ಯಾಜಕಕಾಂಡ 27:18 - ಪರಿಶುದ್ದ ಬೈಬಲ್18 ಆದರೆ ಒಬ್ಬನು ಜ್ಯೂಬಿಲಿಯ ನಂತರ ತನ್ನ ಹೊಲವನ್ನು ಕೊಟ್ಟರೆ, ಯಾಜಕನು ಅದರ ಸರಿಯಾದ ಬೆಲೆಯನ್ನು ಲೆಕ್ಕಹಾಕಬೇಕು. ಅವನು ಮುಂದಿನ ಜ್ಯೂಬಿಲಿ ಸಂವತ್ಸರಕ್ಕೆ ಇರುವ ವರ್ಷಗಳನ್ನು ಲೆಕ್ಕಹಾಕಿ ಅದರಿಂದ ಬೆಲೆಯನ್ನು ನಿರ್ಣಯಿಸಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201918 ಜೂಬಿಲಿ ಸಂವತ್ಸರದ ತರುವಾಯ ಪ್ರತಿಷ್ಠೆ ಮಾಡಿದ ಭೂಮಿಯನ್ನು ಹರಕೆಮಾಡಿದರೆ, ಮುಂದಣ ಜೂಬಿಲಿ ಸಂವತ್ಸರಕ್ಕೆ ಕಳೆಯಬೇಕಾದ ವರ್ಷಗಳ ಸಂಖ್ಯೆಯ ಮೇರೆಗೆ ಅದರ ಬೆಲೆಯನ್ನು ಕಡಿಮೆಮಾಡಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)18 ಜೂಬಿಲಿ ಸಂವತ್ಸರದ ತರುವಾಯ ಭೂಮಿಯನ್ನು ಹರಕೆ ಮಾಡಿದರೆ, ಮುಂದಿನ ಜೂಬಿಲಿ ಸಂವತ್ಸರಕ್ಕೆ ಕಳೆಯಬೇಕಾದ ವರ್ಷಗಳ ಸಂಖ್ಯೆಯ ಮೇರೆಗೆ ಅದರ ಬೆಲೆಯನ್ನು ಕಮ್ಮಿಮಾಡಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)18 ಜೂಬಿಲಿ ಸಂವತ್ಸರದ ತರುವಾಯ ಭೂವಿುಯನ್ನು ಹರಕೆಮಾಡಿದರೆ ಮುಂದಣ ಜೂಬಿಲಿ ಸಂವತ್ಸರಕ್ಕೆ ಕಳೆಯಬೇಕಾದ ವರುಷಗಳ ಸಂಖ್ಯೆಯ ಮೇರೆಗೆ ಅದರ ಬೆಲೆಯನ್ನು ಕವ್ಮಿುಮಾಡಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ18 ಆದರೆ ಜೂಬಿಲಿ ಸಂವತ್ಸರವಾದ ಮೇಲೆ ತನ್ನ ಹೊಲವನ್ನು ಪ್ರತಿಷ್ಠೆ ಮಾಡಿದರೆ, ಜೂಬಿಲಿ ಸಂವತ್ಸರದವರೆಗೆ ಮಿಕ್ಕ ವರ್ಷಗಳ ಲೆಕ್ಕದ ಪ್ರಕಾರ ಯಾಜಕನು ಅವನಿಗೆ ಹಣವನ್ನು ನಿರ್ಧರಿಸಿ, ಕಟ್ಟಿದ ಕ್ರಯದಿಂದ ಕಳೆಯಬೇಕು. ಅಧ್ಯಾಯವನ್ನು ನೋಡಿ |