Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 23:31 - ಪರಿಶುದ್ದ ಬೈಬಲ್‌

31 ನಾನು ಸುಳ್ಳುಪ್ರವಾದಿಗಳನ್ನು ವಿರೋಧಿಸುತ್ತೇನೆ.” ಇದು ಯೆಹೋವನ ನುಡಿ. “ಅವರು ತಮ್ಮ ಮಾತುಗಳನ್ನು ಹೇಳಿ ಅದು ನನ್ನ ಸಂದೇಶವೆಂಬುವಂತೆ ನಟನೆ ಮಾಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಆಹಾ, ತಮ್ಮ ನಾಲಿಗೆಗಳನ್ನು ಚಾಚಿ “ಯೆಹೋವನು ನುಡಿಯುತ್ತಾನೆ” ಎಂದು ಹೇಳುವ ಪ್ರವಾದಿಗಳಿಗೆ ನಾನು ಪ್ರತಿಭಟಿಸುವವನಾಗಿದ್ದೇನೆ. ಇದು ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ತಮ್ಮ ನಾಲಿಗೆಗಳನ್ನು ಆಡಿಸುತ್ತಾ, ‘ಇದು ಸರ್ವೇಶ್ವರನ ನುಡಿ’ ಎಂದು ಹೇಳುವ ಪ್ರವಾದಿಗಳನ್ನು ನಾನು ಪ್ರತಿಭಟಿಸುತ್ತೇನೆ. ಇದು ಸರ್ವೇಶ್ವರನಾದ ನನ್ನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಆಹಾ, ತಮ್ಮ ನಾಲಿಗೆಗಳನ್ನು ಚಾಚಿ ಯೆಹೋವನು ನುಡಿಯುತ್ತಾನೆ ಎಂದು ಹೇಳುವ ಪ್ರವಾದಿಗಳಿಗೆ ನಾನು ಪ್ರತಿಭಟಿಸುವವನಾಗಿದ್ದೇನೆ. ಇದು ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 “ಇಗೋ, ತಮ್ಮ ನಾಲಿಗೆಗಳನ್ನು ಆಡಿಸುತ್ತಾ, ‘ಯೆಹೋವ ದೇವರು ನುಡಿಯುತ್ತಾರೆ,’ ಎಂದು ಅನ್ನುವ ಪ್ರವಾದಿಗಳಿಗೆ ನಾನು ವಿರೋಧವಾಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 23:31
12 ತಿಳಿವುಗಳ ಹೋಲಿಕೆ  

ಕೆಲವು ಜನರು ಯೆಹೋವನ ನಿಜವಾದ ಸಂದೇಶಗಳನ್ನು ದ್ವೇಷಿಸುತ್ತಾರೆ. ಆದ್ದರಿಂದ ಆ ಪ್ರವಾದಿಗಳು ಆ ಜನರಿಗೆ ಬೇರೆಯದನ್ನೇ ಹೇಳುತ್ತಾರೆ. ಅವರು ‘ನಿಮಗೆ ಶುಭವಾಗುವುದು’ ಎನ್ನುತ್ತಾರೆ. ಕೆಲವು ಜನರು ಬಹಳ ಮೊಂಡರಾಗಿದ್ದಾರೆ. ಅವರು ತಮ್ಮ ಮನಸ್ಸಿಗೆ ಬಂದುದನ್ನೇ ಮಾಡುತ್ತಾರೆ. ಅವರಿಗೆ ಈ ಪ್ರವಾದಿಗಳು ‘ನಿಮಗೆ ಯಾವ ಕೇಡೂ ಸಂಭವಿಸುವದಿಲ್ಲ’ ಎಂದು ಹೇಳುತ್ತಾರೆ.


ಅವರು ಪ್ರವಾದಿಗಳಿಗೆ, “ನಾವು ಮಾಡಬೇಕಿರುವ ಕಾರ್ಯಗಳ ಬಗ್ಗೆ ದೈವೋಕ್ತಿ ನುಡಿಯಬೇಡಿ, ನಮಗೆ ಸತ್ಯವನ್ನು ತಿಳಿಸಬೇಡಿ. ನಮಗೊಪ್ಪುವ ಮನರಂಜನೆಯ ಮಾತುಗಳನ್ನಾಡಿ. ನಮಗೋಸ್ಕರ ಒಳ್ಳೆಯ ಸಂಗತಿಗಳನ್ನೇ ನಿಮ್ಮ ದರ್ಶನಗಳಲ್ಲಿ ನೋಡಿರಿ.


ಆಗ ಅಹಾಬನು ನಾನೂರು ಮಂದಿ ಪ್ರವಾದಿಗಳನ್ನು ಒಟ್ಟಾಗಿ ಸೇರಿಸಿ ಅವರಿಗೆ, “ನಾವು ರಾಮೋತ್‌ಗಿಲ್ಯಾದಿನ ಮೇಲೆ ಯುದ್ಧಕ್ಕೆ ಹೊರಡಬೇಕೋ ಬೇಡವೋ?” ಎಂದು ಕೇಳಿದಾಗ ಆ ಪ್ರವಾದಿಗಳು ಅಹಾಬನಿಗೆ, “ಹೋಗು, ದೇವರು ರಾಮೋತ್‌ಗಿಲ್ಯಾದನ್ನು ಸೋಲಿಸುವಂತೆ ಮಾಡುವನು” ಎಂದು ಹೇಳಿದರು.


ಈ ಜನರು ನನ್ನ ಮಾತುಗಳನ್ನು ಕೇಳಲು ಇಷ್ಟಪಡುವದಿಲ್ಲ. ಆದರೆ ಬೇರೊಬ್ಬನ ಸುಳ್ಳು ಮಾತುಗಳನ್ನು ಕೇಳಲು ಇಷ್ಟಪಡುವರು. ಸುಳ್ಳು ಪ್ರವಾದಿಯು ಬಂದು, “ನಿಮಗೆ ಒಳ್ಳೆಯ ಭವಿಷ್ಯವಿದೆ. ಬೇಕಾದಷ್ಟು ದ್ರಾಕ್ಷಾರಸ, ಮದ್ಯವು ನಿಮಗೆ ದೊರಕುವವು” ಎಂದು ಹೇಳಿದರೆ ಅವರು ಅವನನ್ನು ನಂಬಿ ಸ್ವೀಕರಿಸಿಕೊಳ್ಳುವರು.


“ನಾನು ಸುಳ್ಳುಪ್ರವಾದಿಗಳ ವಿರೋಧಿಯಾಗಿದ್ದೇನೆ.” ಇದು ಯೆಹೋವನ ನುಡಿ. “ಈ ಪ್ರವಾದಿಗಳು ನನ್ನ ಪದಗಳನ್ನು ಒಬ್ಬರಿಂದೊಬ್ಬರು ಕದಿಯುತ್ತಿದ್ದಾರೆ.


ನಾನು ಕಾಲ್ಪನಿಕ ಕನಸುಗಳನ್ನು ಬೋಧಿಸುವ ಸುಳ್ಳುಪ್ರವಾದಿಗಳ ವಿರೋಧಿಯಾಗಿದ್ದೇನೆ.” ಇದು ಪ್ರಭುವಿನ ನುಡಿ. “ಅವರು ತಮ್ಮ ಸುಳ್ಳುಬೋಧನೆಗಳಿಂದ ನನ್ನ ಜನರನ್ನು ಅಡ್ಡದಾರಿಗೆಳೆಯುತ್ತಾರೆ. ನಾನು ಜನರಿಗೆ ಉಪದೇಶ ಮಾಡುವದಕ್ಕಾಗಿ ಆ ಪ್ರವಾದಿಗಳನ್ನು ಕಳುಹಿಸಿಲ್ಲ. ನನಗೋಸ್ಕರವಾಗಿ ಏನನ್ನಾದರೂ ಮಾಡಲು ನಾನು ಅವರಿಗೆ ಎಂದೂ ಆಜ್ಞಾಪಿಸಿಲ್ಲ. ಅವರು ಯೆಹೂದದ ಜನರಿಗೆ ಸ್ವಲ್ಪವೂ ಸಹಾಯವನ್ನು ಮಾಡಲಾರರು” ಇದು ಯೆಹೋವನ ನುಡಿ.


“ಒಬ್ಬ ಪ್ರವಾದಿಯು ನಾನು ಹೇಳದ ಸಂಗತಿಯನ್ನು ನಿಮಗೆ ಹೇಳಿದರೂ ಹೇಳಬಹುದು. ದೇವರಿಂದ ಬಂದ ಸಂದೇಶವನ್ನು ನಿಮಗೆ ತಿಳಿಸುತ್ತಿರುವೆನು ಎಂದು ಅವನು ಹೇಳಬಹುದು. ಇಂಥಾ ಸಂದರ್ಭಗಳು ಬಂದಲ್ಲಿ ಆ ಪ್ರವಾದಿಯನ್ನು ಸಾಯಿಸಬೇಕು. ಇಷ್ಟು ಮಾತ್ರವಲ್ಲ ಇತರ ದೇವರುಗಳ ಸಂದೇಶವನ್ನು ಕೊಡುವ ಪ್ರವಾದಿಗಳೂ ಬರಬಹುದು. ಅವರನ್ನೂ ನೀವು ಸಾಯಿಸಬೇಕು.


ಪ್ರವಾದಿಗಳಲ್ಲಿ ಚಿದ್ಕೀಯ ಎಂಬ ಹೆಸರಿನವನೊಬ್ಬನಿದ್ದನು. ಅವನು ಕೆನಾನನ ಮಗ. ಚಿದ್ಕೀಯನು ಕೆಲವು ಕಬ್ಬಿಣದ ಕೊಂಬುಗಳನ್ನು ಮಾಡಿಸಿದ್ದನು. ಆಗ ಅವನು ಅಹಾಬನಿಗೆ, “ಯೆಹೋವನು ಹೀಗೆನ್ನುವನು: ‘ಅರಾಮ್ಯರ ಸೈನ್ಯದ ವಿರುದ್ಧ ಹೋರಾಡಲು ನೀನು ಈ ಕೊಂಬುಗಳನ್ನು ಬಳಸುವೆ. ನೀನು ಅವರನ್ನು ಸೋಲಿಸುವೆ ಮತ್ತು ನಾಶಗೊಳಿಸುವೆ’” ಎಂದು ಹೇಳಿದನು.


ತರುವಾಯ ಪ್ರವಾದಿಯಾದ ಯೆರೆಮೀಯನು ಪ್ರವಾದಿಯಾದ ಹನನ್ಯನಿಗೆ ಹೀಗೆ ಹೇಳಿದನು: “ಹನನ್ಯನೇ, ಕೇಳು. ಯೆಹೋವನು ನಿನ್ನನ್ನು ಕಳುಹಿಸಲಿಲ್ಲ. ಆದರೆ ಯೆಹೂದದ ಜನರಿಗೆ ಸುಳ್ಳನ್ನು ನಂಬುವಂತೆ ನೀನು ಮಾಡಿರುವೆ.


ಹನನ್ಯನು ಅದೇ ವರ್ಷದ ಏಳನೆಯ ತಿಂಗಳಲ್ಲಿ ಮರಣಹೊಂದಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು