ಯೆರೆಮೀಯ 36:8 - ಪರಿಶುದ್ದ ಬೈಬಲ್8 ಪ್ರವಾದಿಯಾದ ಯೆರೆಮೀಯನು ತನಗೆ ಮಾಡಲು ಹೇಳಿದಂತೆ ನೇರೀಯನ ಮಗನಾದ ಬಾರೂಕನು ಮಾಡಿದನು. ಬಾರೂಕನು ಸುರುಳಿಯ ಮೇಲೆ ಬರೆದ ಯೆಹೋವನ ಸಂದೇಶಗಳನ್ನು ಗಟ್ಟಿಯಾಗಿ ಯೆಹೋವನ ಆಲಯದಲ್ಲಿ ಓದಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ನೇರೀಯನ ಮಗನಾದ ಬಾರೂಕನು ಸುರುಳಿಯಲ್ಲಿನ ಯೆಹೋವನ ಮಾತುಗಳನ್ನು ಯೆಹೋವನ ಆಲಯದೊಳಗೆ ಓದಿ ಪ್ರವಾದಿಯಾದ ಯೆರೆಮೀಯನು ಆಜ್ಞಾಪಿಸಿದಂತೆ ಮಾಡಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಪ್ರವಾದಿ ಯೆರೆಮೀಯನು ವಿಧಿಸಿದಂತೆಯೇ ನೇರೀಯನ ಮಗ ಬಾರೂಕನು ಸುರುಳಿಯಲ್ಲಿದ್ದ ಸರ್ವೇಶ್ವರನ ವಾಕ್ಯಗಳನ್ನು ಸರ್ವೇಶ್ವರನ ಆಲಯದೊಳಗೆ ಓದಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ನೇರೀಯನ ಮಗನಾದ ಬಾರೂಕನು ಸುರಳಿಯಲ್ಲಿನ ಯೆಹೋವನ ಮಾತುಗಳನ್ನು ಯೆಹೋವನ ಆಲಯದೊಳಗೆ ಓದಿ ಪ್ರವಾದಿಯಾದ ಯೆರೆಮೀಯನು ವಿಧಿಸಿದಂತೆಯೇ ಮಾಡಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ಆಗ ನೇರೀಯನ ಮಗ ಬಾರೂಕನು ಪ್ರವಾದಿಯಾದ ಯೆರೆಮೀಯನು ತನಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಿ, ಸುರುಳಿಯಲ್ಲಿನ ಯೆಹೋವ ದೇವರ ವಾಕ್ಯಗಳನ್ನು ಯೆಹೋವ ದೇವರ ಆಲಯದಲ್ಲಿ ಓದಿದನು. ಅಧ್ಯಾಯವನ್ನು ನೋಡಿ |
ನಾನು ಅವುಗಳನ್ನು ಬಾರೂಕನ ಕೈಗೆ ಕೊಟ್ಟೆನು. ಬಾರೂಕನು ನೇರೀಯನ ಮಗನಾಗಿದ್ದನು. ನೇರೀಯನು ಮಹ್ಸೇಮನ ಮಗನಾಗಿದ್ದನು. ಮೊಹರು ಮಾಡಿದ ಕ್ರಯಪತ್ರದಲ್ಲಿ ನಾನು ಹೊಲವನ್ನು ಕ್ರಯಕ್ಕೆ ಕೊಂಡ ಎಲ್ಲಾ ಷರತ್ತುಗಳಿದ್ದವು. ನನ್ನ ಚಿಕ್ಕಪ್ಪನ ಮಗನಾದ ಹನಮೇಲನು ಮತ್ತು ಉಳಿದ ಸಾಕ್ಷಿಗಳು ಅಲ್ಲಿದ್ದಾಗಲೇ ನಾನು ಈ ಕ್ರಯಪತ್ರವನ್ನು ಬಾರೂಕನ ಕೈಗೆ ಕೊಟ್ಟೆನು. ಆ ಸಾಕ್ಷಿಗಳು ಸಹ ಈ ಕ್ರಯಪತ್ರಕ್ಕೆ ಸಹಿಹಾಕಿದ್ದರು. ಆ ಅಂಗಳದಲ್ಲಿ ಕುಳಿತ ಹಲವಾರು ಜನ ಯೆಹೂದ್ಯರು ನಾನು ಬಾರೂಕನ ಕೈಗೆ ಆ ಕ್ರಯಪತ್ರ ಕೊಡುವದನ್ನು ನೋಡಿದರು.