ಯಾಜಕಕಾಂಡ 7:36 - ಪರಿಶುದ್ದ ಬೈಬಲ್36 ಯೆಹೋವನು ಯಾಜಕರನ್ನು ಅಭಿಷೇಕಿಸಿದ ಸಮಯದಲ್ಲಿ ಆತನು ಯಾಜಕರಿಗೆ ಆ ಭಾಗಗಳನ್ನು ಕೊಡಬೇಕೆಂಬುದಾಗಿ ಇಸ್ರೇಲರಿಗೆ ಆಜ್ಞಾಪಿಸಿದನು. ಜನರು ಯಾಜಕರಿಗೆ ಆ ಭಾಗಗಳನ್ನು ಎಂದೆಂದಿಗೂ ಕೊಡಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201936 ಇಸ್ರಾಯೇಲರು ಇವುಗಳನ್ನು ಯಾಜಕರಿಗೆ ಸಲ್ಲಿಸಬೇಕೆಂದು ಯೆಹೋವನು ಮೋಶೆಯ ಮುಖಾಂತರ ಕೈಯಿಂದ ಅವರನ್ನು ಪ್ರತಿಷ್ಠಿಸಿ ಅಭಿಷೇಕಿಸಿದ ದಿನದಲ್ಲೇ ನೇಮಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)36 ಇಸ್ರಯೇಲರು ಇವುಗಳನ್ನು ಯಾಜಕರಿಗೆ ಸಲ್ಲಿಸಬೇಕೆಂದು ಸರ್ವೇಶ್ವರ ಅವರನ್ನು ಮೋಶೆಯ ಮುಖಾಂತರ ಪ್ರತಿಷ್ಠಿಸಿ ಅಭಿಷೇಕಿಸಿದ ದಿನದಲ್ಲೇ ವಿಧಿಸಿದರು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)36 ಇಸ್ರಾಯೇಲ್ಯರು ಇವುಗಳನ್ನು ಯಾಜಕರಿಗೆ ಸಲ್ಲಿಸಬೇಕೆಂದು ಯೆಹೋವನು [ಮೋಶೆಯ ಕೈಯಿಂದ] ಅವರನ್ನು ಪ್ರತಿಷ್ಠಿಸಿ ಅಭಿಷೇಕಿಸಿದ ದಿನದಲ್ಲಿ ಅಪ್ಪಣೆಮಾಡಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ36 ಅವರನ್ನು ಅಭಿಷೇಕಿಸಿದ ದಿನದಲ್ಲಿ ಇದನ್ನು ಯೆಹೋವ ದೇವರು ಇಸ್ರಾಯೇಲರಿಗೆ ಅವರ ಎಲ್ಲಾ ಸಂತತಿಗಳಲ್ಲಿ ಒಂದು ನಿರಂತರವಾದ ಕಟ್ಟಳೆಯಾಗಿರುವಂತೆ ಅವರಿಗೆ ಆಜ್ಞಾಪಿಸಿದ್ದಾರೆ. ಅಧ್ಯಾಯವನ್ನು ನೋಡಿ |
ಆರೋನ ಮತ್ತು ಅವನ ಗಂಡುಮಕ್ಕಳಿಗೆ ದೀಪವನ್ನು ನೋಡಿಕೊಳ್ಳುವ ಕೆಲಸವಿರುವುದು. ಅವರು ದೇವದರ್ಶನಗುಡಾರದ ಮೊದಲಿನ ಕೋಣೆಯೊಳಗೆ ಹೋಗುವರು. ಇದು ಎರಡು ಕೋಣೆಗಳನ್ನು ಪ್ರತ್ಯೇಕಿಸುವ ಪರದೆಯ ಹಿಂದೆ ಒಪ್ಪಂದವಿರುವ ಕೋಣೆಯ ಹೊರಗೆ ಇರುತ್ತದೆ. ಈ ಸ್ಥಳದಲ್ಲಿ ದೀಪವು ಯೆಹೋವನ ಮುಂದೆ ಸಾಯಂಕಾಲದಿಂದ ಮುಂಜಾನೆಯವರೆಗೆ ಯಾವಾಗಲೂ ಉರಿಯುತ್ತಿರುವಂತೆ ಅವರು ನೋಡಿಕೊಳ್ಳುವರು. ಇಸ್ರೇಲರು ಮತ್ತು ಅವರ ಸಂತತಿಯವರು ಈ ನಿಯಮಕ್ಕೆ ಶಾಶ್ವತವಾಗಿ ವಿಧೇಯರಾಗಬೇಕು” ಎಂದು ಹೇಳಿದನು.