ಯಾಜಕಕಾಂಡ 6:14 - ಪರಿಶುದ್ದ ಬೈಬಲ್14 “ಇದು ಧಾನ್ಯಸಮರ್ಪಣೆಯ ನಿಯಮವಾಗಿದೆ: ಆರೋನನ ಪುತ್ರರು ಅದನ್ನು ಸಮರ್ಪಿಸಲು ಯಜ್ಞವೇದಿಕೆಯ ಮುಂಭಾಗದಲ್ಲಿ ಯೆಹೋವನ ಬಳಿಗೆ ತರಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 “‘ಧಾನ್ಯನೈವೇದ್ಯ ವಿಷಯವಾದ ನಿಯಮಗಳು: ಆರೋನನ ವಂಶದವರು ನೈವೇದ್ಯದ್ರವ್ಯವನ್ನು ಯೆಹೋವನ ಸನ್ನಿಧಿಯಲ್ಲಿ ಯಜ್ಞವೇದಿಯ ಎದುರಾಗಿಯೇ ಸಮರ್ಪಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 “ಧಾನ್ಯನೈವೇದ್ಯದ ಬಗ್ಗೆ ನಿಯಮಗಳಿವು: ಆರೋನನ ವಂಶಜರು ನೈವೇದ್ಯ ದ್ರವ್ಯವನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ಬಲಿಪೀಠದ ಎದುರಿಗೇ ಸಮರ್ಪಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ಧಾನ್ಯನೈವೇದ್ಯ ವಿಷಯವಾದ ನಿಯಮಗಳು. ಆರೋನನ ವಂಶದವರು ನೈವೇದ್ಯದ್ರವ್ಯವನ್ನು ಯೆಹೋವನ ಸನ್ನಿಧಿಯಲ್ಲಿ ಯಜ್ಞವೇದಿಯ ಎದುರಾಗಿಯೇ ಸಮರ್ಪಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 “ ‘ಧಾನ್ಯ ಸಮರ್ಪಣೆಯ ನಿಯಮವು ಇದೇ. ಆರೋನನ ಪುತ್ರರು ಬಲಿಪೀಠದ ಮುಂದೆ ಯೆಹೋವ ದೇವರ ಸನ್ನಿಧಿಯಲ್ಲಿ ಅದನ್ನು ಸಮರ್ಪಿಸಬೇಕು. ಅಧ್ಯಾಯವನ್ನು ನೋಡಿ |
ಆರೋನನಿಗೆ ಇನ್ನೂ ಜೀವಂತವಾಗಿದ್ದ ಎಲ್ಲಾಜಾರ್ ಮತ್ತು ಈತಾಮಾರ್ ಎಂಬ ಇಬ್ಬರು ಪುತ್ರರು ಇದ್ದರು. ಮೋಶೆಯು ಆರೋನನಿಗೆ ಮತ್ತು ಅವನ ಇಬ್ಬರು ಗಂಡುಮಕ್ಕಳಿಗೆ, “ಯಜ್ಞವೇದಿಕೆಯ ಮೇಲೆ ಅರ್ಪಿಸಿದ ಯಜ್ಞಗಳಲ್ಲಿಯೂ ಧಾನ್ಯನೈವೇದ್ಯದಲ್ಲಿಯೂ ಉಳಿದ ಭಾಗವನ್ನು ತೆಗೆದುಕೊಂಡು ನೀವು ತಿನ್ನಬೇಕು. ಆದರೆ ನೀವು ಅದಕ್ಕೆ ಹುಳಿಯನ್ನು ಸೇರಿಸದೆ ಯಜ್ಞವೇದಿಕೆಯ ಸಮೀಪದಲ್ಲಿಯೇ ತಿನ್ನಬೇಕು. ಯಾಕೆಂದರೆ ಆ ಸಮರ್ಪಣೆಯು ಬಹಳ ಪವಿತ್ರವಾಗಿದೆ.