ಯೆರೆಮೀಯ 31:20 - ಪರಿಶುದ್ದ ಬೈಬಲ್20 ಯೆಹೋವನು ಹೀಗೆನ್ನುತ್ತಾನೆ: “ಎಫ್ರಾಯೀಮ್ ನನ್ನ ಪ್ರೀತಿಯ ಮಗನೆಂಬುದು ನೀನು ಬಲ್ಲೆ. ನಾನು ಆ ಮಗುವನ್ನು ಪ್ರೀತಿಸುತ್ತೇನೆ. ಹೌದು, ನಾನು ಹಲವು ಸಲ ಎಫ್ರಾಯೀಮನ ವಿರುದ್ಧವಾಗಿ ಮಾತನಾಡುತ್ತೇನೆ. ಆದಾಗ್ಯೂ ನಾನು ಅವನನ್ನು ಜ್ಞಾಪಿಸಿಕೊಳ್ಳುತ್ತೇನೆ. ನಾನು ಅವನನ್ನು ತುಂಬಾ ಪ್ರೀತಿಸುತ್ತೇನೆ. ನಾನು ನಿಜವಾಗಿಯೂ ಅವನನ್ನು ಸಂತೈಸಬಯಸುತ್ತೇನೆ.” ಇದು ಯೆಹೋವನ ನುಡಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201920 ಯೆಹೋವನು ಇಂತೆನ್ನುತ್ತಾನೆ, “ಎಫ್ರಾಯೀಮು ನನಗೆ ಪ್ರಿಯಪುತ್ರ, ಮುದ್ದುಮಗುವಲ್ಲವೇ? ಅವನ ಹೆಸರೆತ್ತಿದಾಗೆಲ್ಲಾ ಅವನನ್ನು ಜ್ಞಾಪಿಸಿಕೊಳ್ಳುತ್ತಲೇ ಬರುತ್ತೇನೆ; ಇದರಿಂದ ನನ್ನ ಕರುಳು ಅವನಿಗಾಗಿ ಮರುಗುತ್ತದಲ್ಲಾ, ಅವನನ್ನು ಕರುಣಿಸುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)20 ಸರ್ವೇಶ್ವರ ಹೀಗೆನ್ನುತ್ತಾರೆ: “ಎಫ್ರಯಿಮ್, ನನಗೆ ಪ್ರಿಯ ಪುತ್ರನಲ್ಲವೆ? ನನ್ನ ಮುದ್ದು ಮಗನಲ್ಲವೆ? ಅವನ ವಿರುದ್ಧ ನಾನು ಪದೇ ಪದೇ ಮಾತಾಡಿದ್ದರೂ ನನ್ನ ಜ್ಞಾಪಕಕ್ಕೆ ಬರುತ್ತಲೇ ಇರುತ್ತಾನೆ. ಅವನಿಗಾಗಿ ನನ್ನ ಕರುಳು ಮರುಗುತ್ತದೆ. ಅವನನ್ನು ನಿಶ್ಚಯವಾಗಿ ಕರುಣಿಸುವೆನು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)20 ಯೆಹೋವನು ಇಂತೆನ್ನುತ್ತಾನೆ - ಎಫ್ರಾಯೀಮು ನನಗೆ ಪ್ರಿಯಪುತ್ರನೋ, ಮುದ್ದುಮಗುವೋ, ಏನೋ? ಅವನ ಹೆಸರೆತ್ತಿದಾಗೆಲ್ಲಾ ಅವನನ್ನು ಜ್ಞಾಪಿಸಿಕೊಳ್ಳುತ್ತಲೇ ಬರುತ್ತೇನೆ; ಇದರಿಂದ ನನ್ನ ಕರುಳು ಅವನಿಗಾಗಿ ಮರುಗುತ್ತದಲ್ಲಾ; ಅವನನ್ನು ಕರುಣಿಸೇ ಕರುಣಿಸುವೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ20 ಯೆಹೋವ ದೇವರು ಮುಂದುವರೆಸಿ, ‘ಎಫ್ರಾಯೀಮನು ನನಗೆ ಪ್ರಿಯ ಪುತ್ರನಲ್ಲವೇ? ಅವನು ನನಗೆ ಹರ್ಷಗೊಂಡಿರುವ ನನ್ನ ಮಗುವಲ್ಲವೋ? ನಾನು ಅವನಿಗೆ ವಿರೋಧವಾಗಿ ಆಗಾಗ ಮಾತಾಡಿದ್ದರೂ, ಅವನನ್ನು ಇನ್ನು ಬಹಳವಾಗಿ ಜ್ಞಾಪಕ ಮಾಡುತ್ತೇನೆ. ಆದ್ದರಿಂದ ಅವನಿಗೋಸ್ಕರ ನನ್ನ ಹೃದಯ ಮರುಗುತ್ತದಲ್ಲಾ ಅವನನ್ನು ಕನಿಕರಿಸುವೆನು,’ ” ಎಂದು ಯೆಹೋವ ದೇವರು ಹೇಳುತ್ತಾರೆ. ಅಧ್ಯಾಯವನ್ನು ನೋಡಿ |
“ಆಗ ನೀನು ಅವರಿಗೆ ಹೀಗೆ ಹೇಳಬೇಕು, ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನನ್ನ ಜೀವದಾಣೆ, ನಾನು ಜನರು ಸಾಯುವುದನ್ನು ನೋಡಲು ಇಷ್ಟಪಡುವದಿಲ್ಲ; ದುಷ್ಟರು ಸಾಯುವದರಲ್ಲಿಯೂ ನನಗೆ ಇಷ್ಟವಿಲ್ಲ. ಆ ದುಷ್ಟರು ನನ್ನ ಕಡೆಗೆ ತಿರುಗಬೇಕೆಂದು ನಾನು ಇಷ್ಟಪಡುತ್ತೇನೆ. ಅವರು ತಮ್ಮ ದುರ್ನಡತೆಯನ್ನು ಬಿಟ್ಟು ನಿಜವಾದ ಜೀವನವನ್ನು ನಡೆಸಬೇಕು. ಆದ್ದರಿಂದ ನನ್ನ ಬಳಿಗೆ ಹಿಂದಿರುಗಿ ಬನ್ನಿರಿ. ದುಷ್ಟತನವನ್ನು ಬಿಟ್ಟುಬಿಡಿರಿ. ಇಸ್ರೇಲ್ ಜನರೇ, ನೀವು ಯಾಕೆ ಸಾಯುತ್ತೀರಿ?’