ಯೆರೆಮೀಯ 23:9 - ಪರಿಶುದ್ದ ಬೈಬಲ್9 ಪ್ರವಾದಿಗಳಿಗೊಂದು ಸಂದೇಶ. ನಾನು ಬಹಳ ದುಃಖಿತನಾಗಿದ್ದೇನೆ. ನನ್ನ ಹೃದಯ ಒಡೆದುಹೋಗಿದೆ. ನನ್ನ ಎಲುಬುಗಳೆಲ್ಲಾ ನಡುಗುತ್ತಿವೆ. ನಾನು ಅಮಲೇರಿದವನಂತಿದ್ದೇನೆ. ಯೆಹೋವನೂ ಆತನ ಪರಿಶುದ್ಧ ನುಡಿಗಳೂ ಇದಕ್ಕೆ ಕಾರಣ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಪ್ರವಾದಿಗಳ ವಿಷಯ: ನನ್ನ ಹೃದಯವು ನನ್ನೊಳಗೆ ಒಡೆದುಹೋಗಿದೆ; ನನ್ನ ಎಲುಬುಗಳೆಲ್ಲಾ ಕರಗಿಹೋಗಿವೆ. ನಾನು ಯೆಹೋವನಿಗೂ ಆತನ ಪರಿಶುದ್ಧ ವಾಕ್ಯಗಳಿಗೂ ವಶನಾಗಿ ಅಮಲೇರಿದವನಂತಿದ್ದೇನೆ. ಹೌದು, ದ್ರಾಕ್ಷಾರಸಕ್ಕೆ ಸೋತವನ ಹಾಗಿದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಪ್ರವಾದಿಗಳ ವಿಷಯ : ನನ್ನ ಗುಂಡಿಗೆ ಒಡೆದುಹೋಗಿದೆ ನನ್ನೆಲುಬುಗಳು ನಡುನಡುಗುತ್ತಿವೆ ಸರ್ವೇಶ್ವರನಿಗೆ, ಆತನ ಪವಿತ್ರವಾಕ್ಯಕ್ಕೆ ಪರವಶನಾದ ನಾನು ಅಮಲೇರಿದಂತವನಾದೆ. ಹೌದು, ಮದ್ಯಪಾನಕ್ಕೆ ಸೋತ ಮನುಷ್ಯನಂತಾದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಪ್ರವಾದಿಗಳ ವಿಷಯ. ನನ್ನ ಹೃದಯವು ನನ್ನೊಳಗೆ ಒಡೆದುಹೋಗಿದೆ; ನನ್ನ ಎಲುಬುಗಳೆಲ್ಲಾ ಕರಗಿಹೋಗಿವೆ. ನಾನು ಯೆಹೋವನಿಗೂ ಆತನ ಪರಿಶುದ್ಧವಾಕ್ಯಗಳಿಗೂ ವಶನಾಗಿ ಅಮಲೇರಿದವನಂತಿದ್ದೇನೆ. ಹೌದು, ದ್ರಾಕ್ಷಾರಸಕ್ಕೆ ಸೋತವನ ಹಾಗಿದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಪ್ರವಾದಿಗಳ ನಿಮಿತ್ತ: ನನ್ನ ಹೃದಯವು ನನ್ನಲ್ಲಿ ಮುರಿದಿದೆ. ನನ್ನ ಎಲುಬುಗಳೆಲ್ಲಾ ಕದಲುತ್ತವೆ. ಯೆಹೋವ ದೇವರ ನಿಮಿತ್ತವೂ, ಆತನ ಪರಿಶುದ್ಧ ವಾಕ್ಯಗಳ ನಿಮಿತ್ತವೂ, ಮತ್ತನಾದ ಮನುಷ್ಯನ ಹಾಗೆಯೂ, ದ್ರಾಕ್ಷಾರಸಕ್ಕೆ ಒಳಗಾದ ಪುರುಷನ ಹಾಗೆಯೂ ಇದ್ದೇನೆ. ಅಧ್ಯಾಯವನ್ನು ನೋಡಿ |
ಒಮ್ಮೊಮ್ಮೆ ನನ್ನಷ್ಟಕ್ಕೆ ನಾನೇ ಹೇಳಿಕೊಳ್ಳುತ್ತೇನೆ, “ನಾನು ಯೆಹೋವನನ್ನೇ ಮರೆತುಬಿಡುತ್ತೇನೆ. ಆತನ ಹೆಸರಿನಲ್ಲಿ ಇನ್ನೇನೂ ಮಾತನಾಡುವುದಿಲ್ಲ” ಎಂದುಕೊಂಡರೆ ಆತನ ಸಂದೇಶವು ನನ್ನ ಅಂತರಾಳದಲ್ಲಿ ಉರಿಯುವ ಜ್ವಾಲೆಯಂತಾಗುತ್ತದೆ. ಅದು ಆಳಕ್ಕೆ ಇಳಿದು ನನ್ನ ಎಲುಬುಗಳನ್ನು ಸುಡುವಂತಾಗುತ್ತದೆ. ಯೆಹೋವನ ಸಂದೇಶವನ್ನು ನನ್ನ ಅಂತರಾಳದಲ್ಲಿ ಹಿಡಿದಿಟ್ಟುಕೊಳ್ಳಲು ಪ್ರಯತ್ನ ಮಾಡಿ ನಾನು ದಣಿಯುತ್ತೇನೆ. ಕೊನೆಗೆ ಅದನ್ನು ನನ್ನೊಳಗೆ ಇಟ್ಟುಕೊಳ್ಳಲು ಅಸಾಧ್ಯವಾಗುತ್ತದೆ.