ಯೆಹೋವನು ನನಗೆ ಈ ವಸ್ತುಗಳನ್ನು ತೋರಿಸಿದನು: ಯೆಹೋವನು ಪವಿತ್ರಾಲಯದ ಎದುರುಗಡೆಯಲ್ಲಿ ಅಂಜೂರದ ಎರಡು ಬುಟ್ಟಿಗಳನ್ನು ಜೋಡಿಸಿಟ್ಟಿದ್ದು ನನಗೆ ಕಂಡುಬಂತು. (ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಯೆಕೊನ್ಯನನ್ನು ಸೆರೆಹಿಡಿದ ಮೇಲೆ ನಾನು ಈ ದರ್ಶನವನ್ನು ಕಂಡೆ. ಯೆಕೊನ್ಯನು ರಾಜನಾದ ಯೆಹೋಯಾಕೀಮನ ಮಗ. ಯೆಕೊನ್ಯನನ್ನು ಮತ್ತು ಅವನ ಪ್ರಮುಖ ಅಧಿಕಾರಿಗಳನ್ನು ಜೆರುಸಲೇಮಿನಿಂದ ಬಾಬಿಲೋನಿಗೆ ತೆಗೆದುಕೊಂಡು ಹೋಗಲಾಯಿತು. ನೆಬೂಕದ್ನೆಚ್ಚರನು ಯೆಹೂದದ ಎಲ್ಲಾ ಬಡಗಿಗಳನ್ನು ಮತ್ತು ಕಮ್ಮಾರರನ್ನು ತೆಗೆದುಕೊಂಡು ಹೋಗಿದ್ದನು.)