8 ಯಾಜಕನು ಯಾವಾಗಲೂ ಪ್ರತಿ ಸಬ್ಬತ್ ದಿನದಲ್ಲಿ ರೊಟ್ಟಿಗಳನ್ನು ತಂದು ಯೆಹೋವನ ಸನ್ನಿಧಿಯಲ್ಲಿ ಕ್ರಮಪಡಿಸಬೇಕು. ಶಾಶ್ವತವಾದ ನಿಬಂಧನೆಯ ಮೇರೆಗೆ ಅವುಗಳನ್ನು ಇಸ್ರಾಯೇಲರಿಗೋಸ್ಕರ ಯೆಹೋವನಿಗೆ ಸಮರ್ಪಿಸಬೇಕು.
8 ಶಾಶ್ವತವಾದ ನಿಬಂಧನೆಯ ಮೇರೆಗೆ ಯಾಜಕನು ಯಾವಾಗಲೂ ಪ್ರತಿ ಸಬ್ಬತ್ ದಿನದಲ್ಲಿ ರೊಟ್ಟಿಗಳನ್ನು ತಂದು ಸರ್ವೇಶ್ವರನ ಸನ್ನಿಧಿಯಲ್ಲಿ ಕ್ರಮಪಡಿಸಿ ಅವುಗಳನ್ನು ಇಸ್ರಯೇಲರ ಪರವಾಗಿ ಸರ್ವೇಶ್ವರನಿಗೆ ಸಮರ್ಪಿಸಬೇಕು.
8 ಯಾಜಕನು ಯಾವಾಗಲೂ ಪ್ರತಿ ಸಬ್ಬತ್‍ದಿನದಲ್ಲಿ ರೊಟ್ಟಿಗಳನ್ನು ತಂದು ಯೆಹೋವನ ಸನ್ನಿಧಿಯಲ್ಲಿ ಕ್ರಮಪಡಿಸಬೇಕು. ಶಾಶ್ವತವಾದ ನಿಬಂಧನೆಯ ಮೇರೆಗೆ ಅವುಗಳನ್ನು ಇಸ್ರಾಯೇಲ್ಯರಿಗೋಸ್ಕರ ಯೆಹೋವನಿಗೆ ಸಮರ್ಪಿಸಬೇಕು.
ನನ್ನ ದೇವರಾದ ಯೆಹೋವನ ನಾಮದ ಘನತೆಗಾಗಿ ನಾನು ಒಂದು ದೇವಾಲಯವನ್ನು ಕಟ್ಟಲಿರುವೆನು. ಆತನ ಸನ್ನಿಧಿಯಲ್ಲಿ ನಿತ್ಯವೂ ಧೂಪವನ್ನು ಹಾಕುವೆವು; ವಿಶೇಷ ಮೇಜಿನ ಮೇಲೆ ಪವಿತ್ರವಾದ ರೊಟ್ಟಿಗಳನ್ನಿಡುವೆವು. ಪ್ರತಿ ಮುಂಜಾನೆ ಮತ್ತು ಸಾಯಂಕಾಲಗಳಲ್ಲಿ, ಸಬ್ಬತ್ ದಿನಗಳಲ್ಲಿ ಮತ್ತು ಅಮಾವಾಸ್ಯೆ ದಿನಗಳಲ್ಲಿ ಯೆಹೋವನು ಆಜ್ಞಾಪಿಸಿದ ಹಬ್ಬಗಳಲ್ಲಿ ಸರ್ವಾಂಗಹೋಮಗಳನ್ನು ಸಮರ್ಪಿಸುವೆವು. ಇಸ್ರೇಲಿನ ಜನರು ನಿತ್ಯಕಾಲಕ್ಕೂ ಇವುಗಳನ್ನು ಅನುಸರಿಸಬೇಕೆಂದು ದೇವರು ನೇಮಿಸಿರುತ್ತಾನೆ.
“ಬಳಿಕ ಅವರು ಪವಿತ್ರ ಮೇಜಿನ ಮೇಲೆ ನೀಲಿಬಟ್ಟೆಯನ್ನು ಹಾಸಬೇಕು. ಪಾನದ್ರವ್ಯಾರ್ಪಣೆಗಳಿಗಾಗಿ ತಟ್ಟೆಗಳನ್ನೂ ಚಮಚಗಳನ್ನೂ ಬಟ್ಟಲುಗಳನ್ನೂ ಹೂಜೆಗಳನ್ನೂ ವಿಶೇಷ ರೊಟ್ಟಿಯನ್ನೂ ಮೇಜಿನ ಮೇಲೆ ಇಡಬೇಕು.
ಪ್ರತಿದಿನ ದೇವಾಲಯದೊಳಗೆ ಮೇಜಿನ ಮೇಲೆ ಇಡುವ ರೊಟ್ಟಿಗಳಿಗಾಗಿಯೂ ದಿನನಿತ್ಯದ ಸರ್ವಾಂಗಹೋಮಗಳಿಗೂ ಧಾನ್ಯಸರ್ಮರ್ಪಣೆಗೂ ಈ ಹಣವನ್ನು ಉಪಯೋಗಿಸಿರಿ. ಅಮಾವಾಸ್ಯೆ, ಸಬ್ಬತ್ ಮತ್ತು ಇತರ ವಿಶೇಷ ಸಭಾಕೂಟಗಳಲ್ಲಿ ಮಾಡುವ ಯಜ್ಞಗಳಿಗಾಗಿ ಈ ಹಣವನ್ನು ಉಪಯೋಗಿಸಿರಿ. ಇಸ್ರೇಲರನ್ನು ಶುದ್ಧರನ್ನಾಗಿ ಮಾಡುವ ಪವಿತ್ರ ಯಜ್ಞಗಳಿಗಾಗಿ ಮತ್ತು ಪಾಪಪರಿಹಾರಕ ಯಜ್ಞಗಳಿಗಾಗಿ ಈ ಹಣವನ್ನು ಉಪಯೋಗಿಸಿರಿ. ನಮ್ಮ ದೇವರ ಆಲಯದ ಯಾವ ಕಾರ್ಯಗಳಿಗೆ ಬೇಕಾದರೂ ಈ ಹಣವನ್ನು ಉಪಯೋಗಿಸಿರಿ.
ಅವರು ಪ್ರತಿದಿನವೂ ಮುಂಜಾನೆ ಸಾಯಂಕಾಲಗಳಲ್ಲಿ ಸರ್ವಾಂಗಹೋಮಗಳನ್ನೂ ಧೂಪಗಳನ್ನೂ ಅರ್ಪಿಸುವರು; ಮೇಜಿನ ಮೇಲೆ ನೈವೇದ್ಯದ ರೊಟ್ಟಿಗಳನ್ನಿಡುವರು. ಅವರು ಬಂಗಾರದ ದೀಪಸ್ತಂಭಗಳ ಮೇಲಿನ ಆರತಿಗಳನ್ನು ಸರಿಯಾಗಿ ನೋಡಿಕೊಳ್ಳುವುದರಿಂದ ಅವು ಹಗಲಿನಲ್ಲಿಯೂ ಸಾಯಂಕಾಲದಲ್ಲಿಯೂ ಪ್ರಕಾಶಮಾನವಾಗಿ ಉರಿಯುವವು. ನಾವು ಬಹಳ ಎಚ್ಚರಿಕೆಯಿಂದ ನಮ್ಮ ದೇವರ ಸೇವೆಮಾಡುತ್ತೇವೆ. ಆದರೆ ನೀವು ಆತನನ್ನು ತೊರೆದುಬಿಟ್ಟಿದ್ದೀರಿ.