Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 27:2 - ಪರಿಶುದ್ದ ಬೈಬಲ್‌

2 ಯೆಹೋವನು ನನಗೆ ಹೀಗೆ ಹೇಳಿದನು: “ನೀನು ಮರದ ಕಂಬದಿಂದ ಕೆಲವು ನೊಗಗಳನ್ನು ಮಾಡಿ ನಿನ್ನ ಕತ್ತಿನ ಹಿಂಬದಿಯ ಮೇಲೆ ಇಟ್ಟುಕೋ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 “ಇದೇ ಯೆಹೋವನ ನುಡಿ, ನೀನು ಕಣ್ಣಿಗಳನ್ನೂ ಮತ್ತು ನೊಗಗಳನ್ನು ಮಾಡಿ ನಿನ್ನ ಹೆಗಲಿಗೆ ಹಾಕಿಕೊಂಡು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 “ಇದು ಸರ್ವೇಶ್ವರನ ನುಡಿ - ನೊಗವನ್ನೂ ಕಣ್ಣಿಗಳನ್ನೂ ಮಾಡಿ ನಿನ್ನ ಹೆಗಲಿಗೆ ಹಾಕಿಕೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಇದೇ ಯೆಹೋವನ ನುಡಿ - ನೀನು ಕಣ್ಣಿನೊಗಗಳನ್ನು ಮಾಡಿ ನಿನ್ನ ಹೆಗಲಿಗೆ ಹಾಕಿಕೊಂಡು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ: “ಬಂಧನಗಳನ್ನೂ ನೊಗಗಳನ್ನೂ ಮಾಡಿಸಿಕೊಂಡು ನಿನ್ನ ಕುತ್ತಿಗೆಯ ಮೇಲೆ ಇಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 27:2
18 ತಿಳಿವುಗಳ ಹೋಲಿಕೆ  

ನನ್ನ ಒಡೆಯನಾದ ಯೆಹೋವನು ಈ ವಿಷಯಗಳನ್ನು ನನಗೆ ತೋರಿಸಿದನು. ದೇವರಾದ ಯೆಹೋವನು ಬೆಂಕಿಯಿಂದ ನ್ಯಾಯತೀರಿಸುವುದಕ್ಕಾಗಿ ಕರೆಯುವುದನ್ನು ಕಂಡೆನು. ಆ ಬೆಂಕಿಯು ಮಹಾ ಸಾಗರವನ್ನು ನಾಶಮಾಡಿತು. ಭೂಮಿಯನ್ನು ತಿಂದುಬಿಡಲೂ ಪ್ರಾರಂಭಿಸಿತು.


ಯೆಹೋವನು ನನಗೆ ಇದನ್ನು ತೋರಿಸಿದನು: ಎರಡನೇ ಬೆಳೆಯು ಬೆಳೆಯಲಾರಂಭಿಸಿದ ಕಾಲದಲ್ಲಿ ಆತನು ಮಿಡತೆಗಳನ್ನು ತಯಾರು ಮಾಡುತ್ತಿದ್ದನು. ಅರಸನು ಮೊದಲನೇ ಬೆಳೆಯನ್ನು ರಾಶಿಮಾಡಿಸಿಕೊಂಡು ಹೋದ ನಂತರದ ಬೆಳೆ ಇದು.


ನಾನು ಯೆಹೂದದ ರಾಜನಾದ ಚಿದ್ಕೀಯನಿಗೂ ಇದೇ ಸಂದೇಶವನ್ನು ಕೊಟ್ಟಿದ್ದೇನೆ. “ಚಿದ್ಕೀಯನೇ, ನೀನು ನಿನ್ನ ಹೆಗಲನ್ನು ಬಾಬಿಲೋನಿನ ರಾಜನ ನೊಗಕ್ಕೆ ಕೊಡಬೇಕು; ಅವನ ಆಜ್ಞಾಪಾಲನೆ ಮಾಡಬೇಕು. ಬಾಬಿಲೋನಿನ ರಾಜನ ಮತ್ತು ಅಲ್ಲಿಯ ಜನರ ಸೇವೆಮಾಡಿಕೊಂಡಿದ್ದರೆ ನೀನು ಬದುಕುವೆ.


“‘ಆದರೆ ಬಾಬಿಲೋನ್ ರಾಜನ ನೊಗಕ್ಕೆ ತಮ್ಮ ಹೆಗಲನ್ನು ಕೊಡುವ ಮತ್ತು ಅವನ ಆಜ್ಞೆಯನ್ನು ಪಾಲಿಸುವ ಜನಾಂಗಗಳು ಬದುಕುವವು. ಆ ಜನಾಂಗಗಳವರು ತಮ್ಮ ದೇಶದಲ್ಲಿಯೇ ಇದ್ದುಕೊಂಡು ಬಾಬಿಲೋನಿನ ರಾಜನ ಸೇವೆ ಮಾಡುವ ಅವಕಾಶವನ್ನು ಮಾಡಿಕೊಡುತ್ತೇನೆ. ಆ ಜನಾಂಗಗಳ ಜನರು ತಮ್ಮ ದೇಶದಲ್ಲಿಯೇ ವ್ಯವಸಾಯ ಮಾಡಿಕೊಂಡಿರುವರು.’” ಇದು ಯೆಹೋವನ ನುಡಿ.


ಇದು ಸರ್ವಶಕ್ತನಾದ ಯೆಹೋವನ ನುಡಿ. “ಆ ಸಮಯದಲ್ಲಿ ನಾನು ಇಸ್ರೇಲರ ಮತ್ತು ಯೆಹೂದ್ಯರ ಹೆಗಲ ಮೇಲಿನ ನೊಗವನ್ನು ಮುರಿದುಬಿಡುವೆನು. ನಿಮಗೆ ಕಟ್ಟಿರುವ ಹಗ್ಗಗಳನ್ನು ಕಿತ್ತುಹಾಕುವೆನು. ಪರದೇಶದವರು ಮತ್ತೆಂದಿಗೂ ನನ್ನ ಜನರನ್ನು ದಾಸರನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.


“ಸೆರೆಯವರಿಗಾಗಿ ಸರಪಣಿಗಳನ್ನು ಮಾಡು. ದೇಶವು ಕೊಲೆಯ ಅಪರಾಧಗಳಿಂದ ತುಂಬಿದೆ. ಪಟ್ಟಣದಲ್ಲಿ ಹಿಂಸೆಯು ತುಂಬಿದೆ.


ನಾನು ಈಜಿಪ್ಟಿನ ನೊಗವನ್ನು ಮುರಿದಾಗ ತಹಪನೇಸ್‌ನಲ್ಲಿ ಕತ್ತಲೆಯ ದಿನವಾಗಿರುವುದು. ಈಜಿಪ್ಟಿನ ಅಧಿಕಾರಕ್ಕೆ ಅಂತ್ಯ ಬರುವುದು. ಈಜಿಪ್ಟಿನ ಮೇಲೆ ಮೋಡವು ಕವಿಯುವುದು. ಅದರ ಪಟ್ಟಣಗಳ ಜನರು ಸೆರೆಹಿಡಿಯಲ್ಪಟ್ಟು ಒಯ್ಯಲ್ಪಡುವರು.


ಪ್ರವಾದಿಗಳಲ್ಲಿ ಚಿದ್ಕೀಯ ಎಂಬ ಹೆಸರಿನವನೊಬ್ಬನಿದ್ದನು. ಅವನು ಕೆನಾನನ ಮಗ. ಚಿದ್ಕೀಯನು ಕೆಲವು ಕಬ್ಬಿಣದ ಕೊಂಬುಗಳನ್ನು ಮಾಡಿಸಿದ್ದನು. ಆಗ ಅವನು ಅಹಾಬನಿಗೆ, “ಯೆಹೋವನು ಹೀಗೆನ್ನುವನು: ‘ಅರಾಮ್ಯರ ಸೈನ್ಯದ ವಿರುದ್ಧ ಹೋರಾಡಲು ನೀನು ಈ ಕೊಂಬುಗಳನ್ನು ಬಳಸುವೆ. ನೀನು ಅವರನ್ನು ಸೋಲಿಸುವೆ ಮತ್ತು ನಾಶಗೊಳಿಸುವೆ’” ಎಂದು ಹೇಳಿದನು.


ಆಮೇಲೆ ಎದೋಮ್ಯರು, ಮೋವಾಬ್ಯರು, ಅಮ್ಮೋನ್ಯರು ಈ ಪಾತ್ರೆಯ ದ್ರಾಕ್ಷಾರಸವನ್ನು ಕುಡಿಯುವಂತೆ ಮಾಡಿದೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು