ಯೆರೆಮೀಯ 19:5 - ಪರಿಶುದ್ದ ಬೈಬಲ್5 ಯೆಹೂದದ ರಾಜರು ಬಾಳ್ ದೇವರಿಗಾಗಿ ಉನ್ನತವಾದ ಸ್ಥಳಗಳನ್ನು ಕಟ್ಟಿಸಿದರು. ಅವರು ಆ ಸ್ಥಳಗಳಲ್ಲಿ ತಮ್ಮ ಗಂಡುಮಕ್ಕಳನ್ನು ಹೋಮಮಾಡಿದರು. ಅವರು ಬಾಳ್ ದೇವರಿಗೆ ತಮ್ಮ ಗಂಡುಮಕ್ಕಳನ್ನು ಆಹುತಿಕೊಟ್ಟರು. ನಾನು ಹಾಗೆ ಮಾಡಲು ಅವರಿಗೆ ಹೇಳಿರಲಿಲ್ಲ. ನಿಮ್ಮ ಗಂಡುಮಕ್ಕಳನ್ನು ಆಹುತಿಯಾಗಿ ಕೊಡಿ ಎಂದು ನಿಮಗೆ ಹೇಳಲಿಲ್ಲ. ಅಂಥ ವಿಚಾರ ನನ್ನ ಮನಸ್ಸಿನಲ್ಲಿ ಬರಲೇ ಇಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಅವರು ಅದನ್ನು ನಿರ್ದೋಷಿಗಳ ರಕ್ತದಿಂದ ತುಂಬಿಸಿ, ತಮ್ಮ ಮಕ್ಕಳನ್ನು ಬಾಳ್ ದೇವತೆಗೆ ಆಹುತಿ ಕೊಡುವುದಕ್ಕೆ ಬಾಳನ ಪೂಜಾಸ್ಥಳಗಳನ್ನು ಏರ್ಪಡಿಸಿಕೊಂಡಿದ್ದಾರಲ್ಲಾ. ನಾನು ಇಂಥಾ ಆಚಾರವನ್ನು ವಿಧಿಸಲಿಲ್ಲ, ಅದರ ಮಾತನ್ನೇ ಆಡಲಿಲ್ಲ, ಅದು ನನ್ನ ಮನಸ್ಸಿನಲ್ಲಿ ಹುಟ್ಟಲೂ ಇಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ತಮ್ಮ ಮಕ್ಕಳನ್ನು ಬಾಳ್‍ದೇವತೆಗೆ ಆಹುತಿಕೊಡಲು ಆ ದೇವತೆಗೆ ಬಲಿಪೀಠಗಳನ್ನು ಕೂಡ ಏರ್ಪಡಿಸಿದ್ದಾರೆ. ನಾನು ಇಂಥ ಆಚಾರಗಳನ್ನು ವಿಧಿಸಲಿಲ್ಲ. ಅದರ ಮಾತನ್ನೇ ಎತ್ತಲಿಲ್ಲ. ಅಂಥದ್ದು ನನ್ನ ಮನಸ್ಸಿಗೂ ತೋಚಿದ್ದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಅದನ್ನು ನಿರ್ದೋಷಿಗಳ ರಕ್ತದಿಂದ ತುಂಬಿಸಿ ತಮ್ಮ ಮಕ್ಕಳನ್ನು ಬಾಳ್ ದೇವತೆಗೆ ಆಹುತಿಕೊಡುವದಕ್ಕೆ ಬಾಳನ ಪೂಜಾಸ್ಥಳಗಳನ್ನು ಏರ್ಪಡಿಸಿಕೊಂಡಿದ್ದಾರಲ್ಲಾ; ನಾನು ಇಂಥಾ ಆಚಾರವನ್ನು ವಿಧಿಸಲಿಲ್ಲ. ಅದರ ಮಾತನ್ನೇ ಆಡಲಿಲ್ಲ, ಅದು ನನ್ನ ಮನಸ್ಸಿನಲ್ಲಿ ಹುಟ್ಟಲೂ ಇಲ್ಲ; ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ತಮ್ಮ ಮಕ್ಕಳನ್ನು ಬಾಳನಿಗೆ ದಹನಬಲಿಗಳಾಗಿ ಬೆಂಕಿಯಲ್ಲಿ ಸುಡುವುದಕ್ಕೆ ಬಾಳನ ಉನ್ನತ ಪೂಜಾಸ್ಥಳಗಳನ್ನು ಕಟ್ಟಿದ್ದಾರೆ. ಇಂಥಾದ್ದನ್ನು ನಾನು ಆಜ್ಞಾಪಿಸಲಿಲ್ಲ. ನಾನು ಹೇಳಲಿಲ್ಲ, ನನ್ನ ಮನಸ್ಸಿಗೆ ಬರಲಿಲ್ಲ. ಅಧ್ಯಾಯವನ್ನು ನೋಡಿ |
ಮನಸ್ಸೆಯು ತನ್ನ ಮಗನನ್ನು ಆಹುತಿಕೊಟ್ಟು ಅವನನ್ನು ಯಜ್ಞವೇದಿಕೆಯ ಮೇಲೆ ಹೋಮಮಾಡಿದನು. ಮನಸ್ಸೆಯು ಭವಿಷ್ಯತ್ಕಾಲವನ್ನು ಅರಿಯಲು ಅನೇಕ ಮಾರ್ಗಗಳಲ್ಲಿ ಪ್ರಯತ್ನಿಸುತ್ತಿದ್ದನು. ಅವನು ಪ್ರೇತಾತ್ಮಗಳನ್ನು ವಶಪಡಿಸಿಕೊಂಡಿರುವ ಮಾಂತ್ರಿಕರನ್ನು ಮತ್ತು ತಾಂತ್ರಿಕರನ್ನು ಭೇಟಿಮಾಡಿದನು. ಯೆಹೋವನು ಕೆಟ್ಟದ್ದೆಂದು ಹೇಳಿದ ಅನೇಕಾನೇಕ ಕಾರ್ಯಗಳನ್ನು ಮನಸ್ಸೆಯು ಮಾಡಿದನು. ಯೆಹೋವನು ಕೋಪಗೊಳ್ಳಲು ಇದು ಕಾರಣವಾಯಿತು.