Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 14:42 - ಪರಿಶುದ್ದ ಬೈಬಲ್‌

42 ಬಳಿಕ ಆ ವ್ಯಕ್ತಿಯು ಗೋಡೆಗಳಲ್ಲಿ ಹೊಸ ಕಲ್ಲುಗಳನ್ನು ಇಡಿಸಿ ಹೊಸ ಮಡ್ಡಿ ಮಾಡಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

42 ಆಗ ಅವರು ಬೇರೆ ಕಲ್ಲುಗಳನ್ನು ತರಿಸಿ ಮೊದಲಿದ್ದ ಕಲ್ಲುಗಳ ಸ್ಥಳದಲ್ಲಿ ಹಾಕಿಸಿ, ಹೊಸ ಮಣ್ಣನ್ನು ತರಿಸಿ ಆ ಗೋಡೆಗಳಿಗೆ ಗಿಲಾವು ಮಾಡಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

42 ಆಗ ಬೇರೆ ಕಲ್ಲುಗಳನ್ನು ತರಿಸಿ ಮೊದಲಿದ್ದ ಕಲ್ಲುಗಳ ಸ್ಥಳದಲ್ಲಿ ಹಾಕಿಸಿ ಹೊಸಮಣ್ಣನ್ನು ತರಿಸಿ ಆ ಗೋಡೆಗಳಿಗೆ ಮೆತ್ತಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

42 ಆಗ ಬೇರೆ ಕಲ್ಲುಗಳನ್ನು ತರಿಸಿ ಮೊದಲಿದ್ದ ಕಲ್ಲುಗಳ ಸ್ಥಳದಲ್ಲಿ ಹಾಕಿಸಿ ಹೊಸ ಮಣ್ಣನ್ನು ತರಿಸಿ ಆ ಗೋಡೆಗಳಿಗೆ ಗಿಲಾವು ಮಾಡಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

42 ಅವರು ಆ ಕಲ್ಲುಗಳಿಗೆ ಬದಲಾಗಿ ಬೇರೆ ಕಲ್ಲುಗಳನ್ನು ತೆಗೆದುಕೊಳ್ಳಬೇಕೆಂದೂ ಯಾಜಕನು ಆಜ್ಞಾಪಿಸಬೇಕು, ಅವನು ಬೇರೆ ಗಾರೆಯಿಂದ ಆ ಮನೆಗೆ ಗಿಲಾವುಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 14:42
13 ತಿಳಿವುಗಳ ಹೋಲಿಕೆ  

ನಾನು ಉಪದೇಶಿಸಿದ ಸಂಗತಿಗಳನ್ನು ನೀನು ಕೇಳಿರುವೆ. ಅವುಗಳನ್ನು ಇತರ ಅನೇಕ ಜನರೂ ಕೇಳಿದ್ದಾರೆ. ನೀನು ಆ ಸಂಗತಿಗಳನ್ನು ಉಪದೇಶಿಸಬೇಕು. ನಿನಗೆ ನಂಬಿಗಸ್ತರಾದ ಕೆಲವರ ವಶಕ್ಕೆ ಆ ಉಪದೇಶಗಳನ್ನು ಕೊಡು. ಆಗ ಅವರು ಆ ಸಂಗತಿಗಳನ್ನು ಇತರರಿಗೆ ಉಪದೇಶಿಸಲು ಸಾಧ್ಯವಾಗುತ್ತದೆ.


ನಂಬಿಗಸ್ತರಿಗಾಗಿ ದೇಶದಲ್ಲೆಲ್ಲಾ ಹುಡುಕಿ ನೋಡುತ್ತೇನೆ. ನನ್ನ ಸೇವೆಗೆ ಅವರನ್ನೇ ನೇಮಿಸಿಕೊಳ್ಳುವೆನು. ಪರಿಶುದ್ಧರು ಮಾತ್ರ ನನ್ನ ಸೇವಕರಾಗಿರಲು ಸಾಧ್ಯ.


“ನೀವು ಯೆಹೋವನ ಸೇವೆಮಾಡಲು ಇಷ್ಟಪಡದಿದ್ದರೆ ಯಾರ ಸೇವೆಯನ್ನು ಮಾಡಬೇಕೆಂದಿದ್ದೀರಿ? ಈ ಹೊತ್ತೇ ಆರಿಸಿಕೊಳ್ಳಿರಿ. ನಿಮ್ಮ ಪೂರ್ವಿಕರು ಯೂಫ್ರೇಟೀಸ್ ನದಿಯ ಆಚೆ ಇದ್ದಾಗ ಪೂಜಿಸುತ್ತಿದ್ದ ದೇವರುಗಳ ಸೇವೆಮಾಡುವಿರೋ ಅಥವಾ ಈ ಪ್ರದೇಶದಲ್ಲಿದ್ದ ಅಮೋರಿಯರ ದೇವತೆಗಳ ಸೇವೆಮಾಡುವಿರೋ ಎಂಬುದನ್ನು ನೀವು ಇಂದು ನಿರ್ಧರಿಸಬೇಕು. ಆಯ್ಕೆ ನಿಮಗೆ ಬಿಟ್ಟಿದ್ದು. ಆದರೆ ನಾನು ಮತ್ತು ನನ್ನ ಕುಟುಂಬದವರು ಯೆಹೋವನನ್ನೇ ಸೇವಿಸುತ್ತೇವೆ” ಅಂದನು.


ನಾನು ಅವನೊಡನೆ ವಿಶೇಷವಾದ ಒಡಂಬಡಿಕೆಯನ್ನು ಮಾಡಿಕೊಂಡಿದ್ದೇನೆ. ಅವನು ತನ್ನ ಮಕ್ಕಳಿಗೂ ಸಂತತಿಯವರಿಗೂ ನನಗೆ ವಿಧೇಯರಾಗುವಂತೆ ಮತ್ತು ನ್ಯಾಯನೀತಿಗಳಿಂದ ಜೀವಿಸುವಂತೆ ಆಜ್ಞಾಪಿಸಲೆಂದು ನಾನು ಅವನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡೆನು. ಅವರು ಹೀಗೆ ಜೀವಿಸಿದರೆ, ನನ್ನ ವಾಗ್ದಾನಗಳನ್ನೆಲ್ಲಾ ನೆರವೇರಿಸುವೆನು.”


ತರುವಾಯ ಯಾಜಕನು ಮನೆಯ ಒಳಗಿನ ಗೋಡೆಯನ್ನೆಲ್ಲಾ ಕೆರೆಯಿಸಬೇಕು. ಜನರು ಕೆರೆದುಹಾಕುವ ಮಣ್ಣನ್ನು ಪಟ್ಟಣದ ಹೊರಗೆ ಎಸೆದುಬಿಡಬೇಕು. ಅವರು ಅದನ್ನು ಪಟ್ಟಣದ ಹೊರಗಿರುವ ಪ್ರತ್ಯೇಕವಾದ ಅಶುದ್ಧ ಸ್ಥಳದಲ್ಲಿ ಹಾಕಬೇಕು.


“ಒಂದುವೇಳೆ ಒಬ್ಬನು ಹಳೆಯ ಕಲ್ಲುಗಳನ್ನು ಮತ್ತು ಮಣ್ಣನ್ನು ತೆಗೆಸಿ ಹೊಸ ಕಲ್ಲುಗಳನ್ನು, ಮಣ್ಣನ್ನು ಮತ್ತು ಹೊಸ ಮಡ್ಡಿಯನ್ನು ಹಾಕಿಸಿದ್ದರೂ ಬೂಷ್ಟು ಮತ್ತೆ ಆ ಮನೆಯಲ್ಲಿ ಕಾಣಿಸಿಕೊಂಡರೆ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು