ಯೆರೆಮೀಯ 3:4 - ಪರಿಶುದ್ದ ಬೈಬಲ್4 ಆದರೆ ಈಗ ನೀನು, ‘ನನ್ನ ತಂದೆಯೇ, ನಾನು ಚಿಕ್ಕ ಮಗು ಆದಾಗಿನಿಂದ ನೀನು ನನ್ನ ಪ್ರೀತಿಯ ಸ್ನೇಹಿತನಾಗಿದ್ದೆ’ ಎಂದು ಕೂಗುತ್ತಲಿರುವೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಈಗ ನನ್ನನ್ನು, ‘ನನ್ನ ತಂದೆ, ನನ್ನ ಯೌವನದ ಆಪ್ತನು’ ಎಂದು ಕರೆಯುತ್ತೀಯಲ್ಲಾ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 “ಈಗತಾನೆ. ‘ನೀವೆ ನನ್ನ ತಂದೆ, ನನ್ನ ಯೌವನದ ಆಪ್ತರು’ ಎಂದು ಕರೆಯುತ್ತಿರುವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಈಗತಾನೆ ನನ್ನನ್ನು - ನನ್ನ ತಂದೆ, ನನ್ನ ಯೌವನದ ಆಪ್ತನು ಎಂದು ಕರೆಯುತ್ತೀಯಲ್ಲಾ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಈಗಲೂ ನನಗೆ, ‘ನನ್ನ ತಂದೆಯೇ, ನನ್ನ ಯೌವನದ ಸ್ನೇಹಿತನು ನೀನೇ,’ ಎಂದು ನೀನು ಕರೆಯುತ್ತಿರುವೆ. ಅಧ್ಯಾಯವನ್ನು ನೋಡಿ |
“ನಮ್ಮ ಕಾಣಿಕೆಗಳನ್ನು ಯೆಹೋವನು ಏಕೆ ಸ್ವೀಕರಿಸುವುದಿಲ್ಲ?” ಎಂದು ನೀವು ಕೇಳಬಹುದು. ಯಾಕೆಂದರೆ ನಿಮ್ಮ ಪಾಪಕೃತ್ಯಗಳನ್ನು ಆತನು ನೋಡಿರುತ್ತಾನೆ. ಅವುಗಳಿಗೆ ವಿರೋಧವಾಗಿ ಆತನೇ ಸಾಕ್ಷಿಯಾಗಿರುತ್ತಾನೆ. ನಿಮ್ಮ ಹೆಂಡತಿಯರನ್ನು ನೀವು ಮೋಸಗೊಳಿಸಿದ್ದನ್ನು ಆತನು ನೋಡಿರುತ್ತಾನೆ. ನೀವು ಆಕೆಯನ್ನು ನಿಮ್ಮ ಯೌವನ ಕಾಲದಲ್ಲಿ ಹೆಂಡತಿಯನ್ನಾಗಿ ಮಾಡಿಕೊಂಡಿರುತ್ತೀರಿ. ಆಕೆಯು ನಿಮ್ಮ ಆಪ್ತ ಸ್ನೇಹಿತೆಯಾಗಿದ್ದಳು. ನೀವಿಬ್ಬರೂ ಮಾತುಕೊಟ್ಟಿರಿ. ಆಕೆ ನಿಮ್ಮ ಹೆಂಡತಿಯಾದಳು. ಆದರೆ ನೀವು ಅವಳಿಗೆ ಅಪನಂಬಿಗಸ್ಥರಾದಿರಿ.
ಅವರು ಮರದ ತುಂಡುಗಳೊಡನೆ ಮಾತನಾಡಿ, ‘ನೀನು ನಮ್ಮ ತಂದೆ’ ಎಂದು ಹೇಳುವರು. ಆ ಜನರು ಕಲ್ಲುಬಂಡೆಯೊಂದಿಗೆ ಮಾತನಾಡಿ, ‘ನೀನು ನಮಗೆ ಜನ್ಮಕೊಟ್ಟ ತಾಯಿ’ ಎಂದು ಹೇಳುವರು. ಆ ಜನರೆಲ್ಲರು ನಾಚಿಕೆಪಡುವರು. ಅವರು ನನ್ನ ಕಡೆಗೆ ನೋಡುವದಿಲ್ಲ. ಅವರು ನನಗೆ ವಿಮುಖರಾಗಿದ್ದಾರೆ. ಆದರೆ ಯೆಹೂದದ ಜನರು ಕಷ್ಟದಲ್ಲಿ ಸಿಕ್ಕಿಹಾಕಿಕೊಂಡಾಗ, ‘ಬಾ ನಮ್ಮನ್ನು ರಕ್ಷಿಸು’ ಎಂದು ನನ್ನನ್ನು ಕೇಳುತ್ತಾರೆ.
ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ, “ಮಕ್ಕಳು ಹೆತ್ತವರನ್ನು ಗೌರವಿಸುವರು. ಸೇವಕರು ಯಜಮಾನನನ್ನು ಗೌರವಿಸುತ್ತಾರೆ. ನಾನು ನಿಮ್ಮ ತಂದೆಯಾಗಿದ್ದೇನೆ, ಆದರೆ ನನ್ನನ್ನು ಯಾಕೆ ಗೌರವಿಸುವದಿಲ್ಲ? ನಾನು ನಿಮ್ಮ ಯಜಮಾನನಾಗಿದ್ದೇನೆ, ಆದರೆ ನನ್ನನ್ಯಾಕೆ ಗೌರವಿಸುವದಿಲ್ಲ? ಯಾಜಕರೇ, ನೀವು ನನ್ನ ಹೆಸರನ್ನು ಗೌರವಿಸುವದಿಲ್ಲ.” ಆದರೆ ನೀವು, “ನಾವು ನಿನಗೆ ಯಾವ ವಿಷಯದಲ್ಲಿ ಗೌರವ ಕೊಟ್ಟಿಲ್ಲ” ಎಂದು ಕೇಳುತ್ತೀರಿ.