ಯೆರೆಮೀಯ 24:3 - ಪರಿಶುದ್ದ ಬೈಬಲ್3 ಯೆಹೋವನು ನನಗೆ “ಯೆರೆಮೀಯನೇ, ನಿನಗೇನು ಕಾಣುತ್ತಿದೆ?” ಎಂದು ಕೇಳಿದನು. “ನನಗೆ ಅಂಜೂರಗಳು ಕಾಣುತ್ತಿವೆ. ಒಳ್ಳೆಯ ಅಂಜೂರಗಳು ಬಹಳ ಚೆನ್ನಾಗಿವೆ. ಕೊಳೆತ ಅಂಜೂರಗಳು ತಿನ್ನಲಾಗದಷ್ಟು ಕೊಳೆತಿವೆ” ಎಂದು ನಾನು ಉತ್ತರಿಸಿದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಆಗ ಯೆಹೋವನು ನನ್ನನ್ನು, “ಯೆರೆಮೀಯನೇ, ಏನು ನೋಡುತ್ತೀ?” ಎಂದು ಕೇಳಲು ನಾನು, “ಅಂಜೂರದ ಫಲಗಳನ್ನು ನೋಡುತ್ತೇನೆ; ಉತ್ತಮ ಫಲಗಳು ಅತ್ಯುತ್ತಮವಾಗಿವೆ, ಕೆಟ್ಟ ಫಲಗಳು ಬಹಳ ಕೆಟ್ಟಿವೆ, ಯಾರೂ ತಿನ್ನದ ಹಾಗೆ ಕೇವಲ ಅಸಹ್ಯವಾಗಿವೆ” ಎಂದು ಉತ್ತರ ಕೊಟ್ಟೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಆಗ ಸರ್ವೇಶ್ವರ ನನ್ನನ್ನು, “ಯೆರೆಮೀಯನೇ, ನಿನಗೆ ಕಾಣುತ್ತಿರುವುದು ಏನು?” ಎಂದು ಕೇಳಿದರು. ನಾನು, “ಅಂಜೂರದ ಹಣ್ಣುಗಳನ್ನು ನೋಡುತ್ತಿದ್ದೇನೆ. ಒಳ್ಳೆಯ ಹಣ್ಣುಗಳು ಅತ್ತ್ಯುತ್ತಮವಾಗಿವೆ. ಕೆಟ್ಟ ಹಣ್ಣುಗಳು ಬಹಳ ಕೆಟ್ಟಿವೆ. ಯಾರೂ ತಿನ್ನಲಾಗದಷ್ಟು ಅಸಹ್ಯವಾಗಿವೆ,” ಎಂದು ಉತ್ತರಕೊಟ್ಟೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಆಗ ಯೆಹೋವನು ನನ್ನನ್ನು - ಯೆರೆಮೀಯನೇ, ಏನು ನೋಡುತ್ತೀ ಎಂದು ಕೇಳಲು ನಾನು - ಅಂಜೂರದ ಫಲಗಳನ್ನು ನೋಡುತ್ತೇನೆ; ಉತ್ತಮ ಫಲಗಳು ಅತ್ಯುತ್ತಮವಾಗಿವೆ; ಕೆಟ್ಟ ಫಲಗಳು ಬಹಳ ಕೆಟ್ಟಿವೆ, ಯಾರೂ ತಿನ್ನದ ಹಾಗೆ ಕೇವಲ ಅಸಹ್ಯವಾಗಿವೆ ಎಂದು ಉತ್ತರಕೊಟ್ಟೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಆಗ ಯೆಹೋವ ದೇವರು ನನ್ನನ್ನು, “ಯೆರೆಮೀಯನೇ, ನಿನಗೆ ಕಾಣುತ್ತಿರುವುದು ಏನು?” ಎಂದು ಕೇಳಿದರು. ನಾನು, “ಅಂಜೂರದ ಹಣ್ಣುಗಳನ್ನು ನೋಡುತ್ತಿದ್ದೇನೆ. ಒಳ್ಳೆಯ ಹಣ್ಣುಗಳು ಅತ್ಯುತ್ತಮವಾಗಿವೆ. ಕೆಟ್ಟ ಹಣ್ಣುಗಳು ಬಹಳ ಕೆಟ್ಟಿವೆ. ಯಾರೂ ತಿನ್ನಲಾಗದಷ್ಟು ಅಸಹ್ಯವಾಗಿವೆ,” ಎಂದು ಉತ್ತರಕೊಟ್ಟೆ. ಅಧ್ಯಾಯವನ್ನು ನೋಡಿ |