ಯೆರೆಮೀಯ 23:26 - ಪರಿಶುದ್ದ ಬೈಬಲ್26 ಎಷ್ಟು ದಿನ ಹೀಗೆ ನಡೆಯುವುದು? ಆ ಪ್ರವಾದಿಗಳು ಸುಳ್ಳುಗಳನ್ನೇ ಯೋಚಿಸುತ್ತಾರೆ. ಆಮೇಲೆ ಆ ಸುಳ್ಳುಗಳನ್ನೇ ಜನರಿಗೆ ಬೋಧಿಸುತ್ತಾರೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201926 ಇವರ ಪೂರ್ವಿಕರು ಬಾಳನನ್ನು ಪೂಜಿಸಿ, ನನ್ನ ಹೆಸರನ್ನು ಮರೆತ ಪ್ರಕಾರ ಈ ಪ್ರವಾದಿಗಳು ಸ್ವಹೃದಯಕಲ್ಪಿತ ಮೋಸವನ್ನು ಪ್ರಕಟಿಸುತ್ತಾ, ತಾವು ಕನಸುಗಳ ಮೂಲಕ ನನ್ನ ಜನರು ನನ್ನ ಹೆಸರನ್ನು ಮರೆಯುವಂತೆ ಮಾಡಬೇಕೆಂದು ಆಲೋಚಿಸಿಕೊಂಡಿದ್ದಾರಲ್ಲಾ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)26 ಇವರ ಪೂರ್ವಜರು ಬಾಳ್‍ದೇವತೆಯನ್ನು ಸೇರಿಕೊಂಡು ನನ್ನ ಹೆಸರನ್ನು ಮರೆತುಬಿಟ್ಟರು. ಅದೇ ಪ್ರಕಾರ ಈ ಪ್ರವಾದಿಗಳು ಸ್ವಕಲ್ಪಿತ ಸುಳ್ಳು ಕನಸುಗಳನ್ನು ಒಬ್ಬರಿಗೊಬ್ಬರು ತಿಳಿಸುವುದರ ಮೂಲಕ ನನ್ನ ಜನರು ನನ್ನ ಹೆಸರನ್ನು ಮರೆಯುವಂತೆ ಮಾಡಬೇಕೆಂದು ಆಲೋಚಿಸುತ್ತಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)26 ಇವರ ಪಿತೃಗಳು ಬಾಳನನ್ನು ಸೇರಿ ನನ್ನ ಹೆಸರನ್ನು ಮರೆತ ಪ್ರಕಾರ ಈ ಪ್ರವಾದಿಗಳು ಸ್ವಹೃದಯಕಲ್ಪಿತ ಮೋಸವನ್ನು ಪ್ರಕಟಿಸುತ್ತಾ ತಾವು ತಮ್ಮ ನೆರೆಹೊರೆಯವರಿಗೆ ತಿಳಿಸುವ ತಮ್ಮ ಕನಸುಗಳ ಮೂಲಕ ನನ್ನ ಜನರು ನನ್ನ ಹೆಸರನ್ನು ಮರೆಯುವಂತೆ ಮಾಡಬೇಕೆಂದು ಆಲೋಚಿಸಿಕೊಂಡಿದ್ದಾರಲ್ಲಾ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ26 ಸುಳ್ಳು ಪ್ರವಾದಿಸುವ ಪ್ರವಾದಿಗಳ ಹೃದಯದಲ್ಲಿ ಇದು ಎಷ್ಟರವರೆಗೆ ಇರುವುದು? ಹೌದು, ಅವರು ತಮ್ಮ ಮನಸ್ಸಿನ ಭ್ರಮೆಗಳನ್ನು ಪ್ರವಾದಿಸುವವರೇ. ಅಧ್ಯಾಯವನ್ನು ನೋಡಿ |
ನೀನು ಮಾಡಿದ ಭಯಾನಕ ಕೃತ್ಯಗಳನ್ನು ನಾನು ನೋಡಿದ್ದೇನೆ. ನಿನ್ನ ಪ್ರಿಯತಮರ ಜೊತೆಗೆ ನಗುವದನ್ನೂ ಕಾಮದಾಟವಾಡುವದನ್ನೂ ನಾನು ನೋಡಿದ್ದೇನೆ. ನೀನು ವೇಶ್ಯೆಯಂತೆ ನಡೆದುಕೊಳ್ಳಬೇಕೆಂದು ಯೋಚನೆ ಮಾಡಿದ್ದು ನನಗೆ ಗೊತ್ತು. ನೀನು ಹೊಲಗಳಲ್ಲಿಯೂ ಬೆಟ್ಟಗಳಲ್ಲಿಯೂ ಮಾಡಿದ ಅಸಹ್ಯಕೃತ್ಯಗಳನ್ನು ನಾನು ನೋಡಿದ್ದೇನೆ. ಜೆರುಸಲೇಮೇ, ಇದರಿಂದ ನಿನಗೆ ತುಂಬಾ ಕೇಡಾಗುವದು. ನೀನು ಎಷ್ಟು ದಿನ ಹೀಗೆಯೇ ನಿನ್ನ ಪಾಪಕೃತ್ಯಗಳನ್ನು ಮುಂದುವರಿಸುವೆ ಎಂದು ನಾನು ಯೋಚಿಸುತ್ತಿದ್ದೇನೆ.”