್ಲಿ ಹೂತದ್ದನ್ನು ನೋಡಿ ಹಿಂದಿರುಗಿದ್ದಾರೆ ಎಂದು ನಿಂದಿಸುವರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ22 ಇಗೋ, ಯೆಹೂದದ ಅರಸನ ಅರಮನೆಯಲ್ಲಿ ಉಳಿದ ಹೆಂಗಸರೆಲ್ಲರು ಬಾಬಿಲೋನಿನ ಅರಸನ ಪ್ರಧಾನರ ಬಳಿಗೆ ಹೊರಗೆ ಕರೆತರಲಾಗಿ ಹೇಳುವುದೇನೆಂದರೆ, “ನಿನ್ನ ಸ್ನೇಹಿತರು ನಿನ್ನನ್ನು ಪ್ರೇರೇಪಿಸಿ, ನಿನ್ನನ್ನು ಗೆದ್ದಿದ್ದಾರೆ. ನಿನ್ನ ಕಾಲುಗಳು ಕೆಸರಿನಲ್ಲಿ ಹೂತಿರುವುದನ್ನು ನೋಡಿ, ಹಿಂದಿರುಗಿದ್ದಾರೆಂದು ನಿಂದಿಸುವರು. ಅಧ್ಯಾಯವನ್ನು ನೋಡಿ |
ಈಗ ಯೋಹಾನಾನ ಮತ್ತು ಎಲ್ಲಾ ಸೈನ್ಯಾಧಿಕಾರಿಗಳು, ಎಲ್ಲಾ ಗಂಡಸರು, ಹೆಂಗಸರು ಮತ್ತು ಮಕ್ಕಳನ್ನು ಈಜಿಪ್ಟಿಗೆ ತೆಗೆದುಕೊಂಡು ಹೋದರು. ಆ ಜನಗಳಲ್ಲಿ ರಾಜನ ಹೆಣ್ಣುಮಕ್ಕಳಿದ್ದರು. (ನೆಬೂಜರದಾನನು ಗೆದಲ್ಯನನ್ನು ಆ ಜನರ ಮೇಲ್ವಿಚಾರಕನನ್ನಾಗಿ ನೇಮಿಸಿದ್ದನು. ನೆಬೂಜರದಾನನು ಬಾಬಿಲೋನಿನ ರಾಜನ ವಿಶೇಷ ರಕ್ಷಕದಳದ ಅಧಿಪತಿಯಾಗಿದ್ದನು). ಯೋಹಾನಾನನು ಪ್ರವಾದಿಯಾದ ಯೆರೆಮೀಯನನ್ನು ಮತ್ತು ನೇರೀಯನ ಮಗನಾದ ಬಾರೂಕನನ್ನು ತೆಗೆದುಕೊಂಡು ಹೋದನು.
ಮಿಚ್ಫ ನಗರದಲ್ಲಿ ಉಳಿದೆಲ್ಲ ಜನರನ್ನು ಇಷ್ಮಾಯೇಲನು ವಶಪಡಿಸಿಕೊಂಡನು. ಅವರಲ್ಲಿ ರಾಜನ ಹೆಣ್ಣಮಕ್ಕಳು ಮತ್ತು ಅಲ್ಲಿದ್ದ ಬೇರೆ ಜನರೂ ಸೇರಿದ್ದರು. ಆ ಜನರನ್ನು ನೋಡಿಕೊಳ್ಳಲೆಂದು ನೆಬೂಜರದಾನನು ಗೆದಲ್ಯನನ್ನು ನೇಮಿಸಿದ್ದನು. ನೆಬೂಜರದಾನನು ಬಾಬೆಲಿನ ರಾಜನ ವಿಶೇಷ ರಕ್ಷಕದಳದ ಅಧಿಪತಿಯಾಗಿದ್ದನು. ಇಷ್ಮಾಯೇಲನು ಆ ಜನರನ್ನು ಸೆರೆಹಿಡಿದು ಅವರನ್ನು ತೆಗೆದುಕೊಂಡು ಅಮ್ಮೋನ್ಯರ ಸೀಮೆಗೆ ಹೊರಟನು.
ಅನೇಕ ಜನರು ನನ್ನ ವಿರುದ್ಧವಾಗಿ ಮೆಲುಧ್ವನಿಯಲ್ಲಿ ಮಾತನಾಡುವದು ನನ್ನ ಕಿವಿಗೆ ಬೀಳುತ್ತಿದೆ, ಅದು ನನ್ನನ್ನು ಭಯಗೊಳಿಸುತ್ತಿದೆ. ನನ್ನ ಸ್ನೇಹಿತರು ಸಹ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ನಾನು ಯಾವುದಾದರೂ ತಪ್ಪನ್ನು ಮಾಡಲಿ ಎಂದು ಜನರು ಹೊಂಚುಹಾಕಿ ಕಾದಿದ್ದಾರೆ. “ಅವನು ದುಷ್ಕೃತ್ಯವನ್ನು ಮಾಡಿದ್ದಾನೆಂದು ನಾವು ಸುಳ್ಳು ಹೇಳೋಣ. ಯೆರೆಮೀಯನನ್ನು ನಾವು ವಂಚಿಸಲು ಸಾಧ್ಯವಾಗಬಹುದು. ನಾವು ಅವನನ್ನು ಹಿಡಿದುಕೊಳ್ಳಬಹುದು. ಕೊನೆಗೆ ಅವನನ್ನು ತೊಲಗಿಸಬಹುದು. ನಾವು ಅವನನ್ನು ಹಿಡಿದು ಅವನ ಮೇಲೆ ನಮ್ಮ ಸೇಡನ್ನು ತೀರಿಸಿಕೊಳ್ಳೋಣ” ಎಂದು ಮಾತನಾಡುತ್ತಿದ್ದಾರೆ.