ಯೆರೆಮೀಯ 16:3 - ಪರಿಶುದ್ದ ಬೈಬಲ್3 ಯೆಹೂದ ಪ್ರದೇಶದಲ್ಲಿ ಹುಟ್ಟಿದ ಮಕ್ಕಳ ಕುರಿತಾಗಿಯೂ ಅದರ ತಂದೆತಾಯಿಗಳ ಕುರಿತಾಗಿಯೂ ಯೆಹೋವನು ಹೀಗೆ ಹೇಳುತ್ತಾನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಏಕೆಂದರೆ ಈ ಸ್ಥಳದಲ್ಲಿ ಹುಟ್ಟುವ ಗಂಡು ಹೆಣ್ಣು ಮಕ್ಕಳು, ಅವರನ್ನು ಹೆತ್ತ ತಾಯಿಯರು, ಅವರನ್ನು ಈ ದೇಶದಲ್ಲಿ ಪಡೆದ ತಂದೆಯಂದಿರಿಗೆ, ಇವರೆಲ್ಲರ ವಿಷಯವಾಗಿ ಯೆಹೋವನು ಹೀಗೆ ನುಡಿದಿದ್ದಾನೆ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಏಕೆಂದರೆ ಇಲ್ಲಿ ಆ ಗಂಡುಹೆಣ್ಣು ಮಕ್ಕಳಿಗೆ, ಅವರನ್ನು ಹೆತ್ತ ತಾಯಿಯರಿಗೆ, ಅವರನ್ನು ಈ ನಾಡಿನಲ್ಲಿ ಪಡೆದ ತಂದೆಯರಿಗೆ ಸಂಭವಿಸಲು ಇರುವುದನ್ನು ಸರ್ವೇಶ್ವರನಾದ ನಾನು ಹೇಳುತ್ತೇನೆ, ಕೇಳು: ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಏಕಂದರೆ ಈ ಸ್ಥಳದಲ್ಲಿ ಹುಟ್ಟುವ ಗಂಡು ಹೆಣ್ಣು ಮಕ್ಕಳು, ಅವರನ್ನು ಹೆತ್ತ ತಾಯಿಯರು, ಅವರನ್ನು ಈ ದೇಶದಲ್ಲಿ ಪಡೆದ ತಂದೆಗಳು, ಇವರೆಲ್ಲರ ವಿಷಯವಾಗಿ ಯೆಹೋವನು ಹೀಗೆ ನುಡಿದಿದ್ದಾನೆ - ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಏಕೆಂದರೆ ಈ ಸ್ಥಳದಲ್ಲಿ ಹುಟ್ಟಿರುವ ಪುತ್ರಪುತ್ರಿಯರನ್ನು ಕುರಿತು ಮತ್ತು ಅವರ ತಾಯಂದಿರನ್ನೂ, ಅವರನ್ನು ಪಡೆದ ತಂದೆಗಳನ್ನೂ ಕುರಿತು ಯೆಹೋವ ದೇವರು ಹೀಗೆ ಹೇಳುತ್ತಾರೆ: ಅಧ್ಯಾಯವನ್ನು ನೋಡಿ |
ಯೆಹೋವನು ಹೇಳಿದನು: “ಯೆರೆಮೀಯನೇ, ಜನರು ಶವಸಂಸ್ಕಾರದ ಊಟಮಾಡುತ್ತಿರುವ ಮನೆಯೊಳಗೆ ನೀನು ಹೋಗಬೇಡ. ಸತ್ತವರ ಸಂಗಡ ಅಳುವದಕ್ಕಾಗಲಿ ಅಥವಾ ನಿನ್ನ ದುಃಖವನ್ನು ಸೂಚಿಸುವದಕ್ಕಾಗಲಿ, ನೀನು ಅಲ್ಲಿಗೆ ಹೋಗಬೇಡ. ಏಕೆಂದರೆ ನಾನು ಅವರ ಮೇಲಿನ ನನ್ನ ಕೃಪೆಯನ್ನು ಹಿಂತೆಗೆದುಕೊಂಡಿದ್ದೇನೆ. ನಾನು ಯೆಹೂದದ ಈ ಜನರಿಗೆ ಕರುಣೆಯನ್ನು ತೋರಿಸುವದಿಲ್ಲ. ನಾನು ಅವರಿಗೋಸ್ಕರ ವ್ಯಥೆಪಡುವದಿಲ್ಲ.” ಇದು ಯೆಹೋವನ ನುಡಿ.
ಆತನು ಹೇಳಿದ್ದೇನೆಂದರೆ: ಇಸ್ರೇಲ್ ಜನರಿಗೆ ಹೇಳು: ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ‘ಇಗೋ, ನನ್ನ ಪವಿತ್ರಾಲಯವನ್ನು ಹಾಳುಮಾಡುವೆನು. ನೀವು ಆ ಸ್ಥಳದ ಬಗ್ಗೆ ಹೆಮ್ಮೆಯುಳ್ಳವರಾಗಿದ್ದು ಸ್ತುತಿಗೀತೆಗಳನ್ನು ಹಾಡುತ್ತೀರಿ. ಅದು ಶಕ್ತಿ ದೊರಕುವ ಸ್ಥಳ. ನೀವು ಆ ಆಲಯವನ್ನು ನೋಡುತ್ತಾ ಆನಂದಿಸುತ್ತೀರಿ; ಅದನ್ನು ಬಹಳವಾಗಿ ಪ್ರೀತಿಸುತ್ತೀರಿ. ಆದರೆ ನಾನು ಅದನ್ನು ಕೆಡವಿಬಿಡುವೆನು. ನೀವು ಬಿಟ್ಟುಹೋಗುವ ನಿಮ್ಮ ಮಕ್ಕಳು ಯುದ್ಧದಲ್ಲಿ ಸಾಯುವರು.