ಯೆರೆಮೀಯ 32:38 - ಪರಿಶುದ್ದ ಬೈಬಲ್38 ಇಸ್ರೇಲರು ಮತ್ತು ಯೆಹೂದ್ಯರು ನನ್ನ ಭಕ್ತರಾಗಿರುವರು, ನಾನು ಅವರ ದೇವರಾಗಿರುವೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201938 ಅವರು ನನಗೆ ಜನರಾಗಿರುವರು, ನಾನು ಅವರಿಗೆ ದೇವರಾಗಿರುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)38 ಅವರು ನನಗೆ ಪ್ರಜೆಯಾಗಿರುವರು. ನಾನು ಅವರಿಗೆ ದೇವರಾಗಿರುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)38 ಅವರು ನನಗೆ ಜನರಾಗಿರುವರು, ನಾನು ಅವರಿಗೆ ದೇವರಾಗಿರುವೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ38 ಅವರು ನನ್ನ ಜನರಾಗಿರುವರು. ನಾನು ಅವರಿಗೆ ದೇವರಾಗಿರುವೆನು. ಅಧ್ಯಾಯವನ್ನು ನೋಡಿ |
ಆ ಬಳಿಕ ನಾನು ಉಳಿದವರನ್ನು ಪರೀಕ್ಷಿಸುವೆನು. ಅವರಿಗೆ ಅನೇಕ ಸಂಕಟ ಬರಮಾಡುವೆನು. ಅದು ಬೆಳ್ಳಿಯನ್ನು ಬೆಂಕಿಯಲ್ಲಿ ಪರೀಕ್ಷಿಸಿದಂತಿರುವುದು. ಒಬ್ಬನು ಬಂಗಾರವನ್ನು ಪರೀಕ್ಷಿಸುವಂತೆ ನಾನು ಅವರನ್ನು ಪರೀಕ್ಷಿಸುವೆನು. ಆಗ ಅವರು ಸಹಾಯ ಮಾಡುವಂತೆ ನನಗೆ ಮೊರೆಯಿಡುವರು ಮತ್ತು ನಾನು ಅವರಿಗೆ ಉತ್ತರಕೊಡುವೆನು. ಆಗ ನಾನು, ‘ನೀವು ನನ್ನ ಜನರು’ ಎಂದು ಹೇಳುವೆನು. ಅದಕ್ಕವರು, ‘ಯೆಹೋವನು ನಮ್ಮ ದೇವರು’ ಎಂದು ಹೇಳುವರು.”
ನಿಮ್ಮ ದೇವರಾದ ಯೆಹೋವನು ತನ್ನ ವಿಶೇಷ ವಾಸಸ್ಥಾನವಾಗಿ ಯಾವ ಸ್ಥಳವನ್ನು ಆರಿಸಿಕೊಳ್ಳುತ್ತಾನೋ ಆ ಸ್ಥಳಕ್ಕೆ ನೀವು ಹೋಗಬೇಕು. ನಿಮ್ಮ ದೇವರಾದ ಯೆಹೋವನ ಜೊತೆಯಲ್ಲಿರುವುದಕ್ಕಾಗಿ ನೀವು ಅಲ್ಲಿಗೆ ಹೋಗಬೇಕು. ಆ ಸ್ಥಳದಲ್ಲಿ, ನೀವು ಬೆಳೆಯುವ ಬೆಳೆಗಳಲ್ಲಿ ಹತ್ತನೆ ಒಂದು ಭಾಗವನ್ನು, ನಿಮ್ಮ ಧಾನ್ಯಗಳಲ್ಲಿ ಹತ್ತನೆ ಒಂದು ಭಾಗವನ್ನು, ನಿಮ್ಮ ಹೊಸ ದ್ರಾಕ್ಷಾರಸವನ್ನು, ನಿಮ್ಮ ಎಣ್ಣೆಯನ್ನು, ನಿಮ್ಮ ಹಿಂಡುಗಳ ಮತ್ತು ಮಂದೆಗಳ ಚೊಚ್ಚಲು ಪಶುಗಳನ್ನು ಯೆಹೋವನ ಪ್ರಸನ್ನತೆಯಲ್ಲಿ ತಿನ್ನಬೇಕು. ನಿಮ್ಮ ದೇವರಾದ ಯೆಹೋವನನ್ನು ಗೌರವಿಸಬೇಕೆಂಬುದನ್ನು ನೀವು ಯಾವಾಗಲೂ ಈ ರೀತಿಯಲ್ಲಿ ಜ್ಞಾಪಕ ಮಾಡಿಕೊಳ್ಳುವಿರಿ.