ಯಾಜಕಕಾಂಡ 27:3 - ಪರಿಶುದ್ದ ಬೈಬಲ್3 ಇಪ್ಪತ್ತರಿಂದ ಅರವತ್ತು ವರ್ಷದ ಒಳಗಿರುವ ಮನುಷ್ಯನ ಬೆಲೆ ಐವತ್ತು ಶೆಕೆಲ್ ಬೆಳ್ಳಿಯಾಗಿದೆ. (ಬೆಳ್ಳಿಯನ್ನು ಅಳೆಯಲು ಅಧಿಕೃತ ಅಳತೆಯನ್ನು ಉಪಯೋಗಿಸಬೇಕು.) ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಇಪ್ಪತ್ತು ವರ್ಷದಿಂದ ಅರುವತ್ತು ವರ್ಷದ ವರೆಗಿನ ವಯಸ್ಸುಳ್ಳ ಪುರುಷನಿಗೋಸ್ಕರ, ದೇವಾಲಯದ ಶೆಕೆಲ್ ಗೆ ಸರಿಯಾಗಿ ಐವತ್ತು ಶೆಕೆಲ್ ಬೆಳ್ಳಿಯನ್ನು ಸಮರ್ಪಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಇಪ್ಪತ್ತರಿಂದ ಅರವತ್ತು ವರ್ಷ ವಯಸ್ಸುಳ್ಳ ಪುರುಷನ ಪರವಾಗಿ ಐವತ್ತು ಬೆಳ್ಳಿನಾಣ್ಯಗಳನ್ನು ಹಾಗು ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಇಪ್ಪತ್ತು ವರುಷದಿಂದ ಅರುವತ್ತು ವರುಷದ ಪರ್ಯಂತರ ವಯಸ್ಸುಳ್ಳ ಪುರುಷನಿಗೋಸ್ಕರ ಐವತ್ತು ರೂಪಾಯಿಗಳನ್ನೂ ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ನೀನು ನೇಮಿಸಬೇಕಾದ ಕ್ರಯವು ಯಾವುದೆಂದರೆ, ಇಪ್ಪತ್ತರಿಂದ ಅರವತ್ತು ವಯಸ್ಸುಳ್ಳ ಪುರುಷನಿಗೆ ನೀನು ಪವಿತ್ರ ಸ್ಥಳದ ಶೆಕೆಲ್ ಅನುಸಾರವಾಗಿ ನೇಮಿಸುವ ಕ್ರಯವು ಐವತ್ತು ಶೆಕೆಲ್ ಆಗಿರಬೇಕು. ಅಧ್ಯಾಯವನ್ನು ನೋಡಿ |
ಯೆಹೋವಾಷನು ಯಾಜಕರಿಗೆ, “ದೇವಾಲಯದಲ್ಲಿ ಬಹಳ ಹಣವಿದೆ. ಜನರು ಅನೇಕ ವಸ್ತುಗಳನ್ನು ಆಲಯಕ್ಕೆ ಕೊಟ್ಟಿದ್ದಾರೆ. ಜನಗಣತಿಯಲ್ಲಿ ಲೆಕ್ಕಿಸಲ್ಪಟ್ಟ ಜನರು ಆಲಯದ ತೆರಿಗೆಯನ್ನು ಕೊಟ್ಟಿದ್ದಾರೆ. ಜನರು ತಮ್ಮ ಸ್ವ ಇಚ್ಛೆಯಿಂದ ಹಣವನ್ನು ಕೊಟ್ಟಿದ್ದಾರೆ. ಯಾಜಕರಾದ ನೀವು ಆ ಹಣವನ್ನು ತೆಗೆದುಕೊಂಡು, ಯೆಹೋವನ ಆಲಯವನ್ನು ಸರಿಪಡಿಸಿ. ಪ್ರತಿಯೊಬ್ಬ ಯಾಜಕನೂ ತಾನು ಜನರ ಸೇವೆಯಿಂದ ಪಡೆದ ಹಣವನ್ನು ಉಪಯೋಗಿಸಲೇಬೇಕು. ಅವನು ಆ ಹಣವನ್ನು ದೇವಾಲಯದ ಶಿಥಿಲತೆಯನ್ನು ಸರಿಪಡಿಸಲು ಉಪಯೋಗಿಸಲೇಬೇಕು” ಎಂದು ಹೇಳಿದನು.