ಯೆರೆಮೀಯ 30:14 - ಪರಿಶುದ್ದ ಬೈಬಲ್14 ನೀವು ಅನೇಕ ಜನಾಂಗಗಳೊಡನೆ ಸ್ನೇಹ ಮಾಡಿದಿರಿ. ಆದರೆ ಆ ಜನಾಂಗಗಳು ನಿಮ್ಮ ಕಡೆಗೆ ಗಮನಕೊಡುವದಿಲ್ಲ. ನಿಮ್ಮ ‘ಸ್ನೇಹಿತರು’ ನಿಮ್ಮನ್ನು ಮರೆತಿದ್ದಾರೆ. ನಾನು ಶತ್ರುವಿನಂತೆ ನಿಮ್ಮನ್ನು ನೋಯಿಸಿದೆ. ನಾನು ನಿಮಗೆ ಬಹಳ ಕಠಿಣವಾದ ಶಿಕ್ಷೆಯನ್ನು ಕೊಟ್ಟೆ. ನಿಮ್ಮ ಮಹಾಪರಾಧಗಳಿಗಾಗಿ ನಾನು ಹೀಗೆ ಮಾಡಿದೆ. ನಿಮ್ಮ ಅನೇಕ ಪಾಪಗಳಿಗಾಗಿ ನಾನು ಹೀಗೆ ಮಾಡಿದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ನಿನ್ನೊಂದಿಗೆ ವ್ಯಭಿಚಾರದಲ್ಲಿ ತೊಡಗಿದವರು ಯಾರೂ ನಿನ್ನನ್ನು ಹುಡುಕುವುದಿಲ್ಲ, ಮರೆತುಬಿಟ್ಟರು. ನಿನ್ನ ಅಪರಾಧವು ಹೆಚ್ಚಿ ಪಾಪಗಳು ಬಹಳವಾದುದರಿಂದ ನಾನು ಶತ್ರುವಾಗಿ ನಿನ್ನನ್ನು ಹೊಡೆದೆನು, ಕ್ರೂರನಾಗಿ ದಂಡಿಸಿದೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ನಿನ್ನ ನಲ್ಲರೆಲ್ಲರು ಮರೆತುಬಿಟ್ಟರು, ನಿನ್ನನ್ನು ಹುಡುಕದಿರುವರು ಶತ್ರುವಿನಂತೆ ನಿನ್ನನ್ನು ಥಳಿಸಿದೆನು, ಕ್ರೂರವಾಗಿ ದಂಡಿಸಿದೆನು. ಏಕೆಂದರೆ, ನಿನ್ನ ಅಪರಾಧ ಹೆಚ್ಚಿದೆ ನಿನ್ನ ಪಾಪಗಳು ಲೆಕ್ಕವಿಲ್ಲದಿವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ನಿನ್ನ ವಿುಂಡರಾರೂ ನಿನ್ನನ್ನು ಹುಡುಕುವದಿಲ್ಲ, ಮರೆತುಬಿಟ್ಟರು; ನಿನ್ನ ಅಪರಾಧವು ಹೆಚ್ಚಿ ಪಾಪಗಳು ಬಹಳವಾದದರಿಂದ ನಾನು ಶತ್ರುವಾಗಿ ನಿನ್ನನ್ನು ಹೊಡೆದೆನು, ಕ್ರೂರನಾಗಿ ದಂಡಿಸಿದೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 ನಿನ್ನ ಮಿತ್ರರೆಲ್ಲರು ನಿನ್ನನ್ನು ಮರೆತುಬಿಟ್ಟಿದ್ದಾರೆ, ನಿನ್ನನ್ನು ಹುಡುಕುವುದಿಲ್ಲ. ನಿನ್ನ ಅಕ್ರಮಗಳು ಬಹಳವೂ, ನಿನ್ನ ಪಾಪಗಳು ಪ್ರಬಲವೂ ಆಗಿರುವುದರಿಂದ ಶತ್ರುವಿನ ಗಾಯದಿಂದಲೂ, ಕ್ರೂರನ ಶಿಕ್ಷೆಯಿಂದಲೂ ನಾನು ನಿನ್ನನ್ನು ಗಾಯಪಡಿಸಿದ್ದೇನೆ; ಅಧ್ಯಾಯವನ್ನು ನೋಡಿ |
ಹಾಳಾಗಿಹೋದ ಯೆಹೂದವೇ, ನೀನು ಮಾಡುತ್ತಿರುವುದೇನು? ಅತ್ಯುತ್ತಮವಾದ ಕೆಂಪುಬಣ್ಣದ ಪೋಷಾಕನ್ನು ನೀನು ಧರಿಸಿಕೊಳ್ಳುತ್ತಿರುವುದೇಕೆ? ಸುವರ್ಣಾಭರಣಗಳಿಂದ ನಿನ್ನನ್ನು ಏಕೆ ಅಲಂಕರಿಸಿಕೊಳ್ಳುತ್ತಿರುವೆ? ಕಣ್ಣಿಗೆ ಕಾಡಿಗೆಯನ್ನು ಏಕೆ ಹಚ್ಚುತ್ತಿರುವೆ? ನೀನು ಅಲಂಕಾರ ಮಾಡಿಕೊಳ್ಳುವದೆಲ್ಲ ವ್ಯರ್ಥ. ನಿನ್ನ ಪ್ರಿಯತಮರು ನಿನ್ನನ್ನು ತಿರಸ್ಕರಿಸುತ್ತಾರೆ. ಅವರು ನಿನ್ನನ್ನು ಕೊಲೆಮಾಡುವ ಪ್ರಯತ್ನದಲ್ಲಿದ್ದಾರೆ.
ಯೆಹೂದದ ರಾಜನ ಅರಮನೆಯಲ್ಲಿ ಉಳಿದ ಎಲ್ಲಾ ಸ್ತ್ರೀಯರನ್ನು ಬಾಬಿಲೋನಿನ ಸೈನ್ಯಾಧಿಕಾರಿಗಳ ಬಳಿಗೆ ತರಲಾಗುವುದು. ನಿನ್ನ ಸ್ತ್ರೀಯರು ಹಾಡನ್ನು ಹಾಡಿ ನಿನ್ನನ್ನು ತಮಾಷೆ ಮಾಡುವರು. ಆ ಸ್ತ್ರೀಯರು ಹೀಗೆ ಹೇಳುವರು: ‘ನಿನಗಿಂತಲೂ ಪ್ರಬಲರಾಗಿದ್ದ ನಿನ್ನ ಒಳ್ಳೆಯ ಸ್ನೇಹಿತರು ನಿನ್ನನ್ನು ತಪ್ಪುದಾರಿಗೆ ಎಳೆದರು. ಆ ಸ್ನೇಹಿತರನ್ನು ನೀನು ತುಂಬಾ ನಂಬಿಕೊಂಡಿದ್ದೆ. ನಿನ್ನ ಪಾದಗಳು ಕೆಸರಿನಲ್ಲಿ ಹೂತಿವೆ. ನಿನ್ನ ಸ್ನೇಹಿತರು ನಿನ್ನಿದ ದೂರವಾಗಿದ್ದಾರೆ.’
ನಿಮಗೆ ಸಹಾಯದ ಅವಶ್ಯಕತೆ ಬಂದಾಗ ನೀವು ಆ ಸುಳ್ಳುದೇವರುಗಳನ್ನು ಕರೆಯುವಿರಿ. ಅವುಗಳನ್ನು ನಿಮ್ಮ ಸುತ್ತಲೂ ಸೇರಿಸಿಕೊಂಡಿರುವಿರಿ. ಆದರೆ ನಾನು ಹೇಳುವುದೇನೆಂದರೆ, ಗಾಳಿಯು ಅವುಗಳನ್ನು ಬಡಿದುಕೊಂಡು ಹೋಗುವುದು. ಅವುಗಳನ್ನೆಲ್ಲ ಉಸಿರಿನ ಗಾಳಿಯು ನಿಮ್ಮಿಂದ ದೂರಕ್ಕೆ ಕೊಂಡೊಯ್ಯುವುದು. ಆದರೆ ನನ್ನನ್ನು ಅವಲಂಬಿಸಿರುವವರು ಭೂಮಿಯನ್ನು ಪಡೆದುಕೊಳ್ಳುವರು. ನನ್ನ ಪವಿತ್ರ ಪರ್ವತವನ್ನು ಬಾಧ್ಯವಾಗಿ ಹೊಂದಿಕೊಳ್ಳುವರು.”
ಅವರ ಸೈನಿಕರ ಹತ್ತಿರ ಬಿಲ್ಲುಗಳು ಮತ್ತು ಭರ್ಜಿಗಳು ಇವೆ. ಆ ಸೈನಿಕರು ಕ್ರೂರಿಗಳಾಗಿದ್ದಾರೆ. ಅವರಿಗೆ ದಯೆದಾಕ್ಷಿಣ್ಯ ಇಲ್ಲ. ಆ ಸೈನಿಕರು ತಮ್ಮ ಕುದುರೆಗಳ ಮೇಲೆ ಬರುತ್ತಿದ್ದಾರೆ. ಅವರ ಧ್ವನಿ ಆರ್ಭಟಿಸುವ ಸಮುದ್ರದಂತಿದೆ. ಅವರು ಯುದ್ಧಕ್ಕೆ ಸಿದ್ಧರಾಗಿ ತಮ್ಮತಮ್ಮ ಸ್ಥಳಗಳಲ್ಲಿ ನಿಂತುಕೊಂಡಿದ್ದಾರೆ. ಬಾಬಿಲೋನ್ ನಗರವೇ, ಅವರು ನಿನ್ನ ಮೇಲೆ ಧಾಳಿಮಾಡಲು ಸಿದ್ಧರಾಗಿದ್ದಾರೆ.
ಬಾಬಿಲೋನಿನ ಸೈನ್ಯವು ಈಗಾಗಲೇ ಜೆರುಸಲೇಮ್ ನಗರದ ಮೇಲೆ ಧಾಳಿ ಮಾಡುತ್ತಿದೆ. ಸೈನಿಕರು ಬೇಗನೆ ನಗರವನ್ನು ಪ್ರವೇಶಿಸಿ ಅದಕ್ಕೆ ಬೆಂಕಿಹಚ್ಚಿ ಸುಟ್ಟುಹಾಕುವರು. ಜೆರುಸಲೇಮಿನ ಜನರು ತಮ್ಮ ಮನೆಯ ಮಾಳಿಗೆಯ ಮೇಲೆ ಸುಳ್ಳುದೇವರಾದ ಬಾಳನಿಗೆ ನೈವೇದ್ಯವನ್ನು ಅರ್ಪಿಸಿ ನಾನು ಕೋಪಿಸಿಕೊಳ್ಳುವಂತೆ ಮಾಡಿದ ಕೆಲವು ಮನೆಗಳು ಈ ನಗರದಲ್ಲಿವೆ. ಅದಲ್ಲದೆ ಕೆಲವು ಜನರು ಅನ್ಯದೇವತೆಗಳಿಗೆ ಪಾನನೈವೇದ್ಯವನ್ನು ಅರ್ಪಿಸಿರುವರು. ಬಾಬಿಲೋನಿನ ಸೈನ್ಯವು ಆ ಮನೆಗಳನ್ನು ಸುಟ್ಟುಹಾಕುವುದು.
ಇಸ್ರೇಲಿನ ಜನರಲ್ಲಿ ಒಬ್ಬರೂ ಸಹ ನಿನ್ನ ಉಪದೇಶವನ್ನು ಪಾಲಿಸಲಿಲ್ಲ. ಅವರೆಲ್ಲರೂ ಅದರಿಂದ ದೂರಾದರು. ಅವರು ನಿನ್ನ ಆಜ್ಞೆಯನ್ನು ಪಾಲಿಸಲಿಲ್ಲ. ಮೋಶೆಯ ಧರ್ಮಶಾಸ್ತ್ರದಲ್ಲಿ ಶಾಪಗಳ ಮತ್ತು ವಾಗ್ದಾನಗಳ ಬಗ್ಗೆ ಹೇಳಲಾಗಿದೆ. (ಮೋಶೆಯು ದೇವರ ಸೇವಕನಾಗಿದ್ದನು) ಆ ಶಾಪಗಳು ಧರ್ಮಶಾಸ್ತ್ರವನ್ನು ಪಾಲಿಸದಿದ್ದವರಿಗೆ ಆಗುವ ಶಿಕ್ಷೆಯಾಗಿದೆ. ಆ ಎಲ್ಲಾ ಶಿಕ್ಷೆಗಳು ನಮಗೆ ಆಗಿವೆ. ನಾವು ಯೆಹೋವನಾದ ನಿನ್ನ ವಿರುದ್ಧ ಪಾಪ ಮಾಡಿದ್ದರಿಂದ ನಮಗೆ ಹೀಗಾಯಿತು.