ಯೆರೆಮೀಯ 34:21 - ಪರಿಶುದ್ದ ಬೈಬಲ್21 ಯೆಹೂದದ ರಾಜನಾದ ಚಿದ್ಕೀಯನನ್ನೂ ಅವನ ನಾಯಕರುಗಳನ್ನೂ ನಾನು ಅವರ ಶತ್ರುಗಳಿಗೂ ಅವರನ್ನು ಕೊಲ್ಲಬಯಸುವ ಜನರಿಗೂ ಕೊಡುವೆನು. ಬಾಬಿಲೋನಿನ ಸೈನ್ಯವು ಜೆರುಸಲೇಮನ್ನು ಬಿಟ್ಟುಹೋಗಿದ್ದರೂ ನಾನು ಚಿದ್ಕೀಯ ಮತ್ತು ಅವನ ಜನರನ್ನು ಬಾಬಿಲೋನಿನ ಸೈನಿಕರ ಕೈಗೆ ಒಪ್ಪಿಸುತ್ತೇನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201921 ಯೆಹೂದದ ಅರಸನಾದ ಚಿದ್ಕೀಯನನ್ನೂ ಮತ್ತು ಅವನ ಪ್ರಧಾನರನ್ನೂ ಅವರ ಪ್ರಾಣ ಹುಡುಕುವ ಶತ್ರುಗಳ ಕೈಗೆ ಅಂದರೆ ನಿಮ್ಮನ್ನು ಬಿಟ್ಟುಹೋಗಿರುವ ಬಾಬೆಲಿನ ಅರಸನ ಕೈಗೆ ಕೊಡುವೆನು” ಎನ್ನುತ್ತಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)21 ಜುದೇಯದ ಅರಸ ಚಿದ್ಕೀಯನನ್ನೂ ಅವನ ಮಂತ್ರಿಗಳನ್ನೂ ಅವರ ಶತ್ರುಗಳಿಗೆ ಅಂದರೆ, ಅವರ ಪ್ರಾಣಹತ್ಯಕ್ಕಾಗಿ ಕಾದಿರುವ, ತಕ್ಷಣಕ್ಕೆ ಹಿಂದಿರುಗಿಹೋಗಿರುವ, ಬಾಬಿಲೋನಿಯದ ಅರಸನ ಕೈಗೆ ಕೊಡುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)21 ಯೆಹೂದದ ಅರಸನಾದ ಚಿದ್ಕೀಯನನ್ನೂ ಅವನ ಪ್ರಧಾನರನ್ನೂ ಅವರ ಪ್ರಾಣ ಹುಡುಕುವ ಶತ್ರುಗಳ ಕೈಗೆ, ಅಂದರೆ ನಿಮ್ಮನ್ನು ಬಿಟ್ಟುಹೋಗಿರುವ ಬಾಬೆಲಿನ ಅರಸನ ಕೈಗೆ ಕೊಡುವೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ21 “ಯೆಹೂದದ ಅರಸನಾದ ಚಿದ್ಕೀಯನನ್ನೂ, ಅವನ ಪ್ರಧಾನರನ್ನೂ ಅವರ ಶತ್ರುಗಳ ಕೈಯಲ್ಲಿಯೂ, ಅವರ ಪ್ರಾಣವನ್ನು ಹುಡುಕುವವರ ಕೈಯಲ್ಲಿಯೂ, ನಿಮ್ಮನ್ನು ಬಿಟ್ಟುಹೋಗಿರುವ ಬಾಬಿಲೋನಿನ ಅರಸನ ಸೈನ್ಯದ ಕೈಯಲ್ಲಿಯೂ ಒಪ್ಪಿಸುವೆನು. ಅಧ್ಯಾಯವನ್ನು ನೋಡಿ |
ನಾನು ಹೇಳಿದಂತೆ ಮಾಡುವೆನೆಂಬುದಕ್ಕೆ ಪ್ರಮಾಣ ಇದು. ಯೆಹೋವನು ಹೀಗೆ ಹೇಳಿದನು: ‘ಫರೋಹ ಹೊಫ್ರನೆಂಬುವನು ಈಜಿಪ್ಟಿನ ರಾಜನಾಗಿದ್ದಾನೆ. ಅವನ ಶತ್ರುಗಳು ಅವನನ್ನು ಕೊಲ್ಲಬಯಸುತ್ತಾರೆ. ನಾನು ಫರೋಹ ಹೊಫ್ರನನ್ನು ಅವನ ಶತ್ರುಗಳಿಗೆ ಒಪ್ಪಿಸುತ್ತೇನೆ. ಚಿದ್ಕೀಯನು ಯೆಹೂದದ ರಾಜನಾಗಿದ್ದನು. ನೆಬೂಕದ್ನೆಚ್ಚರನು ಚಿದ್ಕೀಯನ ವೈರಿಯಾಗಿದ್ದನು. ನಾನು ಚಿದ್ಕೀಯನನ್ನು ಅವನ ಶತ್ರುವಿನ ಕೈಗೆ ಒಪ್ಪಿಸಿದೆ. ಅದೇ ರೀತಿ ನಾನು ಫರೋಹ ಹೊಫ್ರನನ್ನು ಅವನ ವೈರಿಯ ಕೈಗೆ ಒಪ್ಪಿಸುತ್ತೇನೆ.’”