ಯಾಜಕಕಾಂಡ 2:10 - ಪರಿಶುದ್ದ ಬೈಬಲ್10 ಧಾನ್ಯನೈವೇದ್ಯದಲ್ಲಿ ಉಳಿದದ್ದು ಆರೋನನಿಗೂ ಅವನ ಪುತ್ರರಿಗೂ ಸೇರುವುದು. ಅಗ್ನಿಯ ಮೂಲಕ ಯೆಹೋವನಿಗೆ ಮಾಡಿದ ಈ ನೈವೇದ್ಯವು ಮಹಾಪರಿಶುದ್ಧವಾಗಿದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ಧಾನ್ಯ ನೈವೇದ್ಯದಲ್ಲಿ ಉಳಿದದ್ದು ಆರೋನನಿಗೂ ಮತ್ತು ಅವನ ವಂಶದವರಿಗೂ ಕೊಡಬೇಕು; ಅದು ಯೆಹೋವನಿಗೆ ಅರ್ಪಿತವಾದ ಹೋಮಶೇಷವಾದ್ದರಿಂದ ಅತಿಪರಿಶುದ್ಧವಾಗಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ಈ ಕಾಣಿಕೆಯಲ್ಲಿ ಮಿಕ್ಕದ್ದು ಆರೋನನಿಗೂ ಅವನ ವಂಶಜರಿಗೂ ಸೇರತಕ್ಕದ್ದು. ಸರ್ವೇಶ್ವರನಿಗೆ ಸಮರ್ಪಿತವಾಗಿ ಉಳಿಕೆಯಾದದ್ದು ಮಹಾಪರಿಶುದ್ಧವಾದುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ನೈವೇದ್ಯದಲ್ಲಿ ವಿುಕ್ಕದ್ದು ಆರೋನನಿಗೂ ಅವನ ವಂಶದವರಿಗೂ ಆಗಬೇಕು; ಅದು ಯೆಹೋವನಿಗೆ ಅರ್ಪಿತವಾದ ಹೋಮಶೇಷವಾದದರಿಂದ ಮಹಾಪರಿಶುದ್ಧವಾಗಿದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ಧಾನ್ಯ ಸಮರ್ಪಣೆಯಲ್ಲಿ ಉಳಿದದ್ದನ್ನು ಆರೋನನೂ ಅವನ ಪುತ್ರರೂ ತೆಗೆದುಕೊಳ್ಳಬೇಕು. ಅದು ಬೆಂಕಿಯಿಂದ ಮಾಡಿದ್ದಾಗಿದ್ದು ಯೆಹೋವ ದೇವರ ಸಮರ್ಪಣೆಗಳಲ್ಲಿ ಮಹಾಪರಿಶುದ್ಧವಾಗಿರುವುದು. ಅಧ್ಯಾಯವನ್ನು ನೋಡಿ |
ಆರೋನನಿಗೆ ಇನ್ನೂ ಜೀವಂತವಾಗಿದ್ದ ಎಲ್ಲಾಜಾರ್ ಮತ್ತು ಈತಾಮಾರ್ ಎಂಬ ಇಬ್ಬರು ಪುತ್ರರು ಇದ್ದರು. ಮೋಶೆಯು ಆರೋನನಿಗೆ ಮತ್ತು ಅವನ ಇಬ್ಬರು ಗಂಡುಮಕ್ಕಳಿಗೆ, “ಯಜ್ಞವೇದಿಕೆಯ ಮೇಲೆ ಅರ್ಪಿಸಿದ ಯಜ್ಞಗಳಲ್ಲಿಯೂ ಧಾನ್ಯನೈವೇದ್ಯದಲ್ಲಿಯೂ ಉಳಿದ ಭಾಗವನ್ನು ತೆಗೆದುಕೊಂಡು ನೀವು ತಿನ್ನಬೇಕು. ಆದರೆ ನೀವು ಅದಕ್ಕೆ ಹುಳಿಯನ್ನು ಸೇರಿಸದೆ ಯಜ್ಞವೇದಿಕೆಯ ಸಮೀಪದಲ್ಲಿಯೇ ತಿನ್ನಬೇಕು. ಯಾಕೆಂದರೆ ಆ ಸಮರ್ಪಣೆಯು ಬಹಳ ಪವಿತ್ರವಾಗಿದೆ.
ಕೋರೆ ಎಂಬ ಲೇವಿಯು ಜನರು ದೇವರಿಗೆ ಸ್ವ ಇಚ್ಛೆಯಿಂದ ಸಮರ್ಪಿಸಿದ ಕಾಣಿಕೆಗೆ ಮುಖ್ಯಸ್ತನಾಗಿದ್ದನು. ಅವನು ಅದರ ಲೆಕ್ಕವನ್ನು ಒಪ್ಪಿಸುತ್ತಿದ್ದನು. ಅಲ್ಲದೆ ಯೆಹೋವನಿಗೆ ಕೊಟ್ಟವುಗಳನ್ನು ಮತ್ತು ಯೆಹೋವನಿಗೆ ಮೀಸಲಾಗಿಟ್ಟ ಕಾಣಿಕೆಗಳನ್ನು ಹಂಚಿಕೊಡುವುದು ಅವನ ಜವಾಬ್ದಾರಿಕೆಯಾಗಿತ್ತು. ಅಲ್ಲದೆ ಅವನು ಪೂರ್ವದ ಬಾಗಿಲಿನ ದ್ವಾರಪಾಲಕನಾಗಿದ್ದನು. ಅವನು ಲೇವಿಯನಾದ ಇಮ್ನನ ಮಗನು.
ಅವನು ನನಗೆ ಹೇಳಿದ್ದೇನೆಂದರೆ, “ಈ ಸ್ಥಳದಲ್ಲಿ ಯಾಜಕರು ದೋಷಪರಿಹಾರಕ ಮತ್ತು ಪಾಪಪರಿಹಾರಕಯಜ್ಞದ ಮಾಂಸಗಳನ್ನು ಬೇಯಿಸುವರು. ಇದೇ ಸ್ಥಳದಲ್ಲಿ ಧಾನ್ಯಸಮರ್ಪಣೆಯ ಹಿಟ್ಟಿನಿಂದ ರೊಟ್ಟಿಯನ್ನು ಸುಡುವರು. ಇದನ್ನು ಇಲ್ಲಿಯೇ ಯಾಕೆ ಮಾಡುತ್ತಾರೆಂದರೆ ಅವರು ಹೊರಗಿನ ಪ್ರಾಕಾರದೊಳಗೆ ಆ ಪವಿತ್ರ ವಸ್ತುವನ್ನು ತರುವ ಅವಶ್ಯಕತೆ ಇರುವದಿಲ್ಲ. ಸಾರ್ವಜನಿಕರು ಕೂಡುವ ಸ್ಥಳದಲ್ಲಿ ಆ ಪವಿತ್ರ ವಸ್ತುವನ್ನು ತರಬಾರದು.”