Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 3:23 - ಪರಿಶುದ್ದ ಬೈಬಲ್‌

23 ಬೆಟ್ಟದ ಮೇಲೆ ವಿಗ್ರಹಗಳ ಪೂಜೆ ಮಾಡಿದ್ದು ನಮ್ಮ ಮೂರ್ಖತನವಾಯಿತು. ಬೆಟ್ಟಗಳ ಮೇಲಿನ ಎಲ್ಲಾ ಉತ್ಸವಗಳು ಕೇವಲ ಸುಳ್ಳು. ಇಸ್ರೇಲಿನ ರಕ್ಷಣೆ ಖಚಿತವಾಗಿಯೂ ನಮ್ಮ ದೇವರಾದ ಯೆಹೋವನಿಂದ ಮಾತ್ರ ಸಾಧ್ಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ನಿಶ್ಚಯವಾಗಿ ಗುಡ್ಡಗಳಿಂದಲೂ ಬೆಟ್ಟಗಳ ಜಾತ್ರೆಯ ಗದ್ದಲದಿಂದಲೂ ಮೋಸವಾಯಿತು; ನಿಜನಿಜವಾಗಿ ಇಸ್ರಾಯೇಲಿನ ರಕ್ಷಣೆಯು ನಮ್ಮ ದೇವರಾದ ಯೆಹೋವನಲ್ಲಿ ನೆಲೆಗೊಂಡಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಜನರು : “ಇಗೋ, ನಿಮಗೆ ಅಭಿಮುಖರಾಗಿ ಬಂದಿದ್ದೇವೆ. ನೀವೇ ನಮ್ಮ ಸರ್ವೇಶ್ವರ, ನಮ್ಮ ದೇವರು. ನಿಶ್ಚಯವಾಗಿ ಬೆಟ್ಟಗುಡ್ಡಗಳಿಂದಲೂ ಜಾತ್ರೆಜಂಗುಳಿಯಿಂದಲೂ ನಮಗೆ ಮೋಸವಾಯಿತು. ಇಸ್ರಯೇಲಿನ ಉದ್ಧಾರ ಇರುವುದು ನಮ್ಮ ದೇವರಾದ ಸರ್ವೇಶ್ವರ ಸ್ವಾಮಿಯ ಕೈಯಲ್ಲೇ, ಇದು ಸತ್ಯಕ್ಕೂ ಸತ್ಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ನಿಶ್ಚಯವಾಗಿ ಗುಡ್ಡಗಳಿಂದಲೂ ಬೆಟ್ಟಗಳ ಜಾತ್ರೆಯ ಗದ್ದಲದಿಂದಲೂ ಮೋಸವಾಯಿತು; ನಿಜನಿಜವಾಗಿ ಇಸ್ರಾಯೇಲಿನ ರಕ್ಷಣೆಯು ನಮ್ಮ ದೇವರಾದ ಯೆಹೋವನಲ್ಲಿ ನೆಲೆಗೊಂಡಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ನಿಶ್ಚಯವಾಗಿ ಗುಡ್ಡಗಳಿಂದಲೂ, ಬೆಟ್ಟಗಳ ಸಮೂಹದಿಂದಲೂ ನಮಗೆ ಮೋಸವಾಗಿದೆ. ನಿಶ್ಚಯವಾಗಿ ಇಸ್ರಾಯೇಲಿನ ರಕ್ಷಣೆಯು ನಮ್ಮ ದೇವರಾದ ಯೆಹೋವ ದೇವರಲ್ಲಿಯೇ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 3:23
25 ತಿಳಿವುಗಳ ಹೋಲಿಕೆ  

ಯೆಹೋವನು ತನ್ನ ಜನರನ್ನು ರಕ್ಷಿಸಬಲ್ಲನು. ಯೆಹೋವನೇ, ದಯವಿಟ್ಟು ನಿನ್ನ ಜನರಿಗೆ ಒಳ್ಳೆಯದನ್ನು ಮಾಡು.


ದೇವರು ನನ್ನನ್ನು ರಕ್ಷಿಸುತ್ತಾನೆ. ಆತನಲ್ಲಿ ಭರವಸವಿಟ್ಟಿದ್ದೇನೆ. ಆದ್ದರಿಂದ ನಾನು ಭಯಪಡೆನು. ಆತನು ನನ್ನನ್ನು ರಕ್ಷಿಸುತ್ತಾನೆ. ಯೆಹೋವನೇ ನನ್ನ ಬಲವು. ಆತನು ನನ್ನನ್ನು ರಕ್ಷಿಸುತ್ತಾನೆ. ನಾನು ಆತನಿಗೆ ಸ್ತೋತ್ರಗಾನ ಹಾಡುವೆನು.”


ನೀವು ನಿಮಗೆ ತಿಳಿದಿಲ್ಲದ ಯಾವುದನ್ನೋ ಆರಾಧಿಸುತ್ತೀರಿ. ನಮಗಾದರೋ ನಾವು ಯಾರನ್ನು ಆರಾಧಿಸುತ್ತಿದ್ದೇವೆ ಎಂಬುದು ತಿಳಿದಿದೆ. ರಕ್ಷಣೆಯು ಯೆಹೂದ್ಯರಿಂದ ಬರುತ್ತದೆ.


ಆದರೆ ನಾನು ಯೆಹೂದ ದೇಶಕ್ಕೆ ಕರುಣೆಯನ್ನು ತೋರಿಸುವೆನು. ನಾನು ಅವರನ್ನು ರಕ್ಷಿಸುವೆನು. ಅವರನ್ನು ರಕ್ಷಿಸಲು ನಾನು ಬಿಲ್ಲುಬಾಣಗಳನ್ನು ಉಪಯೋಗಿಸುವದಿಲ್ಲ. ಅಥವಾ ಯುದ್ಧಾಶ್ವಗಳನ್ನಾಗಲಿ ಸೈನ್ಯವನ್ನಾಗಲಿ ಉಪಯೋಗಿಸುವದಿಲ್ಲ. ನನ್ನ ಸ್ವಂತ ಸಾಮರ್ಥ್ಯದಿಂದಲೇ ನಾನು ಅವರನ್ನು ರಕ್ಷಿಸುವೆನು.”


ನಾನು ಅವರಿಗೆ ಕೊಡುವುದಾಗಿ ವಾಗ್ದಾನ ಮಾಡಿದ ದೇಶಕ್ಕೆ ಅವರನ್ನು ಕರೆದುಕೊಂಡು ಬಂದೆನು. ಆದರೆ ಎತ್ತರವಾದ ಬೆಟ್ಟವನ್ನಾಗಲಿ ಎಲೆಗಳುಳ್ಳ ಮರವನ್ನಾಗಲಿ ಅವರು ಕಂಡಾಗಲೆಲ್ಲಾ ಅವರು ಅಲ್ಲಿಗೆ ಹೋದರು ಮತ್ತು ವಿಗ್ರಹಗಳನ್ನು ಪೂಜಿಸಿದರು. ಅಲ್ಲಿ ಅವರು ಯಜ್ಞಗಳನ್ನೂ ನನ್ನನ್ನು ಕೋಪಗೊಳಿಸುವ ಕಾಣಿಕೆಗಳನ್ನೂ ಧೂಪವನ್ನೂ ಮತ್ತು ಪಾನದ್ರವ್ಯಾರ್ಪಣೆಗಳನ್ನೂ ಅರ್ಪಿಸಿದರು.


ಯೆಹೋವನೇ, ನೀನು ನನ್ನನ್ನು ವಾಸಿಮಾಡಿದರೆ ನಿಜವಾಗಿಯೂ ನಾನು ಗುಣಹೊಂದುತ್ತೇನೆ. ನನ್ನನ್ನು ರಕ್ಷಿಸು, ಆಗ ನಿಜವಾಗಿಯೂ ರಕ್ಷಣೆ ಹೊಂದಿದವನಾಗುವೆನು. ಯೆಹೋವನೇ, ನಾನು ನಿನ್ನನ್ನು ಸ್ತುತಿಸುತ್ತೇನೆ.


ಯೆಹೋವನೇ, ನೀನು ಇಸ್ರೇಲರ ಆಶಾಕಿರಣ, ಕಷ್ಟಕಾಲದಲ್ಲಿ ಇಸ್ರೇಲನ್ನು ನೀನು ಕಾಪಾಡುವೆ. ಆದರೆ ಈಗ ನೀನು ಈ ದೇಶದಲ್ಲಿ ಪರದೇಶಿಯಂತೆ ಕಾಣುವೆ. ಕೇವಲ ಒಂದು ರಾತ್ರಿ ಮಾತ್ರ ಉಳಿಯುವ ಪ್ರಯಾಣಿಕನಂತೆ ಕಾಣುವೆ.


ಯೆಹೂದ ಪ್ರದೇಶವನ್ನು ಯೋಷೀಯನು ಆಳುತ್ತಿದ್ದಾಗ ಯೆಹೋವನು ನನ್ನೊಂದಿಗೆ ಮಾತನಾಡಿ, “ಯೆರೆಮೀಯನೇ, ಇಸ್ರೇಲ್‌ ಎಂಬಾಕೆಯು ಮಾಡಿದ ದುಷ್ಕೃತ್ಯಗಳನ್ನು ನೀನು ನೋಡಿದಿಯಾ? ಅವಳು ನನಗೆ ಹೇಗೆ ವಂಚಿಸಿದಳು ನೋಡಿದಿಯಾ? ಅವಳು ಪ್ರತಿಯೊಂದು ಬೆಟ್ಟದ ಮೇಲೆಯೂ ಸೊಂಪಾಗಿ ಬೆಳೆದ ಪ್ರತಿಯೊಂದು ಮರದ ಕೆಳಗೂ ವಿಗ್ರಹಗಳ ಜೊತೆ ಜಾರತನ ಮಾಡಿದಳು.


ನೀನು ನಮ್ಮ ತಂದೆಯಾಗಿರುವೆ. ಅಬ್ರಹಾಮನಿಗೆ ನಮ್ಮ ಪರಿಚಯವಿಲ್ಲ. ಇಸ್ರೇಲನು ನಮ್ಮನ್ನು ಗುರುತಿಸುವುದಿಲ್ಲ. ಯೆಹೋವನೇ, ನೀನೇ ನಮ್ಮ ತಂದೆ. ನೀನೇ ನಮ್ಮನ್ನು ಯಾವಾಗಲೂ ರಕ್ಷಿಸಿದಾತನು.


ಎದೋಮಿನಿಂದ ಬರುತ್ತಿರುವ ಇವನು ಯಾರು? ಅವನು ಬೊಜ್ರದಿಂದ ಬರುತ್ತಿದ್ದಾನೆ. ಆತನ ಬಟ್ಟೆಯು ಕಡುಕೆಂಪು ಬಣ್ಣದಿಂದ ತುಂಬಿದೆ. ತನ್ನ ಬಟ್ಟೆಯಲ್ಲಿ ಆತನು ಮಹಿಮಾಸ್ವರೂಪನಾಗಿ ಕಾಣುತ್ತಿದ್ದಾನೆ. ಆತನು ತನ್ನ ಬಲಸಾಮರ್ಥ್ಯಗಳಿಂದಾಗಿ ನೇರವಾಗಿ ನಡೆಯುತ್ತಿದ್ದಾನೆ. ಆತನು, “ನಾನು ಸತ್ಯವನ್ನೇ ಹೇಳುತ್ತೇನೆ, ನಿನ್ನನ್ನು ರಕ್ಷಿಸಲು ನನಗೆ ಸಾಮರ್ಥ್ಯ ಉಂಟು” ಎಂದು ಹೇಳುವನು.


“ಬೇರೆ ದೇಶಗಳಿಂದ ಪಾರಾಗಿ ಬಂದ ಜನರೇ, ಒಟ್ಟಾಗಿ ಸೇರಿಕೊಂಡು ನನ್ನ ಮುಂದೆ ಬನ್ನಿರಿ. (ಈ ಜನರು ಮರದ ವಿಗ್ರಹಗಳನ್ನು ಇಟ್ಟುಕೊಂಡಿದ್ದಾರೆ. ತಮ್ಮನ್ನು ರಕ್ಷಿಸಲಾರದ ವಿಗ್ರಹಕ್ಕೆ ಅವರು ಪ್ರಾರ್ಥಿಸುತ್ತಿದ್ದಾರೆ. ಅವರು ಮಾಡುವದು ಅವರಿಗೇ ತಿಳಿಯದು.


ಆದರೆ ಇಸ್ರೇಲು ಯೆಹೋವನಿಂದ ರಕ್ಷಿಸಲ್ಪಡುವದು. ಆ ರಕ್ಷಣೆಯು ಶಾಶ್ವತವಾದದ್ದು. ಇನ್ನೆಂದಿಗೂ ಇಸ್ರೇಲ್ ನಾಚಿಕೆಗೆ ಒಳಗಾಗುವದಿಲ್ಲ.


ದೇವರೇ, ಜನರು ನಿನ್ನನ್ನು ಕಾಣಲಾರರು. ನೀನೇ ಇಸ್ರೇಲರ ವಿಮೋಚಕನು.


ಜನರು ವಿಗ್ರಹಗಳನ್ನು ಮಾಡಿಕೊಳ್ಳುವರು. ಆದರೆ ಅವು ನಿಷ್ಪ್ರಯೋಜಕವಾದ ವಸ್ತುಗಳಾಗಿವೆ. ಜನರು ಆ ವಿಗ್ರಹಗಳನ್ನು ಪ್ರೀತಿಸುತ್ತಾರೆ. ಆದರೆ ಅವುಗಳು ಯಾವ ಪ್ರಯೋಜನಕ್ಕೂ ಬಾರವು. ಆ ಜನರು ಆ ವಿಗ್ರಹದ ಸಾಕ್ಷಿಗಳಾಗಿದ್ದಾರೆ. ಆದರೆ ಅವುಗಳಿಗೆ ದೃಷ್ಟಿ ಇಲ್ಲ. ಅವುಗಳಿಗೆ ಏನೂ ಗೊತ್ತಿಲ್ಲ. ತಮ್ಮ ಕಾರ್ಯಗಳು ನಾಚಿಕೆಗೆಟ್ಟವುಗಳೆಂಬ ತಿಳುವಳಿಕೆಯೂ ಅವರಲ್ಲಿಲ್ಲ.


ನಾನೇ, ನಾನೇ ಯೆಹೋವನು! ನನ್ನ ಹೊರತು ಬೇರೆ ರಕ್ಷಕನಿಲ್ಲ!


ನನ್ನ ರಕ್ಷಣೆಯೂ ಮಾನವೂ ದೇವರೇ. ಆತನೇ ನನಗೆ ಭದ್ರವಾದ ದುರ್ಗವೂ ಆಶ್ರಯಸ್ಥಾನವೂ ಆಗಿದ್ದಾನೆ.


ಯುದ್ಧಕ್ಕಾಗಿ ಕುದುರೆಗಳನ್ನು ಸಿದ್ಧಪಡಿಸುತ್ತಾರೆ; ಆದರೆ ಜಯದ ನಿರ್ಧಾರ ಯೆಹೋವನಿಂದಲೇ.


ಅವರ ಮಕ್ಕಳು ಸುಳ್ಳುದೇವರುಗಳಿಗೆ ಅರ್ಪಿಸಿದ ಯಜ್ಞವೇದಿಕೆಗಳನ್ನು ಜ್ಞಾಪಿಸಿಕೊಳ್ಳುವರು. ಅವರು ಅಶೇರಳಿಗೆ ಅರ್ಪಿಸಿದ ಮರದ ವಿಗ್ರಹಸ್ತಂಭಗಳನ್ನು ಜ್ಞಾಪಿಸಿಕೊಳ್ಳುವರು. ಅವರು ಸೊಂಪಾಗಿ ಬೆಳೆದ ಮರದ ಕೆಳಗೆ ಮತ್ತು ಬೆಟ್ಟಗಳ ಮೇಲೆ ಆ ವಸ್ತುಗಳನ್ನು ಜ್ಞಾಪಿಸಿಕೊಳ್ಳುವರು.


ಯೆಹೋವನು ಹೀಗೆಂದನು: “ಸಂತೋಷದಿಂದಿರಿ, ಯಾಕೋಬಿಗೋಸ್ಕರ ಹಾಡಿರಿ. ಮಹಾ ಜನಾಂಗವಾದ ಇಸ್ರೇಲಿಗೋಸ್ಕರ ಹರ್ಷಧ್ವನಿ ಮಾಡಿರಿ. ಸ್ತೋತ್ರಗೀತೆಗಳನ್ನು ಹಾಡಿರಿ. ‘ಯೆಹೋವನು ತನ್ನ ಜನರನ್ನು ರಕ್ಷಿಸಿದನು. ಇಸ್ರೇಲ್ ಜನಾಂಗದಲ್ಲಿ ಅಳಿದುಳಿದ ಜನರನ್ನು ಆತನು ರಕ್ಷಿಸಿದನು’ ಎಂದು ಕೂಗಿರಿ.


ಆಗ ಯಾಕೋಬನ ಮನೆತನದವರು, ಇಸ್ರೇಲರಲ್ಲಿ ಅಳಿದುಳಿದವರು, ತಮ್ಮನ್ನು ಹೊಡೆಯುವವರನ್ನು ಆಧಾರಮಾಡಿಕೊಳ್ಳದೆ ಇಸ್ರೇಲಿನ ಅತೀ ಪರಿಶುದ್ಧನಾದ ಯೆಹೋವನನ್ನೇ ಆಧಾರಮಾಡಿಕೊಳ್ಳುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು