Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 27:12 - ಪರಿಶುದ್ದ ಬೈಬಲ್‌

12 ಯಾಜಕನು ಆ ಪಶುವಿಗೆ ಬೆಲೆಯನ್ನು ಗೊತ್ತುಮಾಡುವನು. ಪಶುವು ಒಳ್ಳೆಯದ್ದಾಗಿದ್ದರೂ ಕೆಟ್ಟದ್ದಾಗಿದ್ದರೂ ಯಾಜಕನು ನಿರ್ಣಯಿಸಿದ ಬೆಲೆಯೇ ಅದರ ಬೆಲೆಯಾಗಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಅದು ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ಯಾಜಕನು ನೋಡಿಕೊಂಡು ಅದರ ಬೆಲೆ ಇಷ್ಟೆಂದು ನಿರ್ಣಯಿಸಬೇಕು; ಯಾಜಕನು ನಿರ್ಣಯಿಸಿದ ಬೆಲೆಯೇ ಅಂತಿಮವಾದದ್ದು ಸ್ಥಿರವಾಗಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಅದು ಒಳ್ಳೆಯದೊ ಕೆಟ್ಟದ್ದೋ ಎಂದು ಯಾಜಕನು ನೋಡಿ ಅದರ ಬೆಲೆ ಇಷ್ಟೆಂದು ನಿರ್ಧರಿಸಬೇಕು. ಯಾಜಕನು ನಿರ್ಧರಿಸಿದ ಬೆಲೆಯೇ ಅಂತಿಮವಾದುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಅದು ಒಳ್ಳೇದೋ ಕೆಟ್ಟದ್ದೋ ಎಂದು ಯಾಜಕನು ನೋಡಿಕೊಂಡು ಅದರ ಬೆಲೆ ಇಷ್ಟೆಂದು ನಿರ್ಣಯಿಸಬೇಕು; ಯಾಜಕನು ನಿರ್ಣಯಿಸಿದ ಬೆಲೆ ಸ್ಥಿರವಾಗಿರುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಆಗ ಯಾಜಕನು ಅದು ಒಳ್ಳೆಯದೋ, ಕೆಟ್ಟದ್ದೋ ಎಂದು ಅದಕ್ಕೆ ಕ್ರಯ ಕಟ್ಟಬೇಕು. ಯಾಜಕನು ನಿರ್ಧರಿಸಿದ ಕ್ರಯವೇ ಅಂತಿಮ ಕ್ರಯವಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 27:12
4 ತಿಳಿವುಗಳ ಹೋಲಿಕೆ  

“ಯೆಹೋವನಿಗೆ ಸಮರ್ಪಿಸಕೂಡದ ಕೆಲವು ಪ್ರಾಣಿಗಳಿರುವವು. ಒಬ್ಬನು ಅಂಥ ಅಶುದ್ಧ ಪಶುಗಳಲ್ಲೊಂದನ್ನು ಯೆಹೋವನಿಗಾಗಿ ಪ್ರತಿಷ್ಠಿಸಿದರೆ, ಅದನ್ನು ಯಾಜಕನ ಬಳಿಗೆ ತರಬೇಕು.


ಹರಕೆ ಮಾಡಿದವನು ಪಶುವನ್ನು ಮರಳಿ ಕೊಂಡುಕೊಳ್ಳಬೇಕೆಂದಿದ್ದರೆ, ಅದರ ಬೆಲೆಯೊಡನೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು.


ಯಾಜಕನು ಮುಂದಿನ ಜ್ಯೂಬಿಲಿ ಸಂವತ್ಸರದವರೆಗೆ ಇರುವ ವರ್ಷಗಳನ್ನು ಲೆಕ್ಕ ಹಾಕಿ ಅದರ ಬೆಲೆಯನ್ನು ನಿಗದಿ ಮಾಡಬೇಕು. ಆಗ ಭೂಮಿಯು ಯೆಹೋವನದಾಗಿರುವುದು.


ಯೆಹೋವಾಷನು ಯಾಜಕರಿಗೆ, “ದೇವಾಲಯದಲ್ಲಿ ಬಹಳ ಹಣವಿದೆ. ಜನರು ಅನೇಕ ವಸ್ತುಗಳನ್ನು ಆಲಯಕ್ಕೆ ಕೊಟ್ಟಿದ್ದಾರೆ. ಜನಗಣತಿಯಲ್ಲಿ ಲೆಕ್ಕಿಸಲ್ಪಟ್ಟ ಜನರು ಆಲಯದ ತೆರಿಗೆಯನ್ನು ಕೊಟ್ಟಿದ್ದಾರೆ. ಜನರು ತಮ್ಮ ಸ್ವ ಇಚ್ಛೆಯಿಂದ ಹಣವನ್ನು ಕೊಟ್ಟಿದ್ದಾರೆ. ಯಾಜಕರಾದ ನೀವು ಆ ಹಣವನ್ನು ತೆಗೆದುಕೊಂಡು, ಯೆಹೋವನ ಆಲಯವನ್ನು ಸರಿಪಡಿಸಿ. ಪ್ರತಿಯೊಬ್ಬ ಯಾಜಕನೂ ತಾನು ಜನರ ಸೇವೆಯಿಂದ ಪಡೆದ ಹಣವನ್ನು ಉಪಯೋಗಿಸಲೇಬೇಕು. ಅವನು ಆ ಹಣವನ್ನು ದೇವಾಲಯದ ಶಿಥಿಲತೆಯನ್ನು ಸರಿಪಡಿಸಲು ಉಪಯೋಗಿಸಲೇಬೇಕು” ಎಂದು ಹೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು