7 “ನಾನು ನಿಮ್ಮನ್ನು ಅನೇಕ ಅಮೂಲ್ಯವಸ್ತುಗಳಿಂದ ಕೂಡಿದ ಫಲವತ್ತಾದ ಭೂಮಿಗೆ ಕರೆದುತಂದೆ. ಅಲ್ಲಿ ಬೆಳೆಯುವ ಫಲಗಳನ್ನು ತಿನ್ನಲಿ ಎಂಬ ಉದ್ದೇಶದಿಂದ ನಾನು ಕರೆದುತಂದೆ. ಆದರೆ ನೀವು ಬಂದು ನನ್ನ ಭೂಮಿಯನ್ನು ಹೊಲಸು ಮಾಡಿದಿರಿ. ನಾನು ಆ ಭೂಮಿಯನ್ನು ನಿಮಗೆ ಕೊಟ್ಟೆ, ಆದರೆ ನೀವು ಅದನ್ನು ಕೆಟ್ಟ ಸ್ಥಳವನ್ನಾಗಿ ಮಾಡಿದಿರಿ.
7 ನಾನು ನಿಮ್ಮನ್ನು ಫಲವತ್ತಾದ ಸೀಮೆಗೆ ಕರೆತಂದು, ಅದರ ಫಲವನ್ನು ಮತ್ತು ಸಾರವನ್ನು ಅನುಭವಿಸುವ ಹಾಗೆ ಮಾಡಿದೆನು. ಆದರೆ ನೀವು ಆ ನನ್ನ ದೇಶವನ್ನು ಪ್ರವೇಶಿಸಿ, ಅದನ್ನು ಹೊಲೆ ಮಾಡಿ, ನನ್ನ ಸ್ವತ್ತನ್ನು ಅಸಹ್ಯಪಡಿಸಿದಿರಿ.
7 ನಾನು ನಿಮ್ಮನ್ನು ಫಲವತ್ತಾದ ನಾಡಿಗೆ ಕರೆತಂದೆ. ಅದರ ಫಲವನ್ನೂ ಸಾರವನ್ನೂ ಅನುಭವಿಸುವ ಹಾಗೆ ಮಾಡಿದೆ. ಆದರೆ ನೀವು ಒಳನುಗ್ಗಿ ಬಂದು ಆ ನನ್ನ ನಾಡನ್ನು ಹೊಲೆಮಾಡಿದಿರಿ; ಆ ನನ್ನ ಸೊತ್ತನ್ನು ಅಸಹ್ಯಪಡಿಸಿದಿರಿ.
7 ನಾನು ನಿಮ್ಮನ್ನು ಫಲವತ್ತಾದ ಸೀಮೆಗೆ ಕರತಂದು ಅದರ ಫಲವನ್ನೂ ಸಾರವನ್ನೂ ಅನುಭವಿಸುವ ಹಾಗೆ ಮಾಡಿದೆನು; ಆದರೆ ನೀವು ಪ್ರವೇಶಿಸಿ ಆ ನನ್ನ ದೇಶವನ್ನು ಹೊಲೆಮಾಡಿ ನನ್ನ ಸ್ವಾಸ್ತ್ಯವನ್ನು ಅಸಹ್ಯಪಡಿಸಿದಿರಿ.
7 ನಾನು ನಿಮ್ಮನ್ನು ಸಮೃದ್ಧಿಯಾದ ದೇಶಕ್ಕೆ ಅದರ ಸಾರವನ್ನೂ, ಮೇಲನ್ನೂ ತಿನ್ನುವ ಹಾಗೆ ಕರೆದುಕೊಂಡು ಬಂದೆನು. ಆದರೆ ನೀವು ಬಂದು ನನ್ನ ದೇಶವನ್ನು ಅಶುದ್ಧಮಾಡಿ, ನನ್ನ ಸೊತ್ತನ್ನು ಅಸಹ್ಯ ಮಾಡಿದಿರಿ.
ಅವರು ಮಾಡಿದ ದುಷ್ಕೃತ್ಯಗಳಿಗಾಗಿ ನಾನು ಯೆಹೂದದ ಜನರನ್ನು ಶಿಕ್ಷಿಸುತ್ತೇನೆ. ಪ್ರತಿಯೊಂದು ಪಾಪಕ್ಕಾಗಿ ನಾನು ಅವರನ್ನು ಎರಡು ಸಲ ಶಿಕ್ಷಿಸುತ್ತೇನೆ. ಅವರು ನನ್ನ ದೇಶವನ್ನು ‘ಹೊಲಸು’ ಮಾಡಿದ್ದಕ್ಕಾಗಿ ನಾನು ಹೀಗೆ ಮಾಡುತ್ತೇನೆ. ಅವರು ತಮ್ಮ ಭಯಂಕರವಾದ ವಿಗ್ರಹಗಳಿಂದ ನನ್ನ ಪ್ರದೇಶವನ್ನು ‘ಹೊಲಸು’ ಮಾಡಿದ್ದಾರೆ. ನಾನು ಆ ವಿಗ್ರಹಗಳನ್ನು ದ್ವೇಷಿಸುತ್ತೇನೆ. ಆದರೆ ಅವರು ತಮ್ಮ ವಿಗ್ರಹಗಳಿಂದ ನನ್ನ ದೇಶವನ್ನು ತುಂಬಿಸಿಬಿಟ್ಟಿದ್ದಾರೆ.”
ಯೆಹೋವನು ಹೀಗೆ ನುಡಿದನು: “ಒಬ್ಬನು ತನ್ನ ಹೆಂಡತಿಯೊಂದಿಗೆ ವಿವಾಹವಿಚ್ಛೇದನ ಮಾಡಿಕೊಂಡ ಮೇಲೆ ಅವಳು ಮತ್ತೊಬ್ಬನನ್ನು ಮದುವೆಯಾದರೆ ಆ ಮೊದಲನೆಯ ಗಂಡನು ಪುನಃ ಅವಳಲ್ಲಿಗೆ ಬರಲು ಸಾಧ್ಯವೇ? ಇಲ್ಲ. ಆ ಮನುಷ್ಯನು ಪುನಃ ಆ ಸ್ತ್ರೀಯಲ್ಲಿಗೆ ಹೋದರೆ ಆ ದೇಶವು ಪರಿಪೂರ್ಣವಾಗಿ ಅಪವಿತ್ರವಾಗುತ್ತದೆ. ಯೆಹೂದವೇ, ನೀನು ಬಹು ಜನರೊಂದಿಗೆ ಕಾಮದಾಟವಾಡಿದ ವೇಶ್ಯಾ ಸ್ತ್ರೀಯಂತೆ ವರ್ತಿಸಿದೆ. ಈಗ ನೀನು ಪುನಃ ನನ್ನಲ್ಲಿಗೆ ಬರಲು ಇಚ್ಛಿಸುವಿಯಾ?” ಇದು ಯೆಹೋವನ ನುಡಿ.
ಎದ್ದು ಈ ಸ್ಥಳವನ್ನು ಬಿಟ್ಟುಹೋಗು. ಇದು ನಿನ್ನ ವಿಶ್ರಾಂತಿಯ ಸ್ಥಳವಲ್ಲ, ಯಾಕೆಂದರೆ ನೀನು ಇದನ್ನು ಹಾಳು ಮಾಡಿರುವೆ. ನೀನು ಇದನ್ನು ಹೊಲಸು ಮಾಡಿರುವೆ, ಆದ್ದರಿಂದ ಇದು ನಾಶವಾಗುವದು; ಭಯಂಕರ ರೀತಿಯಲ್ಲಿ ಕೆಡವಲ್ಪಡುವದು.
ಅವರನ್ನು ಈಜಿಪ್ಟಿನಿಂದ ಹೊರಗೆ ತಂದು, ನಾನು ಅವರಿಗಾಗಿ ಹುಡುಕಿಟ್ಟಿರುವ ದೇಶಕ್ಕೆ ಕರೆದುಕೊಂಡು ಹೋಗುವುದಾಗಿ ವಾಗ್ದಾನ ಮಾಡಿದೆನು. ಅದು ಹಾಲೂ ಜೇನೂ ಹರಿಯುವ ದೇಶವಾಗಿತ್ತು. ಅದು ಎಲ್ಲಾ ದೇಶಗಳಿಗಿಂತಲೂ ಸುಂದರವಾದ ದೇಶ.
ಬಲಾಢ್ಯ ನಗರಗಳನ್ನು ಸ್ವಾಧೀನಪಡಿಸಿಕೊಂಡರು. ಉತ್ತಮವಾದ ಭೂಮಿಯನ್ನು ವಶಪಡಿಸಿಕೊಂಡರು. ಒಳ್ಳೆಯ ವಸ್ತುಗಳಿಂದ ತುಂಬಿದ್ದ ಮನೆಗಳನ್ನು ಅವರು ವಶಪಡಿಸಿಕೊಂಡರು. ಅಗೆದು ತಯಾರಾಗಿದ್ದ ಬಾವಿಗಳನ್ನು ಅವರಿಗೆ ನೀನು ಕೊಟ್ಟೆ, ದ್ರಾಕ್ಷಿತೋಟವನ್ನು, ಎಣ್ಣೆಮರಗಳ ತೋಪನ್ನು, ಬೇಕಾದಷ್ಟು ಹಣ್ಣಿನ ಮರಗಳನ್ನು ನೀನು ಅವರಿಗೆ ಕೊಟ್ಟೆ. ಅವರ ಹೊಟ್ಟೆ ತುಂಬಿ ಕೊಬ್ಬೇರುವಷ್ಟು ಅವರಿಗೆ ಕೊಟ್ಟೆ. ನೀನು ಕೊಟ್ಟ ಉತ್ತಮವಾದ ವಸ್ತುಗಳಲ್ಲಿ ಅವರು ಆನಂದಿಸಿದರು.
ಇಡೀ ರಾತ್ರಿ ಆ ಮರದಲ್ಲಿ ಅವನ ಶರೀರ ನೇತಾಡುವಂತೆ ಮಾಡಬಾರದು. ಅದೇ ದಿವಸದಲ್ಲಿ ಅವನ ಶವವು ಹೂಳಲ್ಪಡಬೇಕು. ಯಾಕೆಂದರೆ ಮರದಲ್ಲಿ ತೂಗುಹಾಕಲ್ಪಟ್ಟ ಮನುಷ್ಯನು ದೇವರಿಂದ ಶಪಿಸಲ್ಪಟ್ಟವನು. ನಿಮ್ಮ ದೇವರಾದ ಯೆಹೋವನು ನಿಮಗೆ ಕೊಟ್ಟ ದೇಶವನ್ನು ನೀವು ಹೊಲಸು ಮಾಡಬೇಡಿರಿ.
ಯೋಗ್ಯವಾದವುಗಳನ್ನು, ಸರಿಯಾದವುಗಳನ್ನು ಮತ್ತು ಯೆಹೋವನು ಮೆಚ್ಚುವ ಕಾರ್ಯಗಳನ್ನು ನೀವು ಮಾಡಬೇಕು. ಆಗ ನಿಮ್ಮ ಕಾರ್ಯಗಳೆಲ್ಲವೂ ಸಫಲವಾಗುವುವು. ಅಲ್ಲದೆ ಯೆಹೋವನು ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ದೇಶದೊಳಗೆ ನೀವು ಹೋಗಿ ಅದನ್ನು ವಶಪಡಿಸಿಕೊಳ್ಳಬಹುದು.
“ಯೆಹೂದವೇ, ತಲೆಯೆತ್ತಿ ಬೋಳುಗುಡ್ಡಗಳ ಕಡೆಗೆ ನೋಡು. ನೀನು ಕಾಮಕೇಳಿ ಆಡದ ಸ್ಥಳ ಯಾವುದಾದರೂ ಇದೆಯೇ? ಅರಬೀಯನಂತೆ ನೀನು ಮಾರ್ಗದ ಮಗ್ಗುಲಲ್ಲಿ ಪ್ರಿಯತಮರಿಗಾಗಿ ಎದುರುನೋಡುತ್ತಾ ಕುಳಿತಿರುವೆ. ನೀನು ಭೂಮಿಯನ್ನು ಅಪವಿತ್ರಗೊಳಿಸಿದೆ; ಹೇಗೆಂದರೆ, ನೀನು ಅನೇಕ ಕೆಟ್ಟಕೆಲಸಗಳನ್ನು ಮಾಡಿದೆ. ನನಗೆ ವಿಶ್ವಾಸದ್ರೋಹ ಮಾಡಿದೆ.
ಇಸ್ರೇಲಿನ ಜನರು ಈ ಪ್ರದೇಶಕ್ಕೆ ಬಂದು ಅದನ್ನು ತಮ್ಮದನ್ನಾಗಿ ಮಾಡಿಕೊಂಡರು. ಆದರೆ ಅವರು ನಿನ್ನ ಆಜ್ಞೆಯನ್ನು ಪಾಲಿಸಲಿಲ್ಲ; ನಿನ್ನ ಉಪದೇಶಗಳನ್ನು ಅನುಸರಿಸಲಿಲ್ಲ; ನಿನ್ನ ಆಜ್ಞೆಯಂತೆ ಮಾಡಲಿಲ್ಲ. ಆದ್ದರಿಂದ ನೀನು ಇಸ್ರೇಲರಿಗೆ ಇಂಥಾ ದುರ್ಗತಿ ಬರುವಂತೆ ಮಾಡಿದೆ.
ನಾನು ಇಸ್ರೇಲಿನ ಜನರನ್ನು ಮತ್ತು ಯೆಹೂದದ ಜನರನ್ನು ಗಮನಿಸಿದ್ದೇನೆ. ಅವರು ಮಾಡುವದೆಲ್ಲ ಕೆಟ್ಟದ್ದೆ. ಅವರು ಚಿಕ್ಕಂದಿನಿಂದ ಕೆಟ್ಟದ್ದನ್ನೇ ಮಾಡಿದ್ದಾರೆ. ಇಸ್ರೇಲಿನ ಜನರು ತಮ್ಮ ಕೈಗಳಿಂದ ಮಾಡಿದ ವಿಗ್ರಹಗಳನ್ನು ಪೂಜಿಸಿ ನನಗೆ ಬಹುಕೋಪ ಬರುವಂತೆ ಮಾಡಿದರು.” ಇದು ಯೆಹೋವನ ನುಡಿ.
ನಾನು ಅವರಿಗೆ ಕೊಡುವುದಾಗಿ ವಾಗ್ದಾನ ಮಾಡಿದ ದೇಶಕ್ಕೆ ಅವರನ್ನು ಕರೆದುಕೊಂಡು ಬಂದೆನು. ಆದರೆ ಎತ್ತರವಾದ ಬೆಟ್ಟವನ್ನಾಗಲಿ ಎಲೆಗಳುಳ್ಳ ಮರವನ್ನಾಗಲಿ ಅವರು ಕಂಡಾಗಲೆಲ್ಲಾ ಅವರು ಅಲ್ಲಿಗೆ ಹೋದರು ಮತ್ತು ವಿಗ್ರಹಗಳನ್ನು ಪೂಜಿಸಿದರು. ಅಲ್ಲಿ ಅವರು ಯಜ್ಞಗಳನ್ನೂ ನನ್ನನ್ನು ಕೋಪಗೊಳಿಸುವ ಕಾಣಿಕೆಗಳನ್ನೂ ಧೂಪವನ್ನೂ ಮತ್ತು ಪಾನದ್ರವ್ಯಾರ್ಪಣೆಗಳನ್ನೂ ಅರ್ಪಿಸಿದರು.
ಅವರು ನಿನಗೆ ಎದುರುಬಿದ್ದು ನಿನ್ನ ಬೋಧನೆಯನ್ನು ತಾತ್ಸಾರ ಮಾಡಿದರು; ನಿನ್ನ ಪ್ರವಾದಿಗಳನ್ನು ಕೊಂದರು. ಆ ಪ್ರವಾದಿಗಳಾದರೋ ಜನರನ್ನು ಎಚ್ಚರಿಸಿದರು; ನಿನ್ನ ಬಳಿಗೆ ಹಿಂತಿರುಗುವಂತೆ ಜನರನ್ನು ಪ್ರೋತ್ಸಾಹಿಸಿದರು. ಆದರೆ ನಮ್ಮ ಪೂರ್ವಿಕರು ನಿನಗೆ ವಿರೋಧವಾಗಿ ಭಯಂಕರವಾದ ಕೃತ್ಯಗಳನ್ನು ಮಾಡಿದರು.
ಸರ್ವಶಕ್ತನಾದ ಯೆಹೋವನು ಈ ದೇಶಗಳನ್ನು ಆಶೀರ್ವದಿಸುವನು. ಆತನು, “ಈಜಿಪ್ಟೇ, ನೀನು ನನ್ನವನು; ಅಶ್ಶೂರವೇ, ನಾನು ನಿನ್ನನ್ನು ನಿರ್ಮಿಸಿದೆನು. ಇಸ್ರೇಲೇ, ನೀನು ನನ್ನ ಸ್ವಾಸ್ತ್ಯ. ನೀವೆಲ್ಲರೂ ಆಶೀರ್ವದಿಸಲ್ಪಟ್ಟವರು” ಎನ್ನುವನು.
“‘ಇಸ್ರೇಲ್ ಜನರು ನನ್ನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ. ನನ್ನ ಕಟ್ಟಳೆಗಳಿಗೆ ವಿಧೇಯರಾಗಲು ನಿರಾಕರಿಸಿದರು. ನಾನು ನೇಮಿಸಿದ ಸಬ್ಬತ್ ದಿವಸಗಳನ್ನು ಅಲಕ್ಷ್ಯಮಾಡಿದರು. ಮತ್ತು ಅವರ ಪೂರ್ವಿಕರ ಹೊಲಸು ವಿಗ್ರಹಗಳನ್ನು ಪೂಜಿಸಿದರು.
“ನನ್ನ ಒಡೆಯನಾದ ಯೆಹೋವನು ಹೀಗೆ ಹೇಳಿದನು: ‘ಜೆರುಸಲೇಮೇ, ನೀನು ನನ್ನನ್ನು ಮರೆತುಬಿಟ್ಟೆ. ನೀನು ನನ್ನನ್ನು ತೊರೆದುಬಿಟ್ಟೆ; ಆದ್ದರಿಂದ ನೀನು ನನ್ನನ್ನು ತೊರೆದ ಸೂಳೆಯಂತೆ ಜೀವಿಸಿದ್ದಕ್ಕೆ ಶಿಕ್ಷೆ ಅನುಭವಿಸಬೇಕು. ನಿನ್ನ ನೀಚ ನಡತೆಗಾಗಿ ನೀನು ಕಷ್ಟ ಅನುಭವಿಸಬೇಕು.’”