11 ನೀನು ಅವರಿಗೆ ಹೀಗೆ ಹೇಳಬೇಕು: ‘ನಿಮ್ಮ ಪೂರ್ವಿಕರು ನನ್ನ ಉಪದೇಶದಂತೆ ನಡೆಯುವದನ್ನು ಬಿಟ್ಟುಬಿಟ್ಟರು’ ಎಂದು ದೇವರು ಹೇಳುತ್ತಾನೆ. ‘ಅವರು ನನ್ನ ಅನುಸರಣೆಯನ್ನು ಬಿಟ್ಟು ಬೇರೆ ದೇವರುಗಳನ್ನು ಅನುಸರಿಸಲು ಮತ್ತು ಸೇವಿಸಲು ಪ್ರಾರಂಭಿಸಿದರು. ಅವರು ಅನ್ಯದೇವರುಗಳನ್ನು ಪೂಜಿಸಿದರು. ನಿಮ್ಮ ಪೂರ್ವಿಕರು ನನ್ನನ್ನು ತ್ಯಜಿಸಿ ನನ್ನ ಧರ್ಮವಿಧಿಗಳನ್ನು ಮೀರಿದರು.
11 ನೀನು ಅವರಿಗೆ ಹೀಗೆ ಹೇಳಬೇಕು, ‘ಯೆಹೋವನ ಮಾತನ್ನು ಕೇಳಿರಿ, ನಿಮ್ಮ ಪೂರ್ವಿಕರು ನನ್ನನ್ನು ತೊರೆದು ಅನ್ಯದೇವತೆಗಳನ್ನು ಹಿಂಬಾಲಿಸಿ, ಸೇವಿಸಿ, ಪೂಜಿಸಿ ನನ್ನನ್ನು ಬಿಟ್ಟು, ನನ್ನ ಧರ್ಮವಿಧಿಗಳನ್ನು ಮೀರಿದ್ದರಿಂದಲೂ,
11 ಆಗ ನೀನು ಅವರಿಗೆ ಹೀಗೆಂದು ಹೇಳಬೇಕು : ಸರ್ವೇಶ್ವರನ ಈ ಮಾತಿಗೆ ಕಿವಿಗೊಡಿ : ‘ನಿಮ್ಮ ಪೂರ್ವಜರು ನನ್ನನ್ನು ತೊರೆದುಬಿಟ್ಟರು. ಅನ್ಯದೇವತೆಗಳನ್ನು ಹಿಂಬಾಲಿಸಿದರು. ಅವುಗಳಿಗೆ ಸೇವೆಸಲ್ಲಿಸಿ ಪೂಜಿಸಿದರು. ನನ್ನನ್ನು ಬಿಟ್ಟುದಲ್ಲದೆ ನನ್ನ ಧರ್ಮವಿಧಿಗಳನ್ನು ಮೀರಿದರು.
11 ನೀನು ಅವರಿಗೆ ಹೀಗೆ ಹೇಳಬೇಕು - ಯೆಹೋವನ ಮಾತನ್ನು ಕೇಳಿರಿ, ನಿಮ್ಮ ಪಿತೃಗಳು ನನ್ನನ್ನು ತೊರೆದು ಅನ್ಯದೇವತೆಗಳನ್ನು ಹಿಂಬಾಲಿಸಿ ಸೇವಿಸಿ ಪೂಜಿಸಿ ನನ್ನನ್ನು ಬಿಟ್ಟು ನನ್ನ ಧರ್ಮವಿಧಿಗಳನ್ನು ಮೀರಿದ್ದರಿಂದಲೂ
11 ‘ನಿಮ್ಮ ಪಿತೃಗಳು ನನ್ನನ್ನು ಬಿಟ್ಟುಬಿಟ್ಟದ್ದರಿಂದಲೇ,’ ಎಂದು ಯೆಹೋವ ದೇವರು ಹೇಳುತ್ತಾರೆ. ‘ಅವರು ಬೇರೆ ದೇವರುಗಳನ್ನು ಹಿಂಬಾಲಿಸಿ, ಅವುಗಳನ್ನು ಸೇವಿಸಿ, ಅವುಗಳನ್ನು ಆರಾಧಿಸಿ, ನನ್ನನ್ನು ತೊರೆದುಬಿಟ್ಟು, ನನ್ನ ನಿಯಮವನ್ನು ಕೈಗೊಳ್ಳಲಿಲ್ಲ.
ಮೊದಲು, ನಂಬಿಕೆಯಿಲ್ಲದ ಜನರು ಮಾಡುವಂತಹ ಕಾರ್ಯಗಳನ್ನು ಮಾಡುತ್ತಾ ಬಹಳ ಕಾಲವನ್ನು ವ್ಯರ್ಥಗೊಳಿಸಿ ಬಿಟ್ಟಿರುವಿರಿ. ನೀವು ಲೈಂಗಿಕ ಪಾಪಗಳನ್ನು ಮಾಡುತ್ತಿದ್ದಿರಿ; ಇಷ್ಟವಾದ ಕೆಟ್ಟಕಾರ್ಯಗಳನ್ನು ಮಾಡುತ್ತಿದ್ದಿರಿ; ಕುಡುಕರಾಗಿದ್ದಿರಿ, ಕ್ರೂರಿಗಳಾಗಿದ್ದಿರಿ; ಅಸಹ್ಯಕರವಾದ ನಿರರ್ಥಕ ಗೋಷ್ಠಿಗಳನ್ನು ಮತ್ತು ಮದ್ಯಪಾನಗೋಷ್ಠಿಗಳನ್ನು ನಡೆಸುತ್ತಿದ್ದಿರಿ; ವಿಗ್ರಹಾರಾಧನೆ ಮಾಡುತ್ತಿದ್ದಿರಿ.
ಆಮೇಲೆ ದೇವರು ಹೇಳಿದ್ದೇನೆಂದರೆ: “ಆದರೆ ಈಗ ಅವರ ಹೃದಯವು ಆ ಹೊಲಸು ವಿಗ್ರಹಗಳಿಗೆ ಸೇರಿದ್ದಾಗಿದೆ. ಅವರು ಮಾಡಿದ ದುಷ್ಟತನಕ್ಕೆ ನಾನು ಅವರನ್ನು ಶಿಕ್ಷಿಸಲೇಬೇಕಾಗಿದೆ.” ನನ್ನ ಒಡೆಯನಾದ ಯೆಹೋವನು ಈ ಸಂಗತಿಗಳನ್ನು ತಿಳಿಸಿದನು.
ಜೆರುಸಲೇಮಿನ ಜನರು ಸೂರ್ಯನನ್ನು, ಚಂದ್ರನನ್ನು, ನಕ್ಷತ್ರಗಣಗಳನ್ನು ಪ್ರೀತಿಸಿ, ಅನುಸರಿಸಿ, ವಿಚಾರಿಸಿ, ಪೂಜಿಸಿದ್ದರಿಂದ ಅವರ ಎಲುಬುಗಳನ್ನು ಅವುಗಳ ಕೆಳಗೆ ಭೂಮಿಯ ಮೇಲೆ ಹರಡುವರು. ಯಾರೊಬ್ಬರೂ ಆ ಎಲುಬುಗಳನ್ನು ಪುನಃ ಒಂದೆಡೆ ಸೇರಿಸಿ ಹೂಳುವುದಿಲ್ಲ. ಆ ಎಲುಬುಗಳು ಭೂಮಿಯ ಮೇಲೆ ಎಸೆದ ಸಗಣಿಯಂತಾಗುವವು.
‘ಇದು ಏಕೆ ಸಂಭವಿಸಿತೆಂದರೆ, ಅವರು ತಮ್ಮ ದೇವರಾದ ಯೆಹೋವನನ್ನು ತ್ಯಜಿಸಿದರು. ಆತನು ಅವರ ಪೂರ್ವಿಕರನ್ನು ಈಜಿಪ್ಟಿನಿಂದ ಬರಮಾಡಿದನು. ಆದರೆ ಅವರು ಅನ್ಯದೇವರುಗಳನ್ನು ಅನುಸರಿಸಲು ತೀರ್ಮಾನಿಸಿದರು. ಅವರು ಆ ದೇವರುಗಳ ಪೂಜೆಯನ್ನೂ ಸೇವೆಯನ್ನೂ ಮಾಡಲಾರಂಭಿಸಿದರು. ಆದಕಾರಣವೇ ಈ ಕೆಟ್ಟಕಾರ್ಯಗಳೆಲ್ಲಾ ಅವರಿಗೆ ಸಂಭವಿಸುವಂತೆ ಯೆಹೋವನು ಮಾಡಿದನು’ ಎಂದು ಅನ್ಯಜನರು ಉತ್ತರಿಸುವರು.”
ಯೆಹೂದದ ಜನರು ತಮ್ಮದೇ ಆದ ರೀತಿಯಲ್ಲಿ ಜೀವಿಸಿದರು. ಅವರು ಹಟಮಾರಿಗಳಾಗಿದ್ದರು. ಅವರು ಸುಳ್ಳುದೇವರಾದ ಬಾಳನನ್ನು ಅನುಸರಿಸಿದರು. ಅವರ ಪೂರ್ವಿಕರು ಸುಳ್ಳುದೇವರುಗಳ ಸೇವೆ ಮಾಡುವದನ್ನು ಅವರಿಗೆ ಕಲಿಸಿದರು.”
“‘ಯೆಹೋವನು ಎಲ್ಲಿ?’ ಎಂದು ಯಾಜಕರು ಕೇಳಲಿಲ್ಲ. ಧರ್ಮಶಾಸ್ತ್ರವನ್ನು ಬಲ್ಲವರು ನನ್ನನ್ನು ತಿಳಿಯಬಯಸಲಿಲ್ಲ. ಇಸ್ರೇಲರ ಜನನಾಯಕರು ನನ್ನ ವಿರೋಧಿಗಳಾದರು. ಪ್ರವಾದಿಗಳು ಸುಳ್ಳುದೇವರಾದ ಬಾಳನ ಹೆಸರಿನಿಂದ ಭವಿಷ್ಯವಾಣಿಯನ್ನು ನುಡಿದರು. ಅವರು ನಿಷ್ಪ್ರಯೋಜಕವಾದ ವಿಗ್ರಹಗಳನ್ನು ಪೂಜಿಸಿದರು.”
ಆಗ ಜನರು, ‘ಯಾಕೆಂದರೆ ಇಸ್ರೇಲರು ತಮ್ಮ ಪೂರ್ವಿಕರ ದೇವರಾದ ಯೆಹೋವನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ. ಆತನು ಅವರನ್ನು ಈಜಿಪ್ಟಿನಿಂದ ಬಿಡಿಸಿ ಹೊರತಂದನು. ಆದರೆ ಅವರು ಬೇರೆ ದೇವರುಗಳನ್ನು ಪೂಜಿಸಿ ಅವುಗಳ ಸೇವೆಮಾಡಿದರು. ಆದ್ದರಿಂದಲೇ ಭಯಂಕರವಾದ ಈ ಸಂಕಟಗಳನ್ನೆಲ್ಲ ದೇವರು ಇಸ್ರೇಲರಿಗೆ ಬರಮಾಡಿದನು’ ಎಂದು ಹೇಳುವರು” ಅಂದನು.
ಯೆಹೋವನು ಹೇಳುವುದೇನೆಂದರೆ, “ಯೆಹೂದ ಜನರ ಅನೇಕ ಅಪರಾಧಗಳಿಗಾಗಿ ಅವರನ್ನು ಖಂಡಿತವಾಗಿಯೂ ದಂಡಿಸುವೆನು. ಯಾಕೆಂದರೆ ಅವರು ನನ್ನ ಆಜ್ಞೆಗಳನ್ನು ಅನುಸರಿಸಲಿಲ್ಲ. ನನ್ನ ಕಟ್ಟಳೆಗಳಿಗೆ ವಿಧೇಯರಾಗಲಿಲ್ಲ. ಅವರ ಪೂರ್ವಿಕರು ಸುಳ್ಳನ್ನು ನಂಬಿದರು. ಆ ಸುಳ್ಳುಗಳಿಂದ ಅವರು ನನ್ನನ್ನು ಹಿಂಬಾಲಿಸಲಿಲ್ಲ.
ನೀವು ನನ್ನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ. ನಿಮ್ಮ ಪೂರ್ವಿಕರು ನನ್ನನ್ನು ಅನುಸರಿಸುವದನ್ನು ನಿಲ್ಲಿಸಿಬಿಟ್ಟಿದ್ದರು. ನೀವು ಹಿಂತಿರುಗಿ ನನ್ನ ಬಳಿಗೆ ಬಂದರೆ ನಾನು ನಿಮ್ಮ ಬಳಿಗೆ ಬರುವೆನು.” ಇದು ಸರ್ವಶಕ್ತನಾದ ಯೆಹೋವನ ನುಡಿ. “ನಾವು ಹೇಗೆ ಹಿಂತಿರುಗಿ ಬರಬಹುದು?” ಎಂದು ನೀವು ಕೇಳುತ್ತೀರೋ?
“ಇಂಥ ಕೇಡು ನನಗೆ ಏಕೆ ಉಂಟಾಯಿತು?” ಎಂದು ನಿನ್ನನ್ನು ನೀನೇ ಕೇಳಿಕೊಳ್ಳಬಹುದು. ನೀನು ಮಾಡಿದ ಅನೇಕ ಪಾಪಗಳ ಫಲದಿಂದಲೇ ಆಯಿತು. ನಿನ್ನ ಪಾಪಗಳ ಫಲವಾಗಿ ನಿನ್ನ ಲಂಗವನ್ನು ಹರಿಯಲಾಯಿತು. ನಿನ್ನ ಪಾದರಕ್ಷೆಯನ್ನು ಕಿತ್ತುಕೊಳ್ಳಲಾಯಿತು. ನಿನ್ನನ್ನು ಕಂಗೆಡಿಸುವದಕ್ಕಾಗಿ ಅವರು ಹೀಗೆ ಮಾಡಿದರು.
ಅಲ್ಲಿ ವಾಸಿಸುವ ಜನರು ದುಷ್ಕೃತ್ಯಗಳನ್ನು ಮಾಡಿದ್ದರಿಂದ ಸ್ಥಳಗಳನ್ನು ನಾಶಮಾಡಲಾಯಿತು. ಆ ಜನರು ಬೇರೆ ದೇವರುಗಳಿಗೆ ಬಲಿಯನ್ನು ಅರ್ಪಿಸಿದ್ದಾರೆ. ಆದ್ದರಿಂದ ನನಗೆ ಕೋಪ ಬಂದಿದೆ. ಹಿಂದೆ ನಿಮ್ಮ ಜನರು ಮತ್ತು ನಿಮ್ಮ ಪೂರ್ವಿಕರು ಆ ದೇವರುಗಳನ್ನು ಪೂಜಿಸಿರಲಿಲ್ಲ.