ಯಾಜಕಕಾಂಡ 27:26 - ಪರಿಶುದ್ದ ಬೈಬಲ್26 “ಜನರು ಯೆಹೋವನಿಗೆ ವಿಶೇಷ ಕಾಣಿಕೆಯಾಗಿ ದನಗಳನ್ನು ಮತ್ತು ಕುರಿಗಳನ್ನು ಕೊಡಬಹುದು. ಆದರೆ ಪಶುವು ಚೊಚ್ಚಲಾದದ್ದಾಗಿದ್ದರೆ, ಅದು ಈಗಾಗಲೇ ಯೆಹೋವನದ್ದಾಗಿರುತ್ತದೆ. ಆದ್ದರಿಂದ ಜನರು ಅಂಥ ಪಶುಗಳನ್ನು ಯೆಹೋವನಿಗೆ ವಿಶೇಷ ಕಾಣಿಕೆಯಾಗಿ ಕೊಡಲಾಗುವುದಿಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201926 “‘ಶುದ್ಧ ಪಶುವಿನಲ್ಲಿ ಚೊಚ್ಚಲಾಗಿ ಹುಟ್ಟಿದ್ದು ಯೆಹೋವನದಾಗಿರುವುದರಿಂದ ಅದನ್ನು ಯಾರೂ ಹರಕೆಯಾಗಿ ಕೊಡಬಾರದು; ಹೋರಿಯಾಗಿದ್ದರೂ, ಆಡು ಅಥವಾ ಕುರಿಯಾಗಿದ್ದರೂ ಅದು ಯೆಹೋವನ ಸೊತ್ತೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)26 “ಶುದ್ಧಪ್ರಾಣಿಯಲ್ಲಿ ಚೊಚ್ಚಲಾಗಿ ಹುಟ್ಟಿದ್ದು ಸರ್ವೇಶ್ವರನಿಗೆ ಸೇರಿದ್ದು. ಆದ್ದರಿಂದ ಅದನ್ನು ಯಾರೂ ಹರಕೆಯಾಗಿ ಕೊಡಕೂಡದು. ಚೊಚ್ಚಲು ಮರಿ ಹೋರಿಯೇ ಆಗಿರಲಿ, ಆಡುಕುರಿಯೇ ಆಗಿರಲಿ. ಅದು ಸರ್ವೇಶ್ವರನ ಸೊತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)26 [ಶುದ್ಧ] ಪಶುವಿನಲ್ಲಿ ಚೊಚ್ಚಲಾಗಿ ಹುಟ್ಟಿದ್ದು ಯೆಹೋವನದಾಗಿರುವದರಿಂದ ಅದನ್ನು ಯಾರೂ ಹರಕೆಯಾಗಿ ಕೊಡಕೂಡದು; ಹೋರಿಯಾಗಿದ್ದರೂ ಆಡುಕುರಿಯಾಗಿದ್ದರೂ ಅದು ಯೆಹೋವನ ಸೊತ್ತೇ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ26 “ ‘ಪಶುಗಳ ಚೊಚ್ಚಲ ಮರಿ ಯೆಹೋವ ದೇವರದಾದ್ದರಿಂದ ಅದನ್ನೂ ಹರಕೆಯಾಗಿ ಕೊಡಬಾರದು. ಅದು ಎತ್ತಾಗಲಿ ಇಲ್ಲವೆ ಕುರಿಯಾಗಲಿ, ಅದು ಯೆಹೋವ ದೇವರದೇ. ಅಧ್ಯಾಯವನ್ನು ನೋಡಿ |
ಜನರು ಚೊಚ್ಚಲಾದ ಪಶುಗಳನ್ನು ಯೆಹೋವನಿಗೆ ಕೊಡಬೇಕು. ಆದರೆ ಚೊಚ್ಚಲಾದ ಪಶುವು ಅಶುದ್ಧವಾದ ಪಶುವಾಗಿದ್ದರೆ, ಆಗ ಹರಕೆ ಮಾಡಿದವನು ಅದನ್ನು ಮರಳಿ ಕೊಂಡುಕೊಳ್ಳಬೇಕು. ಯಾಜಕನು ಅದರ ಬೆಲೆಯನ್ನು ನಿರ್ಣಯಿಸುವನು ಮತ್ತು ಹರಕೆ ಮಾಡಿದವನು ಆ ಬೆಲೆಗೆ ಐದನೆಯ ಒಂದಂಶವನ್ನು ಸೇರಿಸಬೇಕು. ಅವನು ಅದನ್ನು ಮರಳಿ ಕೊಂಡುಕೊಳ್ಳದಿದ್ದರೆ, ಆಗ ಯಾಜಕನು ತಾನು ನಿರ್ಣಯಿಸಿದ ಬೆಲೆಗೆ ಆ ಪಶುವನ್ನು ಮಾರಬೇಕು.
ನೀವು ಈಜಿಪ್ಟಿನಲ್ಲಿದ್ದಾಗ ನಾನು ಈಜಿಪ್ಟಿನವರ ಎಲ್ಲಾ ಚೊಚ್ಚಲು ಮಕ್ಕಳನ್ನು ಕೊಂದೆನು. ಆ ಕಾಲದಲ್ಲಿ ನಾನು ಇಸ್ರೇಲರ ಎಲ್ಲಾ ಚೊಚ್ಚಲು ಮಕ್ಕಳನ್ನು ನನ್ನವರನ್ನಾಗಿ ತೆಗೆದುಕೊಂಡೆನು. ಎಲ್ಲಾ ಚೊಚ್ಚಲು ಗಂಡುಮಕ್ಕಳು ಮತ್ತು ಚೊಚ್ಚಲು ಪಶುಗಳು ನನ್ನದಾಗಿದ್ದವು. ಆದರೆ ಈಗ ನಿಮ್ಮ ಎಲ್ಲಾ ಚೊಚ್ಚಲು ಗಂಡುಮಕ್ಕಳನ್ನು ನಿಮಗೇ ಹಿಂದಕ್ಕೆ ಕೊಡುತ್ತಿದ್ದೇನೆ ಮತ್ತು ಲೇವಿಯರನ್ನು ನನ್ನವರನ್ನಾಗಿ ಮಾಡುತ್ತಿದ್ದೇನೆ. ನಾನೇ ಯೆಹೋವನು!”