Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 25:31 - ಪರಿಶುದ್ದ ಬೈಬಲ್‌

31 ಗೋಡೆಗಳಿಲ್ಲದ ಪಟ್ಟಣಗಳನ್ನು ಬಯಲಿನ ಹೊಲಗಳಂತೆ ಪರಿಗಣಿಸಬೇಕು. ಆದ್ದರಿಂದ ಆ ಸಣ್ಣ ಪಟ್ಟಣಗಳಲ್ಲಿ ಕಟ್ಟಿದ ಮನೆಗಳು ಜ್ಯೂಬಿಲಿ ವರ್ಷದಲ್ಲಿ ಅವುಗಳ ಮೊದಲಿನ ಯಜಮಾನನಿಗೆ ಮರುಳಿ ಹೋಗುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಪೌಳಿಗೋಡೆಯಿಲ್ಲದ ಊರುಗಳಲ್ಲಿರುವ ಮನೆಗಳು ಬಯಲಿನ ಹೊಲಗಳಂತೆ ಎಣಿಸಲ್ಪಡಬೇಕು; ಅವುಗಳನ್ನು ಬಿಡಿಸುವ ಅಧಿಕಾರವಿದ್ದು, ಜೂಬಿಲಿ ಸಂವತ್ಸರದಲ್ಲಿ ಅವು ಬಿಡುಗಡೆಯಾಗುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ಕೋಟೆಯಿಲ್ಲದ ಊರುಗಳಲ್ಲಿರುವ ಮನೆಗಳಲ್ಲಿ ಬಯಲಿನ ಹೊಲಗಳಂತೆ ಎಣಿಸಬೇಕು. ಅವುಗಳನ್ನು ಬಿಡಿಸಿಕೊಳ್ಳುವ ಹಕ್ಕು ಇರುವುದು. ಜೂಬಿಲಿ ಸಂವತ್ಸರದಲ್ಲಿ ಅವು ಬಿಡುಗಡೆಯಾಗುವುವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಪೌಳಿಗೋಡೆಯಿಲ್ಲದ ಊರುಗಳಲ್ಲಿರುವ ಮನೆಗಳು ಬೈಲಿನ ಹೊಲಗಳಂತೆ ಎಣಿಸಲ್ಪಡಬೇಕು. ಅವುಗಳನ್ನು ಬಿಡಿಸುವ ಅಧಿಕಾರವಿರುವದು; ಜೂಬಿಲಿ ಸಂವತ್ಸರದಲ್ಲಿ ಅವು ಬಿಡುಗಡೆಯಾಗುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ಆದರೆ ಸುತ್ತಲೂ ಗೋಡೆಗಳಿಲ್ಲದೆ ಹಳ್ಳಿಗಳಲ್ಲಿರುವ ಮನೆಗಳು ಬಯಲಿನ ಹೊಲಗಳಂತೆ ಎಣಿಸಬೇಕು. ಅವುಗಳನ್ನು ಬಿಡಿಸಿಕೊಳ್ಳುವ ಅಧಿಕಾರವಿರುವದು. ಜೂಬಿಲಿಯ ವರ್ಷದಲ್ಲಿ ಅವು ಬಿಡುಗಡೆ ಆಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 25:31
4 ತಿಳಿವುಗಳ ಹೋಲಿಕೆ  

ಆದರೆ ಮಾಲಿಕನು ಒಂದು ವರ್ಷ ಪೂರ್ಣಗೊಳ್ಳುವ ಮೊದಲು ಮನೆಯನ್ನು ಮರಳಿ ಕೊಂಡುಕೊಳ್ಳದಿದ್ದರೆ, ಆಗ ಪೌಳಿಗೋಡೆಯುಳ್ಳ ಪಟ್ಟಣದಲ್ಲಿರುವ ಮನೆಯು ಅದನ್ನು ಕೊಂಡುಕೊಂಡವನಿಗೂ ಅವನ ಸಂತತಿಯವರಿಗೂ ಸೇರುವುದು. ಮನೆಯು ಜ್ಯೂಬಿಲಿ ವರ್ಷದಲ್ಲಿ ಅದರ ಮೊದಲಿನ ಯಜಮಾನನಿಗೆ ಸೇರುವುದಿಲ್ಲ.


“ಆದರೆ ಲೇವಿಯರ ಪಟ್ಟಣಗಳ ಕುರಿತು ಹೇಳುವುದಾದರೆ, ಲೇವಿಯರು ತಮಗೆ ಸೇರಿದ ಪಟ್ಟಣಗಳಲ್ಲಿರುವ ತಮ್ಮ ಮನೆಗಳನ್ನು ಯಾವಾಗ ಬೇಕಾದರೂ ಹಿಂದಕ್ಕೆ ಕೊಂಡುಕೊಳ್ಳಬಹುದು.


ತಮ್ಮ ಆಸ್ತಿಗಳನ್ನು ಮಾರಿದ ಜನರು ಅಲ್ಲಿಗೆ ತಿರುಗಿ ಹೋಗುವುದಿಲ್ಲ. ಒಬ್ಬನು ಜೀವಂತವಾಗಿ ತಪ್ಪಿಸಿಕೊಂಡರೂ ತನ್ನ ಆಸ್ತಿಗೆ ಹೋಗುವುದಿಲ್ಲ. ಯಾಕೆಂದರೆ ಈ ದರ್ಶನವು ಎಲ್ಲಾ ಜನಸಮೂಹಕ್ಕಾಗಿದೆ. ಇದು ಬದಲಾಗುವುದಿಲ್ಲ; ಅವರ ಪಾಪಗಳ ದೆಸೆಯಿಂದ ಅವರಲ್ಲಿ ಒಬ್ಬನಾದರೂ ತನ್ನ ಪ್ರಾಣವನ್ನು ಕಾಪಾಡಿಕೊಳ್ಳುವುದಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು