3 ಮರುದಿನ ಪಷ್ಹೂರನು ಯೆರೆಮೀಯನನ್ನು ಕೋಳದಿಂದ ಬಿಡಿಸಿದನು. ಆಗ ಯೆರೆಮೀಯನು ಪಷ್ಹೂರನಿಗೆ ಹೀಗೆ ಹೇಳಿದನು: “ದೇವರು ನಿನ್ನನ್ನು ಪಷ್ಹೂರ್ ಎಂದು ಹೇಳುವದಿಲ್ಲ. ಈಗ ಯೆಹೋವನು ನಿನಗಿಟ್ಟ ಹೆಸರು, ‘ಪ್ರತಿಯೊಂದು ಭಾಗದಲ್ಲಿಯೂ ಭಯಂಕಾರಿ.’
3 ಮರುದಿನ ಪಷ್ಹೂರನು ಯೆರೆಮೀಯನನ್ನು ಕೋಳದಿಂದ ಬಿಡಿಸಿದನು. ಆಗ ಯೆರೆಮೀಯನು ಅವನಿಗೆ ಹೀಗೆ ಹೇಳಿದನು, “ಯೆಹೋವನು ನಿನ್ನ ಹೆಸರನ್ನು ಪಷ್ಹೂರ್ ಎಂದು ಹೇಳದೆ ಮಾಗೋರ್ ಮಿಸ್ಸಾಬೀಬ್ ಎಂದು ಹೇಳಿದ್ದಾನೆ.
3 ಮರುದಿನ ಆ ಪಷ್ಹೂರನು ಯೆರೆಮೀಯನನ್ನು ಸೆರೆಯಿಂದ ಬಿಡಿಸಿದಾಗ ಯೆರೆಮೀಯ ಅವನಿಗೆ ಹೀಗೆಂದು ಹೇಳಿದನು: “ಸರ್ವೇಶ್ವರ ನಿನ್ನ ಹೆಸರನ್ನು ಪಷ್ಹೂರ್ ಎಂದು ಕರೆಯದೆ ‘ಮಾಗೋರ್ ಮಿಸ್ಸಾಬೀಬ್’ ಎಂದು ಕರೆದಿದ್ದಾರೆ.
3 ಮರುದಿನ ಪಷ್ಹೂರನು ಯೆರೆಮೀಯನನ್ನು ಕೋಳದಿಂದ ಬಿಡಿಸಿದನು. ಆಗ ಯೆರೆಮೀಯನು ಅವನಿಗೆ ಹೀಗೆ ಹೇಳಿದನು - ಯೆಹೋವನು ನಿನ್ನ ಹೆಸರನ್ನು ಪಷ್ಹೂರ್ ಎಂದು ಹೇಳದೆ ಮಾಗೋರ್ ವಿುಸ್ಸಾಬೀಬ್ ಎಂದು ಹೇಳಿದ್ದಾನೆ.
3 ಮಾರನೆ ದಿವಸದಲ್ಲಿ, ಪಷ್ಹೂರನು ಯೆರೆಮೀಯನನ್ನು ಬಂಧನದಿಂದ ಬಿಡಿಸಿದನು. ಆಗ ಯೆರೆಮೀಯನು ಅವನಿಗೆ, “ಯೆಹೋವ ದೇವರು ನಿನಗೆ ಇನ್ನು ಪಷ್ಹೂರನೆಂಬ ಹೆಸರಿನಿಂದಲ್ಲ ಮಾಗೋರ್ ಮಿಸ್ಸಾಬೀಬ್ ಎಂದು ಕರೆಯುತ್ತಾರೆಂದು ಹೇಳಿದನು.
ಅನೇಕ ಜನರು ನನ್ನ ವಿರುದ್ಧವಾಗಿ ಮೆಲುಧ್ವನಿಯಲ್ಲಿ ಮಾತನಾಡುವದು ನನ್ನ ಕಿವಿಗೆ ಬೀಳುತ್ತಿದೆ, ಅದು ನನ್ನನ್ನು ಭಯಗೊಳಿಸುತ್ತಿದೆ. ನನ್ನ ಸ್ನೇಹಿತರು ಸಹ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ನಾನು ಯಾವುದಾದರೂ ತಪ್ಪನ್ನು ಮಾಡಲಿ ಎಂದು ಜನರು ಹೊಂಚುಹಾಕಿ ಕಾದಿದ್ದಾರೆ. “ಅವನು ದುಷ್ಕೃತ್ಯವನ್ನು ಮಾಡಿದ್ದಾನೆಂದು ನಾವು ಸುಳ್ಳು ಹೇಳೋಣ. ಯೆರೆಮೀಯನನ್ನು ನಾವು ವಂಚಿಸಲು ಸಾಧ್ಯವಾಗಬಹುದು. ನಾವು ಅವನನ್ನು ಹಿಡಿದುಕೊಳ್ಳಬಹುದು. ಕೊನೆಗೆ ಅವನನ್ನು ತೊಲಗಿಸಬಹುದು. ನಾವು ಅವನನ್ನು ಹಿಡಿದು ಅವನ ಮೇಲೆ ನಮ್ಮ ಸೇಡನ್ನು ತೀರಿಸಿಕೊಳ್ಳೋಣ” ಎಂದು ಮಾತನಾಡುತ್ತಿದ್ದಾರೆ.
ಭೀತಿಯು ಸುತ್ತಮುತ್ತಲಿಂದ ನನ್ನ ಕಡೆಗೆ ಬರುವಂತೆ ನೀನು ಆಹ್ವಾನಿಸಿದೆ. ಯೆಹೋವನ ಕೋಪದ ದಿನದಂದು ಯಾರೂ ತಪ್ಪಿಸಿಕೊಳ್ಳಲಿಲ್ಲ. ಯಾರೂ ಉಳಿಯಲಿಲ್ಲ. ನಾನು ಸಾಕಿಸಲಹಿದವರನ್ನು ನನ್ನ ವೈರಿಯು ಸಂಹರಿಸಿದನು.
ನಾನು ನೋಡುತ್ತಿರುವುದೇನು? ಸೈನ್ಯವು ಗಾಬರಿಪಟ್ಟಿದೆ. ಸೈನಿಕರು ಓಡಿಹೋಗುತ್ತಿದ್ದಾರೆ. ಅವರ ಶೂರಸೈನಿಕರು ಸೋತಿದ್ದಾರೆ. ಅವರು ಅವಸರದಿಂದ ಓಡಿಹೋಗುತ್ತಿದ್ದಾರೆ. ಅವರು ಹಿಂದಕ್ಕೆ ತಿರುಗಿ ಸಹ ನೋಡುತ್ತಿಲ್ಲ. ಎಲ್ಲಾ ಕಡೆಗೂ ಭೀತಿ ಆವರಿಸಿಕೊಂಡಿದೆ” ಯೆಹೋವನು ಹೀಗೆಂದನು.
ಆಮೇಲೆ ನಾನು ಒಬ್ಬ ಪ್ರವಾದಿನಿಯ ಬಳಿಗೆ ಹೋದೆನು. ಆಕೆಯನ್ನು ಕೂಡಲು, ಆಕೆ ಗರ್ಭವತಿಯಾಗಿ ಒಬ್ಬ ಮಗನನ್ನು ಹಡೆದಳು. ಆಗ ಯೆಹೋವನು ನನಗೆ, “‘ಆ ಮಗನಿಗೆ ಮಹೇರ್ ಶಾಲಾಲ್ ಹಾಷ್ ಬಜ್’ ಎಂಬ ಹೆಸರನ್ನಿಡು.
ಈಗ, ಬೆನ್‌ಹಿನ್ನೊಮೀನ ಕಣಿವೆಯಲ್ಲಿದ್ದ ಈ ಸ್ಥಳವನ್ನು ಜನರು “ತೋಫೆತ್” ಎಂದು ಕರೆಯುತ್ತಾರೆ. ಆದರೆ ಜನರು ಇದನ್ನು “ಕೊಲೆಯ ಕಣಿವೆ” ಎಂದು ಕರೆಯುವ ದಿನಗಳು ಬರುತ್ತಿವೆ ಎಂದು ನಾನು ನಿಮಗೆ ಮುನ್ನೆಚ್ಚರಿಕೆಯನ್ನು ಕೊಡುತ್ತೇನೆ. ಇದು ಯೆಹೋವನ ನುಡಿ.
ಬೋಕಿಯ ದ್ವಾರದ ಸಮೀಪದಲ್ಲಿರುವ ಬೆನ್‌ಹಿನ್ನೊಮ್ ತಗ್ಗಿಗೆ ಹೋಗು. ನಿನ್ನ ಸಂಗಡ ಜನರ ಹಿರಿಯರಲ್ಲಿ ಕೆಲವರನ್ನೂ ಯಾಜಕರ ಹಿರಿಯರಲ್ಲಿ ಕೆಲವರನ್ನೂ ಕರೆದುಕೊಂಡು ಹೋಗು. ನಾನು ನಿನಗೆ ಹೇಳುವುದನ್ನು ನೀನು ಅಲ್ಲಿ ಅವರಿಗೆ ಹೇಳು.
ಹೀಗಿರಲು ನಾನು ಈ ಕಣಿವೆಯನ್ನು ತೋಫೆತ್ ಮತ್ತು ಬೆನ್‌ಹಿನ್ನೊಮೀನ ಕಣಿವೆ ಎಂದು ಕರೆಯದೆ ಇದನ್ನು ಸಂಹಾರದ ಕಣಿವೆ ಎಂದು ಕರೆಯುವ ದಿನಗಳು ಬರುತ್ತಿವೆ ಎಂಬ ಎಚ್ಚರಿಕೆಯನ್ನು ಕೊಡುತ್ತೇನೆ.” ಇದು ಯೆಹೋವನು ಹೇಳಿದ ಮಾತು. “ಶವಗಳನ್ನು ಹೂಳುವದಕ್ಕೆ ಕೊಂಚವೂ ಸ್ಥಳ ಇಲ್ಲದಂತಾಗುವವರೆಗೆ ತೋಫೆತಿನಲ್ಲಿ ಶವಗಳನ್ನು ಹೂಳುವ ಕಾರಣ ಅದಕ್ಕೆ ಈ ಹೆಸರನ್ನು ಕೊಡಲಾಗುವುದು.
ಆಗ ಆ ಪುರುಷನು, “ಇನ್ನು ಮೇಲೆ ನಿನ್ನ ಹೆಸರು ‘ಯಾಕೋಬ’ ಎಂದಿರುವುದಿಲ್ಲ. ಇಂದಿನಿಂದ ನಿನ್ನ ಹೆಸರು ‘ಇಸ್ರೇಲ್’ ಎಂದಾಗುವುದು. ನಾನೇ ನಿನಗೆ ಈ ಹೆಸರನ್ನು ಕೊಟ್ಟಿದ್ದೇನೆ; ಯಾಕೆಂದರೆ ನೀನು ದೇವರೊಡನೆಯೂ ಮನುಷ್ಯರೊಡನೆಯೂ ಹೋರಾಡಿದೆ; ಆದರೂ ನೀನು ಸೋಲಲಿಲ್ಲ” ಎಂದು ಹೇಳಿದನು.
ಯೆಹೋವನು ಹೇಳುವುದೇನೆಂದರೆ, “ಯಾವ ಪ್ರವಾದಿಗಳು ಸುಳ್ಳುದರ್ಶನವನ್ನು ನೋಡಿ ಸುಳ್ಳನ್ನು ಹೇಳಿದ್ದಾರೋ, ಅವರನ್ನು ಶಿಕ್ಷಿಸುವೆನು. ನನ್ನ ಜನರ ಮಧ್ಯೆಯಿಂದ ಅವರನ್ನು ತೆಗೆದುಬಿಡುವೆನು. ಅವರ ಹೆಸರುಗಳು ಇಸ್ರೇಲರ ವಂಶಾವಳಿ ಪಟ್ಟಿಯಲ್ಲಿ ಇರುವುದಿಲ್ಲ. ಅವರು ಇಸ್ರೇಲ್ ದೇಶಕ್ಕೆ ಹಿಂದಿರುಗಿ ಬರುವುದಿಲ್ಲ. ನಾನೇ ಒಡೆಯನಾದ ಯೆಹೋವನೆಂದು ಆಗ ನಿಮಗೆ ಗೊತ್ತಾಗುವುದು.