ಯೆರೆಮೀಯ 14:10 - ಪರಿಶುದ್ದ ಬೈಬಲ್10 ಯೆಹೂದದ ಜನರ ಬಗ್ಗೆ ಯೆಹೋವನು ಹೀಗೆ ಹೇಳುತ್ತಾನೆ: “ಯೆಹೂದದ ಜನರು ನನ್ನಿಂದ ದೂರವಾಗಲು ಮನಃಪೂರ್ವಕವಾಗಿ ಇಚ್ಛಿಸುತ್ತಾರೆ. ಅವರು ಮೊದಲಿಂದಲೂ ಹೀಗೆ ಮಾಡುತ್ತಲೇ ಇದ್ದಾರೆ. ಆದ್ದರಿಂದ ಈಗ ಯೆಹೋವನು ಅವರನ್ನು ಸ್ವಿಕರಿಸುವದಿಲ್ಲ. ಆತನು ಅವರ ದುಷ್ಕೃತ್ಯಗಳನ್ನು ಜ್ಞಾಪಕಕ್ಕೆ ತಂದುಕೊಂಡು ಅವರ ಪಾಪಗಳಿಗಾಗಿ ಅವರನ್ನು ದಂಡಿಸುತ್ತಾನೆ.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ಯೆಹೋವನು ಈ ಜನರನ್ನು ಕುರಿತು, “ಇವರು ಪ್ರಯಾಣಿಕನ ಹಾಗೆ ಅಲೆಯುವುದಕ್ಕೆ ಇಷ್ಟಪಟ್ಟಿದ್ದಾರೆ, ಕಾಲನ್ನು ಹಿಂದೆಗೆಯಲಿಲ್ಲ. ಆದಕಾರಣ ಯೆಹೋವನಾದ ನಾನು ಇವರನ್ನು ಕಟಾಕ್ಷಿಸೆನು; ಈಗಲೇ ಇವರ ಅಪರಾಧವನ್ನು ಮನಸ್ಸಿಗೆ ತಂದುಕೊಂಡು ಇವರ ಪಾಪಗಳಿಗೆ ದಂಡನೆಯನ್ನು ವಿಧಿಸುವೆನು” ಎಂದು ಹೇಳಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ಈ ಜನರನ್ನು ಕುರಿತು ಸರ್ವೇಶ್ವರ ನನಗೆ ಹೇಳಿದ ಮಾತುಗಳು : “ಇವರು ಅಲೆದಾಡಲು ಇಷ್ಟಪಡುವ ಜನರು. ತಮ್ಮ ಕಾಲಿನ ಮೇಲೆ ಹತೋಟಿಯಿಲ್ಲದವರು. ಆದಕಾರಣ ಸರ್ವೇಶ್ವರನಾದ ನಾನು ಇವರನ್ನು ಕರುಣೆಯಿಂದ ನೋಡುವುದಿಲ್ಲ. ಇದೀಗಲೆ ಇವರ ಅಪರಾಧಗಳನ್ನು ನೆನಪಿಗೆ ತಂದುಕೊಂಡು ಇವರ ಪಾಪಗಳಿಗೆ ದಂಡನೆಯನ್ನು ವಿಧಿಸುವೆನು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ಯೆಹೋವನು ಈ ಜನರನ್ನು ಕುರಿತು - ಇವರು [ನನ್ನನ್ನು ಪ್ರಯಾಣಿಕನು ಎಂದ] ಹಾಗೆಯೇ ಅಲೆಯುವದಕ್ಕೆ ಇಷ್ಟಪಟ್ಟಿದ್ದಾರೆ, ಕಾಲನ್ನು ಹಿಂದೆಗೆಯಲಿಲ್ಲ; ಆದಕಾರಣ ಯೆಹೋವನಾದ ನಾನು ಇವರನ್ನು ಕಟಾಕ್ಷಿಸೆನು; ಈಗಲೇ ಇವರ ಅಪರಾಧವನ್ನು ಮನಸ್ಸಿಗೆ ತಂದುಕೊಂಡು ಇವರ ಪಾಪಗಳಿಗೆ ದಂಡನೆಯನ್ನು ವಿಧಿಸುವೆನು ಎಂದು ಹೇಳಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ಯೆಹೋವ ದೇವರು ಈ ಜನರಿಗೆ ಹೀಗೆ ಹೇಳುತ್ತಾರೆ: “ಹೀಗೆ ತಿರುಗಾಡುವುದಕ್ಕೆ ಅವರು ಇಷ್ಟಪಡುತ್ತಾರೆ. ತಮ್ಮ ಕಾಲುಗಳನ್ನು ಹಿಂದೆಗೆಯುವುದಿಲ್ಲ. ಆದ್ದರಿಂದ ಯೆಹೋವ ದೇವರು ಅವರನ್ನು ಅಂಗೀಕರಿಸುವುದಿಲ್ಲ. ಈಗಲೇ ಅವರ ಅಕ್ರಮವನ್ನು ಜ್ಞಾಪಕಮಾಡಿಕೊಳ್ಳುವೆನು. ಅವರ ಪಾಪಗಳಿಗಾಗಿ ಅವರನ್ನು ದಂಡಿಸುವೆನು.” ಅಧ್ಯಾಯವನ್ನು ನೋಡಿ |