ಯೆರೆಮೀಯ 35:7 - ಪರಿಶುದ್ದ ಬೈಬಲ್7 ನೀವೆಂದೂ ಮನೆಯನ್ನು ಕಟ್ಟಿಕೊಳ್ಳಬಾರದು, ಬೀಜಗಳನ್ನು ಬಿತ್ತಬಾರದು, ದ್ರಾಕ್ಷಿತೋಟಗಳನ್ನು ಬೆಳಸಬಾರದು. ನೀವು ಅವುಗಳಲ್ಲಿ ಒಂದನ್ನು ಕೂಡ ಎಂದಿಗೂ ಮಾಡಬಾರದು. ನೀವು ಕೇವಲ ಗುಡಾರಗಳಲ್ಲಿ ವಾಸಿಸಬೇಕು. ಆಗ ನೀವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆಹೋಗುವ ದೇಶದಲ್ಲಿ ಬಹಳ ಕಾಲದವರೆಗೆ ಇರಬಲ್ಲಿರಿ’ ಎಂದು ಆಜ್ಞಾಪಿಸಿದ್ದಾನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಮನೆಕಟ್ಟಬಾರದು, ಬೀಜ ಬಿತ್ತಬಾರದು, ದ್ರಾಕ್ಷಿತೋಟ ಮಾಡಬಾರದು, ಅನುಭವಿಸಲೂ ಬಾರದು, ನಿಮ್ಮ ಜೀವಮಾನವೆಲ್ಲಾ ಗುಡಾರಗಳಲ್ಲೇ ವಾಸಿಸಬೇಕು, ಇದರಿಂದ ನೀವು ತಂಗುವ ದೇಶದಲ್ಲಿ ನಿಮಗೆ ದೀರ್ಘಾಯುಷ್ಯವಾಗವುದು’” ಎಂದು ಅಪ್ಪಣೆಕೊಟ್ಟಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ಮನೆ ಕಟ್ಟಬಾರದು, ಬೀಜಬಿತ್ತಬಾರದು, ತೋಟಮಾಡಬಾರದು, ಕೊಂಡು ಸೊತ್ತಾಗಿಸಿಕೊಳ್ಳಬಾರದು. ಜೀವಮಾನವೆಲ್ಲ ಗುಡಾರಗಳಲ್ಲೇ ವಾಸಿಸಬೇಕು. ಇದರಿಂದ ನೀವು ತಂಗುವ ನಾಡಿನಲ್ಲಿ ದೀರ್ಘಕಾಲ ಉಳಿಯುವಿರಿ,’ ಎಂದು ಆಜ್ಞಾಪಿಸಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ಮನೆಕಟ್ಟಬಾರದು, ಬೀಜ ಬಿತ್ತಬಾರದು, ತೋಟ ಮಾಡಬಾರದು, ಅನುಭವಿಸಲೂ ಬಾರದು; ನಿಮ್ಮ ಜೀವಮಾನವೆಲ್ಲಾ ಗುಡಾರಗಳಲ್ಲೇ ವಾಸಿಸಬೇಕು; ಇದರಿಂದ ನೀವು ತಂಗುವ ದೇಶದಲ್ಲಿ ನಿಮಗೆ ದೀರ್ಘಾಯುಷ್ಯವಾಗುವದು ಎಂದು ಅಪ್ಪಣೆಕೊಟ್ಟಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ಮನೆ ಕಟ್ಟಬೇಡಿರಿ, ಬೀಜವನ್ನು ಬಿತ್ತಬೇಡಿರಿ; ದ್ರಾಕ್ಷಿತೋಟವನ್ನು ನೆಡಬೇಡಿರಿ, ಅಂಥದ್ದು ನಿಮಗಿರಬಾರದು. ಆದರೆ ನೀವು ಪರಕೀಯರ ದೇಶದಲ್ಲಿ ನಿಮ್ಮ ದಿನಗಳು ಬಹಳವಾಗಿರುವ ಹಾಗೆ ನಿಮ್ಮ ದಿವಸಗಳಲ್ಲೆಲ್ಲಾ ಗುಡಾರಗಳಲ್ಲಿ ವಾಸಮಾಡಬೇಕು. ಅಧ್ಯಾಯವನ್ನು ನೋಡಿ |