ಯೆರೆಮೀಯ 36:29 - ಪರಿಶುದ್ದ ಬೈಬಲ್29 ಯೆರೆಮೀಯನೇ, ಯೆಹೂದದ ರಾಜನಾದ ಯೆಹೋಯಾಕೀಮನಿಗೆ ಹೀಗೆ ಹೇಳು, ‘ಯೆಹೋವನು ಹೀಗೆನ್ನುತ್ತಾನೆ: ಯೆಹೋಯಾಕೀಮನೇ, ನೀನು ಆ ಸುರುಳಿಯನ್ನು ಸುಟ್ಟುಬಿಟ್ಟೆ. ನೀನು, “ಬಾಬಿಲೋನ್ ರಾಜನು ಖಂಡಿತವಾಗಿ ಬಂದು ಈ ದೇಶವನ್ನು ನಾಶಮಾಡುವನು ಎಂದು ಯೆರೆಮೀಯನು ಏಕೆ ಬರೆದನು? ಬಾಬಿಲೋನ್ ರಾಜನು ಈ ದೇಶದ ಮನುಷ್ಯರನ್ನು ಮತ್ತು ಪ್ರಾಣಿಗಳನ್ನು ನಾಶಮಾಡುವನು ಎಂದು ಏಕೆ ಹೇಳಿದನು?” ಎಂದು ಕೇಳಿದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201929 ಅಲ್ಲದೆ ಯೆಹೂದದ ಅರಸನಾದ ಯೆಹೋಯಾಕೀಮನ ವಿಷಯದಲ್ಲಿ ಹೀಗೆ ಬರೆಯಿಸು, ‘ಯೆಹೋವನು ಇಂತೆನ್ನುತ್ತಾನೆ, ಬಾಬೆಲಿನ ಅರಸನು ಬಂದು ಈ ದೇಶವನ್ನು ಜನ, ಪಶುಗಳಿಲ್ಲದಂತೆ ಹಾಳುಮಾಡುವುದು ಖಂಡಿತ ಎಂದು ಸುರುಳಿಯನ್ನು ಬರೆಯಿಸಿದ್ದೇಕೆ ಎಂಬುದಾಗಿ ನೀನು ಆಕ್ಷೇಪಿಸಿ ಅದನ್ನು ಸುಟ್ಟುಬಿಟ್ಟಿಯಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)29 ಅದೂ ಅಲ್ಲದೆ ಜುದೇಯದ ಅರಸ ಯೆಹೋಯಾಕೀಮನ ವಿಷಯದಲ್ಲಿ ಹೀಗೆ ಬರೆಯಿಸು: ‘ಸರ್ವೇಶ್ವರ ಹೀಗೆಂದಿದ್ದಾರೆ - ಬಾಬಿಲೋನಿನ ಅರಸನು ಬಂದು ಈ ನಾಡನ್ನು ಜನ ಅಥವಾ ಜಾನುವಾರುಗಳಿಲ್ಲದಂತೆ ಹಾಳುಮಾಡುವುದು ಖಂಡಿತ ಎಂದು ಈ ಸುರುಳಿಯಲ್ಲಿ ಬರೆಸಿದ್ದು ಏಕೆ ಎಂದು ಪ್ರಶ್ನಿಸಿ, ಆಕ್ಷೇಪಿಸಿ ಅದನ್ನು ನೀನು ಸುಟ್ಟುಬಿಟ್ಟಿಯಲ್ಲವೆ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)29 ಅಲ್ಲದೆ ಯೆಹೂದದ ಅರಸನಾದ ಯೆಹೋಯಾಕೀಮನ ವಿಷಯದಲ್ಲಿ ಹೀಗೆ ಬರೆಯಿಸು - ಯೆಹೋವನು ಇಂತೆನ್ನುತ್ತಾನೆ - ಬಾಬೆಲಿನ ಅರಸನು ಬಂದು ಈ ದೇಶವನ್ನು ಜನಪಶುಗಳಿಲ್ಲದಂತೆ ಹಾಳುಮಾಡುವದು ಖಂಡಿತ ಎಂದು ಈ ಸುರಳಿಯನ್ನು ಬರೆಯಿಸಿದ್ದೇಕೆ ಎಂಬದಾಗಿ ನೀನು ಆಕ್ಷೇಪಿಸಿ ಅದನ್ನು ಸುಟ್ಟುಬಿಟ್ಟಿಯಲ್ಲ; ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ29 ಯೆಹೂದದ ಅರಸನಾದ ಯೆಹೋಯಾಕೀಮನ ವಿಷಯದಲ್ಲಿ ಹೀಗೆ ಬರೆಯಿಸು, ‘ಯೆಹೋವ ದೇವರು ಹೀಗೆ ಹೇಳುತ್ತಾರೆ: “ಬಾಬಿಲೋನಿನ ಅರಸನು ನಿಶ್ಚಯವಾಗಿ ಬಂದು ಈ ದೇಶವನ್ನು ನಾಶಮಾಡಿ, ಮನುಷ್ಯರನ್ನೂ, ಮೃಗಗಳನ್ನೂ ಅದರೊಳಗಿಂದ ಹಾಳು ಮಾಡುವುದು ಖಂಡಿತ, ಎಂದು ಇದರಲ್ಲಿ ಏಕೆ ಬರೆದಿದ್ದೀ?” ಎಂದು ಹೇಳಿ ನೀನು ಈ ಸುರುಳಿಯನ್ನು ಸುಟ್ಟಿದ್ದೀ. ಅಧ್ಯಾಯವನ್ನು ನೋಡಿ |
“ಈ ಜನರನ್ನು ನೋಡು. ತಮ್ಮನ್ನು ಸೃಷ್ಟಿದಾತನೊಂದಿಗೆ ವಾದಿಸುತ್ತಿದ್ದಾರೆ. ನನ್ನೊಂದಿಗೆ ವಾದಿಸುವದನ್ನು ನೋಡಿರಿ! ಅವರು ಒಡೆಯಲ್ಪಟ್ಟ ಮಣ್ಣಿನ ಮಡಿಕೆಯ ತುಂಡುಗಳಂತಿದ್ದಾರೆ. ಒಬ್ಬನು ಮೃದುವಾದ ಜೇಡಿಮಣ್ಣಿನಿಂದ ಮಡಿಕೆಯನ್ನು ಮಾಡುತ್ತಾನೆ. ಆ ಮಡಿಕೆಯು ಕುಂಬಾರನಿಗೆ, ‘ನೀನು ಮಾಡುತ್ತಿರುವುದೇನು?’ ಎಂದು ಪ್ರಶ್ನಿಸುವದಿಲ್ಲ. ತಯಾರಿಸಲ್ಪಟ್ಟ ವಸ್ತುಗಳಿಗೆ ತಯಾರಿಸಿದವನನ್ನು ಪ್ರಶ್ನಿಸುವ ಅಧಿಕಾರವಿಲ್ಲ. ಜನರು ಈ ಜೇಡಿಮಣ್ಣಿನಂತೆ ಇದ್ದಾರೆ.
ಆದ್ದರಿಂದ ನಾನು ಉತ್ತರದ ಎಲ್ಲಾ ಜನಾಂಗಗಳನ್ನು ಕರೆಸುತ್ತೇನೆ.” ಇದು ಯೆಹೋವನ ಸಂದೇಶ. “ನಾನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನನ್ನು ಕೂಡಲೇ ಕರೆಸುವೆನು. ಅವನು ನನ್ನ ಸೇವಕ. ನಾನು ಆ ಜನರನ್ನು ಯೆಹೂದ ದೇಶದ ವಿರುದ್ಧವಾಗಿಯೂ ಯೆಹೂದ್ಯರ ವಿರುದ್ಧವಾಗಿಯೂ ತರುತ್ತೇನೆ. ನಾನು ನಿಮ್ಮ ಸುತ್ತಮುತ್ತಲಿನಲ್ಲಿದ್ದ ಜನಾಂಗಗಳ ವಿರುದ್ಧವಾಗಿಯೂ ಅವರನ್ನು ಕರೆತರುವೆನು. ನಾನು ಆ ದೇಶಗಳನ್ನೆಲ್ಲ ನಾಶಮಾಡುವೆನು. ನಾನು ಆ ಭೂಮಿಗಳನ್ನು ಶಾಶ್ವತವಾಗಿ ಬರಿದಾದ ಮರುಭೂಮಿಗಳನ್ನಾಗಿ ಮಾಡುವೆನು. ಜನರು ಆ ದೇಶಗಳನ್ನು ನೋಡಿ ಅವು ಹಾಳಾಗಿರುವುದನ್ನು ಕಂಡು ಬೆರಗಾಗಿ ಸಿಳ್ಳುಹಾಕುವರು.