Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 32:3 - ಪರಿಶುದ್ದ ಬೈಬಲ್‌

3 ಯೆಹೂದದ ರಾಜನಾದ ಚಿದ್ಕೀಯನು ಯೆರೆಮೀಯನನ್ನು ಆ ಕಾರಾಗೃಹದಲ್ಲಿಟ್ಟಿದ್ದನು. ಯೆರೆಮೀಯನು ಪ್ರವಾದಿಸಿದ ವಿಷಯಗಳನ್ನು ಚಿದ್ಕೀಯನು ಮೆಚ್ಚಿಕೊಂಡಿರಲಿಲ್ಲ. ಯೆರೆಮೀಯನು ಹೇಳಿದ್ದೇನೆಂದರೆ: “ಯೆಹೋವನು ಹೀಗೆನ್ನುತ್ತಾನೆ: ‘ನಾನು ತಕ್ಷಣವೇ ಜೆರುಸಲೇಮ್ ನಗರವನ್ನು ಬಾಬಿಲೋನಿನ ರಾಜನಿಗೆ ಒಪ್ಪಿಸುತ್ತೇನೆ. ನೆಬೂಕದ್ನೆಚ್ಚರನು ಈ ನಗರವನ್ನು ಸ್ವಾಧೀನಪಡಿಸಿಕೊಳ್ಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಯೆಹೂದದ ಅರಸನಾದ ಚಿದ್ಕೀಯನು ಯೆರೆಮೀಯನಿಗೆ, “ನೀನು ಪ್ರವಾದನೆ ಮಾಡುತ್ತಾ, ‘ಯೆಹೋವನು ಇಂತೆನ್ನುತ್ತಾನೆ, ನಾನು ಈ ಪಟ್ಟಣವನ್ನು ಬಾಬೆಲಿನ ಅರಸನ ಕೈಗೆ ಸಿಕ್ಕಿಸುವೆನು, ಅವನು ಇದನ್ನು ಆಕ್ರಮಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಜುದೇಯದ ಅರಸ ಚಿದ್ಕೀಯನು ಯೆರೆಮೀಯನಿಗೆ, “ನೀನು ಪ್ರವಾದನೆ ಮಾಡುತ್ತಾ, ‘ಸರ್ವೇಶ್ವರನೇ ಹೀಗೆಂದಿದ್ದಾರೆ: ನಾನು ಈ ನಗರವನ್ನು ಬಾಬಿಲೋನಿಯದ ಅರಸನ ಕೈಗೆ ಸಿಕ್ಕಿಸುವೆನು. ಅವನು ಇದನ್ನು ಆಕ್ರಮಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಯೆಹೂದದ ಅರಸನಾದ ಚಿದ್ಕೀಯನು ಯೆರೆಮೀಯನಿಗೆ - ನೀನು ಪ್ರವಾದನೆ ಮಾಡುತ್ತಾ - ಯೆಹೋವನು ಇಂತೆನ್ನುತ್ತಾನೆ - ನಾನು ಈ ಪಟ್ಟಣವನ್ನು ಬಾಬೆಲಿನ ಅರಸನ ಕೈಗೆ ಸಿಕ್ಕಿಸುವೆನು, ಅವನು ಇದನ್ನು ಆಕ್ರವಿುಸುವನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಯೆಹೂದದ ಅರಸ ಚಿದ್ಕೀಯನು ಯೆರೆಮೀಯನಿಗೆ, “ನೀನು ಪ್ರವಾದನೆ ಮಾಡುತ್ತಾ, ‘ಯೆಹೋವ ದೇವರೇ ಹೀಗೆಂದಿದ್ದಾರೆ: ನಾನು ಈ ನಗರವನ್ನು ಬಾಬಿಲೋನಿಯದ ಅರಸನ ಕೈಗೆ ಸಿಕ್ಕಿಸುವೆನು. ಅವನು ಇದನ್ನು ವಶಪಡಿಸಿಕೊಳ್ಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 32:3
23 ತಿಳಿವುಗಳ ಹೋಲಿಕೆ  

“ನಮಗೆ ಹೇಳು! ನೀನು ಯಾವ ಅಧಿಕಾರದಿಂದ ಈ ಸಂಗತಿಗಳನ್ನು ಮಾಡುತ್ತಿರುವೆ? ಈ ಅಧಿಕಾರವನ್ನು ನಿನಗೆ ಯಾರು ಕೊಟ್ಟರು?” ಎಂದು ಕೇಳಿದರು.


ಬೇತೇಲಿನಲ್ಲಿ ಇನ್ನು ನೀನು ಪ್ರವಾದಿಸುವದು ಬೇಡ. ಇದು ಯಾರೊಬ್ಬಾಮನ ಪವಿತ್ರಸ್ಥಳ. ಇದು ಇಸ್ರೇಲಿನ ದೇವಾಲಯ” ಎಂದು ಹೇಳಿದನು.


“ನನ್ನ ಒಡೆಯನಾದ ರಾಜನೇ, ಆ ಅಧಿಕಾರಿಗಳು ದುಷ್ಟ ರೀತಿಯಲ್ಲಿ ವರ್ತಿಸಿದ್ದಾರೆ. ಅವರು ಪ್ರವಾದಿಯಾದ ಯೆರೆಮೀಯನೊಂದಿಗೆ ದುಷ್ಟತನದಿಂದ ವ್ಯವಹರಿಸಿದ್ದಾರೆ. ಅವರು ಅವನನ್ನು ಒಂದು ಬಾವಿಯಲ್ಲಿ ಎಸೆದಿದ್ದಾರೆ. ಅವನನ್ನು ಅಲ್ಲಿಯೇ ಸಾಯಲು ಬಿಟ್ಟಿದ್ದಾರೆ” ಎಂದು ಹೇಳಿದನು.


ಯೆರೆಮೀಯನು ಜನರಿಗೆ ಹೇಳುತ್ತಿರುವ ವಿಷಯಗಳನ್ನು ಕೇಳಿದ ರಾಜಾಧಿಕಾರಿಗಳು ರಾಜನಾದ ಚಿದ್ಕೀಯನ ಬಳಿಗೆ ಹೋಗಿ, “ಯೆರೆಮೀಯನಿಗೆ ಮರಣದಂಡನೆಯಾಗಬೇಕು. ಇನ್ನೂ ನಗರದಲ್ಲಿರುವ ಸೈನಿಕರನ್ನೂ ಎಲ್ಲರನ್ನೂ ತನ್ನ ಮಾತುಗಳಿಂದ ಧೈರ್ಯಗೆಡಿಸುತ್ತಿದ್ದಾನೆ. ನಮಗೆ ಒಳ್ಳೆಯದಾಗಬೇಕೆಂದು ಅವನು ಬಯಸದೆ ಜೆರುಸಲೇಮಿನ ಜನರ ನಾಶನವನ್ನು ಬಯಸುತ್ತಾನೆ” ಎಂದು ಹೇಳಿದರು.


“‘ಆದರೆ ಈಗ ಕೆಲವು ಜನಾಂಗಗಳು ಅಥವಾ ರಾಜ್ಯಗಳು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನನ್ನು ಸೇವಿಸಲು ಒಪ್ಪಲಿಲ್ಲ. ಅವುಗಳು ಅವನ ನೊಗವನ್ನು ತಮ್ಮ ಕತ್ತಿನ ಮೇಲೆ ಇಟ್ಟುಕೊಳ್ಳಲು ಒಪ್ಪಲಿಲ್ಲ. ಆದ್ದರಿಂದ ನಾನು ಆ ಜನಾಂಗವನ್ನು ಖಡ್ಗ, ಹಸಿವು ಮತ್ತು ಭಯಂಕರ ವ್ಯಾಧಿಗಳಿಂದ ಶಿಕ್ಷಿಸುತ್ತೇನೆ, ಇದು ಯೆಹೋವನಿಂದ ಬಂದ ಸಂದೇಶ. ನಾನು ಆ ಜನಾಂಗವನ್ನು ನಾಶಗೊಳಿಸುವವರೆಗೂ ಹಾಗೆ ಮಾಡುವೆನು. ಅವನ ವಿರುದ್ಧ ಹೋರಾಡುವ ಜನಾಂಗವನ್ನು ನಾಶಮಾಡುವದಕ್ಕಾಗಿ ನಾನು ನೆಬೂಕದ್ನೆಚ್ಚರನನ್ನು ಉಪಯೋಗಿಸುತ್ತೇನೆ.


ಯೆಹೋವನೇ, ನೀನು ನಂಬಿಗಸ್ತರಾದ ಜನರನ್ನು ಹುಡುಕುವೆ. ನೀನು ಯೆಹೂದದ ಜನರಿಗೆ ಹೊಡೆದೆ, ಆದರೆ ಅವರಿಗೆ ಅದರಿಂದ ನೋವಾಗಲಿಲ್ಲ. ನೀನು ಅವರನ್ನು ಹಾಳುಮಾಡಿದೆ, ಆದರೆ ಅದರಿಂದ ಅವರು ಪಾಠವನ್ನೂ ಕಲಿಯಲಿಲ್ಲ. ಅವರು ತಮ್ಮ ದುಷ್ಕೃತ್ಯಗಳಿಗಾಗಿ ಪಶ್ಚಾತ್ತಾಪಪಡಲಿಲ್ಲ. ಅವರು ಬಹಳ ಹಟಮಾರಿಗಳಾದರು.


“ಯೆಹೂದದ ಜನರೇ ನಾನು ನಿಮ್ಮನ್ನು ಶಿಕ್ಷಿಸಿದೆ, ಆದರೆ ಅದರಿಂದ ಪ್ರಯೋಜನವಾಗಲಿಲ್ಲ. ಶಿಕ್ಷಿಸಿದರೂ ನೀವು ಹಿಂತಿರುಗಿ ಬರಲಿಲ್ಲ. ನಿಮ್ಮಲ್ಲಿಗೆ ಬಂದ ಪ್ರವಾದಿಗಳನ್ನು ನೀವು ಕತ್ತಿಯಿಂದ ಕೊಂದುಹಾಕಿದಿರಿ. ನೀವು ಅಪಾಯಕಾರಿಯಾದ ಸಿಂಹದಂತಿದ್ದು ಪ್ರವಾದಿಗಳನ್ನು ಕೊಂದುಹಾಕಿದಿರಿ.”


ಆಹಾಜನಿಗೆ ಸಂಕಟ ಬಂದಾಗಲೂ ಇನ್ನೂ ಹೆಚ್ಚಾಗಿ ಪಾಪ ಮಾಡುತ್ತಾ ಯೆಹೋವನಿಗೆ ಇನ್ನೂ ಹೆಚ್ಚಾಗಿ ದ್ರೋಹಿಯಾದನು.


ಆದರೆ ಈಜಿಪ್ಟಿನ ರಾಜನು ಅವರಿಗೆ, “ಮೋಶೆ ಆರೋನರೇ, ನೀವು ಕೆಲಸಗಾರರಿಗೆ ತೊಂದರೆ ಮಾಡುತ್ತಿದ್ದೀರಿ, ಅವರು ತಮ್ಮ ಕೆಲಸ ಮಾಡಲಿ! ನೀವು ನಿಮ್ಮ ಕೆಲಸವನ್ನು ಮಾಡಿ!


ಆಗ ಯೆರೆಮೀಯನು ಪಷ್ಹೂರ ಮತ್ತು ಚೆಫನ್ಯರಿಗೆ ಹೀಗೆ ಉತ್ತರಕೊಟ್ಟನು: “ರಾಜನಾದ ಚಿದ್ಕೀಯನಿಗೆ ಹೇಳಿರಿ.


ಯೆಹೂದದ ರಾಜನಾದ ಚಿದ್ಕೀಯನನ್ನೂ ಅವನ ನಾಯಕರುಗಳನ್ನೂ ನಾನು ಅವರ ಶತ್ರುಗಳಿಗೂ ಅವರನ್ನು ಕೊಲ್ಲಬಯಸುವ ಜನರಿಗೂ ಕೊಡುವೆನು. ಬಾಬಿಲೋನಿನ ಸೈನ್ಯವು ಜೆರುಸಲೇಮನ್ನು ಬಿಟ್ಟುಹೋಗಿದ್ದರೂ ನಾನು ಚಿದ್ಕೀಯ ಮತ್ತು ಅವನ ಜನರನ್ನು ಬಾಬಿಲೋನಿನ ಸೈನಿಕರ ಕೈಗೆ ಒಪ್ಪಿಸುತ್ತೇನೆ.


ಯೆರೆಮೀಯನೇ, ಯೆಹೂದದ ರಾಜನಾದ ಯೆಹೋಯಾಕೀಮನಿಗೆ ಹೀಗೆ ಹೇಳು, ‘ಯೆಹೋವನು ಹೀಗೆನ್ನುತ್ತಾನೆ: ಯೆಹೋಯಾಕೀಮನೇ, ನೀನು ಆ ಸುರುಳಿಯನ್ನು ಸುಟ್ಟುಬಿಟ್ಟೆ. ನೀನು, “ಬಾಬಿಲೋನ್ ರಾಜನು ಖಂಡಿತವಾಗಿ ಬಂದು ಈ ದೇಶವನ್ನು ನಾಶಮಾಡುವನು ಎಂದು ಯೆರೆಮೀಯನು ಏಕೆ ಬರೆದನು? ಬಾಬಿಲೋನ್ ರಾಜನು ಈ ದೇಶದ ಮನುಷ್ಯರನ್ನು ಮತ್ತು ಪ್ರಾಣಿಗಳನ್ನು ನಾಶಮಾಡುವನು ಎಂದು ಏಕೆ ಹೇಳಿದನು?” ಎಂದು ಕೇಳಿದೆ.


(ಆ ಕಾಲದಲ್ಲಿ ಯೆರೆಮೀಯನನ್ನು ಇನ್ನೂ ಕಾರಾಗೃಹದಲ್ಲಿಟ್ಟಿರಲಿಲ್ಲ. ಅವನು ತನ್ನ ಮನಬಂದ ಕಡೆ ಹೋಗಲು ಸ್ವತಂತ್ರನಾಗಿದ್ದನು.


ಯೆಹೋವನು ಹೀಗೆನ್ನುತ್ತಾನೆ: ‘ಈ ಜೆರುಸಲೇಮ್ ನಗರವನ್ನು ಖಂಡಿತವಾಗಿಯೂ ಬಾಬಿಲೋನ್ ರಾಜನ ಸೈನಿಕರ ಕೈಗೆ ಒಪ್ಪಿಸಲಾಗುವುದು. ಅವನು ಈ ನಗರವನ್ನು ಸ್ವಾಧೀನಪಡಿಸಿಕೊಳ್ಳುವನು.’”


ಆದರೆ ನೀನು ಬಾಬಿಲೋನಿನ ಅಧಿಕಾರಿಗಳಿಗೆ ಶರಣಾಗತನಾಗಲು ಒಪ್ಪದ್ದಿದ್ದರೆ, ಜೆರುಸಲೇಮನ್ನು ಬಾಬಿಲೋನಿನ ಸೈನಿಕರಿಗೆ ಒಪ್ಪಿಸಲಾಗುವುದು. ಅವರು ಜೆರುಸಲೇಮನ್ನು ಸುಟ್ಟುಬಿಡುವರು ಮತ್ತು ನೀನು ಸಹ ಅವರಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ.’”


“ನನ್ನ ಪಾಪಗಳನ್ನೆಲ್ಲ ಒಟ್ಟುಗೂಡಿಸಿ ನೊಗದಂತೆ ಕಟ್ಟಲಾಗಿದೆ. ಯೆಹೋವನು ತನ್ನ ಕೈಗಳಿಂದ ನನ್ನ ಪಾಪಗಳನ್ನು ಒಟ್ಟಿಗೆ ಕಟ್ಟಿದ್ದಾನೆ. ಯೆಹೋವನ ಆ ನೊಗವು ನನ್ನ ಕತ್ತಿನ ಮೇಲೆ ಇದೆ. ಯೆಹೋವನು ನನ್ನನ್ನು ದುರ್ಬಲಗೊಳಿಸಿದ್ದಾನೆ. ನಾನು ಎದುರಿಸಲಾಗದ ಜನರ ಕೈಗೆ ಯೆಹೋವನು ನನ್ನನ್ನು ಒಪ್ಪಿಸಿಕೊಟ್ಟಿದ್ದಾನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು