Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 37:10 - ಪರಿಶುದ್ದ ಬೈಬಲ್‌

10 ಜೆರುಸಲೇಮಿನ ಜನರೇ, ನಿಮ್ಮ ಮೇಲೆ ಧಾಳಿ ಮಾಡುವ ಬಾಬಿಲೋನಿನ ಎಲ್ಲಾ ಸೈನಿಕರನ್ನು ನೀವು ಸೋಲಿಸಿದರೂ ಅವರ ಗುಡಾರದಲ್ಲಿ ಕೆಲವು ಜನ ಗಾಯಗೊಂಡವರು ಉಳಿದಿರುತ್ತಾರೆ. ಆ ಗಾಯಾಳುಗಳೇ ತಮ್ಮ ಗುಡಾರದಿಂದ ಹೊರಬಂದು ಜೆರುಸಲೇಮನ್ನು ಸುಟ್ಟುಹಾಕುವರು.’”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ನಿಮ್ಮನ್ನು ಪ್ರತಿಭಟಿಸುವ ಕಸ್ದೀಯರಲ್ಲಿ ಗಾಯಪಟ್ಟವರು ಮಾತ್ರ ಉಳಿಯುವಂತೆ ನೀವು ಆ ಸೈನ್ಯವನ್ನೆಲ್ಲಾ ಒಂದು ವೇಳೆ ಹೊಡೆದಿದ್ದರೂ ಆ ಗಾಯಪಟ್ಟವರೇ ತಮ್ಮ ತಮ್ಮ ಗುಡಾರಗಳಿಂದ ಎದ್ದು ಬಂದು ಈ ಪಟ್ಟಣವನ್ನು ಬೆಂಕಿಯಿಂದ ಸುಟ್ಟು ಬಿಡುತ್ತಿದ್ದರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ದಾಳಿಮಾಡುವ ಆ ಬಾಬಿಲೋನಿಯರನ್ನು ನೀವು ಪೂರ್ತಿಯಾಗಿ ಸೋಲಿಸಿದರೂ, ಅವರಲ್ಲಿ ಗಾಯಗೊಂಡವರು ಮಾತ್ರ ನಿಮ್ಮಲ್ಲಿ ಉಳಿದರೂ, ಆ ಗಾಯಗೊಂಡವರೇ ತಮ್ಮ ತಮ್ಮ ಗುಡಾರಗಳಿಂದ ಎದ್ದುಬಂದು ಈ ನಗರವನ್ನು ಬೆಂಕಿಯಿಂದ ಸುಟ್ಟುಬಿಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ನಿಮ್ಮನ್ನು ಪ್ರತಿಭಟಿಸುವ ಕಸ್ದೀಯರಲ್ಲಿ ಗಾಯಪಟ್ಟವರು ಮಾತ್ರ ಉಳಿಯುವಂತೆ ನೀವು ಆ ಸೈನ್ಯವನ್ನೆಲ್ಲಾ ಒಂದು ವೇಳೆ ಹೊಡೆದಿದ್ದರೂ ಆ ಗಾಯಪಟ್ಟವರೇ ತಮ್ಮ ತಮ್ಮ ಗುಡಾರಗಳಿಂದ ಎದ್ದುಬಂದು ಈ ಪಟ್ಟಣವನ್ನು ಬೆಂಕಿಯಿಂದ ಸುಟ್ಟುಬಿಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ನಿಮ್ಮ ಸಂಗಡ ಯುದ್ಧಮಾಡುವ ಕಸ್ದೀಯರ ಸೈನ್ಯವನ್ನೆಲ್ಲಾ ನೀವು ಹೊಡೆದಿದ್ದಾಗ್ಯೂ, ಗಾಯಪಟ್ಟ ಮನುಷ್ಯರು ಮಾತ್ರ ಅವರೊಳಗೆ ಉಳಿದಿದ್ದಾಗ್ಯೂ ಅವರೇ ತಮ್ಮ ತಮ್ಮ ಡೇರೆಗಳಲ್ಲಿ ಎದ್ದು, ಈ ಪಟ್ಟಣವನ್ನು ಬೆಂಕಿಯಿಂದ ಸುಡುವರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 37:10
15 ತಿಳಿವುಗಳ ಹೋಲಿಕೆ  

ಯೆಹೋವನು ತನ್ನ ಸೈನ್ಯವನ್ನು ಮಹಾಧ್ವನಿಯಿಂದ ಕರೆಯುತ್ತಾನೆ. ಆತನ ಶಿಬಿರವು ದೊಡ್ಡದಾಗಿದೆ. ಆ ಸೈನ್ಯವು ಆತನ ಆಜ್ಞೆಯನ್ನು ಪಾಲಿಸುತ್ತದೆ; ಆ ಸೈನ್ಯವು ಮಹಾ ಬಲಿಷ್ಠವಾಗಿದೆ. ಯೆಹೋವನ ಮಹಾದಿನವು ಮಹಾ ಭಯಂಕರವಾದ ದಿನವಾಗಿದೆ. ಅದನ್ನು ಸಹಿಸಲು ಯಾರಿಗೂ ಸಾಧ್ಯವಿಲ್ಲ.


ಯೆಹೋವನು ಬಾಬಿಲೋನಿನ ವಿರುದ್ಧ ಮಾಡಬೇಕೆಂದಿರುವುದನ್ನು ಕೇಳಿರಿ. “ಬಾಬಿಲೋನಿನ ಜನರ ವಿರುದ್ಧ ಯೆಹೋವನು ನಿಶ್ಚಯಿಸಿರುವುದನ್ನು ಕೇಳಿರಿ. ಶತ್ರುವು ಬಾಬಿಲೋನಿನ ಕುರಿಮರಿಗಳನ್ನು (ಜನರನ್ನು) ಕೊಂಡೊಯ್ಯುವನು. ಬಾಬಿಲೋನಿನ ಹುಲ್ಲುಗಾವಲುಗಳು ಸಂಭವಿಸಿದ ನಾಶನಕ್ಕೆ ಬೆದರುವವು.


ಶತ್ರುವಿನಲ್ಲಿ ಒಬ್ಬನು ಬೆದರಿಸಿದರೆ ನಿಮ್ಮಲ್ಲಿರುವ ಸಾವಿರ ಮಂದಿ ಓಡುವರು. ಐದು ಮಂದಿ ವೈರಿಗಳು ಬೆದರಿಕೆ ಹಾಕಿದರೆ ನೀವೆಲ್ಲರೂ ಅವರ ಮುಂದಿನಿಂದ ಓಡಿಹೋಗುವಿರಿ. ಕೊನೆಗೆ ನಿಮ್ಮ ಸೈನ್ಯದಲ್ಲಿ ಉಳಿಯುವ ವಸ್ತು ಯಾವದೆಂದರೆ ಬೆಟ್ಟದ ಮೇಲೆ ನೆಟ್ಟಿರುವ ನಿಮ್ಮ ಧ್ವಜಸ್ತಂಭವೊಂದೇ.


ಕಸ್ದೀಯರ ಪ್ರದೇಶದಲ್ಲಿಯೇ ಬಾಬಿಲೋನಿನ ಸೈನಿಕರನ್ನು ಕೊಲ್ಲಲಾಗುವುದು. ಬಾಬಿಲೋನಿನ ಬೀದಿಗಳಲ್ಲಿಯೇ ಅವರು ಗಾಯಗೊಳ್ಳುವರು.”


ಎದೋಮ್ಯರಿಗೆ ಯೆಹೋವನು ಮಾಡಬೇಕೆಂದಿರುವುದನ್ನು ಕೇಳಿರಿ. ತೇಮಾನ್ಯರ ಬಗ್ಗೆ ಯೆಹೋವನು ಏನು ನಿರ್ಧರಿಸಿದ್ದಾನೆಂಬುದನ್ನು ಕೇಳಿರಿ. ಎದೋಮಿನ ಕುರಿಮರಿಗಳನ್ನು (ಜನರನ್ನು) ಶತ್ರು ಎಳೆದುಕೊಂಡು ಹೋಗುವನು. ಸಂಭವಿಸಿದ ಸಂಗತಿಯನ್ನು ನೋಡಿ ಎದೋಮಿನ ಹುಲ್ಲುಗಾವಲುಗಳು ಬೆದರುವವು.


ಬಳಿಕ ಬಾಬಿಲೋನಿನ ಸೈನ್ಯವು ಇಲ್ಲಿಗೆ ಬರುವುದು. ಅವರು ಜೆರುಸಲೇಮಿನ ಮೇಲೆ ಧಾಳಿ ಮಾಡುವರು. ಆಗ ಬಾಬಿಲೋನಿನ ಆ ಸೈನ್ಯವು ಜೆರುಸಲೇಮನ್ನು ವಶಪಡಿಸಿಕೊಂಡು ಅದನ್ನು ಸುಟ್ಟುಹಾಕುವುದು.’


ಆದರೆ ದುಷ್ಟ ಅರಸನಾದ ನೀನು ನಿನ್ನ ಸಮಾಧಿಯಿಂದ ತೆಗೆದುಹಾಕಲ್ಪಟ್ಟಿರುವೆ. ಮರದಿಂದ ಬೇರ್ಪಡಿಸಿದ ಕೊಂಬೆಯಂತೆ ನೀನಿರುವೆ. ಯುದ್ಧದಲ್ಲಿ ಸತ್ತ ಸೈನಿಕನಂತೆ ನೀನಿರುವೆ. ಬೇರೆ ಸೈನಿಕರು ಅವನ ಮೇಲೆ ನಡೆದಾಡುವರು. ಈಗ ನೀನು ಸಾಧಾರಣ ಹೆಣದಂತೆ ಇರುವೆ. ಸಮಾಧಿಯ ಬಟ್ಟೆಗಳಿಂದ ನೀನು ಸುತ್ತಲ್ಪಟ್ಟಿರುವೆ.


ಆದರೆ ಶತ್ರುವು ಬಾಬಿಲೋನಿನವರನ್ನು ಹಿಂದಟ್ಟಿಕೊಂಡು ಹೋಗುವನು. ಶತ್ರುವು ಅವನನ್ನು ಹಿಡಿದು ತನ್ನ ಕತ್ತಿಯಿಂದ ಕೊಲ್ಲುವನು.


ನೀವು ಕೈದಿಗಳಂತೆ ತಲೆತಗ್ಗಿಸುವಿರಿ, ಸತ್ತಹೆಣಗಳಂತೆ ನೆಲದ ಮೇಲೆ ಬೀಳುವಿರಿ. ಆದರೆ ಅದರಿಂದ ನಿಮಗೆ ಪ್ರಯೋಜನವಾಗದು. ದೇವರು ನಿಮ್ಮ ಮೇಲೆ ಬಹಳವಾಗಿ ಕೋಪಗೊಂಡಿದ್ದಾನೆ. ನಿಮ್ಮನ್ನು ಇನ್ನೂ ಶಿಕ್ಷಿಸಲು ಸಿದ್ಧನಾಗಿದ್ದಾನೆ.


ಜೆರುಸಲೇಮ್ ನಗರಕ್ಕೆ ತೊಂದರೆಯನ್ನು ಉಂಟುಮಾಡಬೇಕೆಂದು ನಾನು ನಿಶ್ಚಯಿಸಿದ್ದೇನೆ. ನಾನು ಈ ನಗರಕ್ಕೆ ಸಹಾಯಮಾಡುವದಿಲ್ಲ.’” ಇದು ಯೆಹೋವನಿಂದ ಬಂದ ಸಂದೇಶ. “‘ಜೆರುಸಲೇಮ್ ನಗರವನ್ನು ನಾನು ಬಾಬಿಲೋನಿನ ರಾಜನಿಗೆ ಒಪ್ಪಿಸುತ್ತೇನೆ. ಅವನು ಅದನ್ನು ಬೆಂಕಿಯಿಂದ ಸುಟ್ಟುಹಾಕುತ್ತಾನೆ.’”


ಬಾಬಿಲೋನಿನ ಸೈನ್ಯವು ಈಗಾಗಲೇ ಜೆರುಸಲೇಮ್ ನಗರದ ಮೇಲೆ ಧಾಳಿ ಮಾಡುತ್ತಿದೆ. ಸೈನಿಕರು ಬೇಗನೆ ನಗರವನ್ನು ಪ್ರವೇಶಿಸಿ ಅದಕ್ಕೆ ಬೆಂಕಿಹಚ್ಚಿ ಸುಟ್ಟುಹಾಕುವರು. ಜೆರುಸಲೇಮಿನ ಜನರು ತಮ್ಮ ಮನೆಯ ಮಾಳಿಗೆಯ ಮೇಲೆ ಸುಳ್ಳುದೇವರಾದ ಬಾಳನಿಗೆ ನೈವೇದ್ಯವನ್ನು ಅರ್ಪಿಸಿ ನಾನು ಕೋಪಿಸಿಕೊಳ್ಳುವಂತೆ ಮಾಡಿದ ಕೆಲವು ಮನೆಗಳು ಈ ನಗರದಲ್ಲಿವೆ. ಅದಲ್ಲದೆ ಕೆಲವು ಜನರು ಅನ್ಯದೇವತೆಗಳಿಗೆ ಪಾನನೈವೇದ್ಯವನ್ನು ಅರ್ಪಿಸಿರುವರು. ಬಾಬಿಲೋನಿನ ಸೈನ್ಯವು ಆ ಮನೆಗಳನ್ನು ಸುಟ್ಟುಹಾಕುವುದು.


ಈಜಿಪ್ಟ್ ದೇಶದ ಫರೋಹನ ಸೈನ್ಯದೊಂದಿಗೆ ಕಾದಾಡಲು ಬಾಬಿಲೋನಿನ ಸೈನ್ಯವು ಜೆರುಸಲೇಮನ್ನು ಬಿಟ್ಟುಹೋದ ಮೇಲೆ


ನನ್ನ ಶೂರ ಸೈನಿಕರನ್ನೆಲ್ಲಾ ಯೆಹೋವನು ತಿರಸ್ಕರಿಸಿದ್ದಾನೆ. ಆ ಸೈನಿಕರು ನಗರದ ಒಳಭಾಗದಲ್ಲಿದ್ದರು. ಆಗ ಯೆಹೋವನು ನನ್ನ ವಿರುದ್ಧ ಒಂದು ಜನರ ಗುಂಪನ್ನು ತಂದನು. ಆತನು ನನ್ನ ತರುಣ ಸೈನಿಕರನ್ನು ಕೊಲ್ಲುವ ಸಲುವಾಗಿ ಆ ಜನರನ್ನು ತಂದನು. ಯೆಹೋವನು ದ್ರಾಕ್ಷಿಯನ್ನು ಆಲೆಯಲ್ಲಿ ತುಳಿದಿದ್ದಾನೆ. ಆ ದ್ರಾಕ್ಷಿಆಲೆಯು ಜೆರುಸಲೇಮ್ ಕನ್ನಿಕೆಗೆ ಸೇರಿದ್ದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು