“ಒಬ್ಬನ ದೇಹದ ಚರ್ಮದಲ್ಲಿ ಬೆಂಕಿಯಿಂದ ಸುಟ್ಟಗಾಯ ಉಂಟಾಗಬಹುದು. ಹಸಿಯಾದ ಚರ್ಮವು ಬೆಳ್ಳಗಾಗಿದ್ದರೆ, ಕೆಂಪುಬಿಳುಪು ಮಿಶ್ರವಾದ ಮಚ್ಚೆಯುಳ್ಳದ್ದಾಗಿದ್ದರೆ, ಯಾಜಕನು ಅದನ್ನು ಪರೀಕ್ಷಿಸಬೇಕು. ಆ ಬಿಳಿ ಕಲೆ ಚರ್ಮಕ್ಕಿಂತ ತಗ್ಗಾಗಿದ್ದರೆ ಮತ್ತು ಆ ಕಲೆಯಲ್ಲಿನ ರೋಮವು ಬೆಳ್ಳಗಾಗಿದ್ದರೆ, ಅದು ಕುಷ್ಠರೋಗವಾಗಿದೆ. ಆ ಕುಷ್ಠವು ಸುಟ್ಟಗಾಯದಲ್ಲಿ ಹುಟ್ಟಿದ್ದಾಗಿದೆ. ಆಗ ಯಾಜಕನು ಆ ವ್ಯಕ್ತಿಯನ್ನು ಅಶುದ್ಧನೆಂದು ಪ್ರಕಟಿಸಬೇಕು. ಅದು ಕುಷ್ಠರೋಗವಾಗಿದೆ.
ಯಾಜಕನು ಅದನ್ನು ಪರೀಕ್ಷಿಸಬೇಕು. ಅದು ಚರ್ಮಕ್ಕಿಂತ ತಗ್ಗಾಗಿದ್ದರೆ ಮತ್ತು ಅದರ ಮೇಲಿರುವ ರೋಮವು ಬೆಳ್ಳಗಾಗಿದ್ದರೆ, ಯಾಜಕನು ಅವನನ್ನು ಅಶುದ್ಧನೆಂದು ಪ್ರಕಟಿಸಬೇಕು. ಆ ಕಲೆಯು ಕುಷ್ಠದ ಸೋಂಕಾಗಿದೆ. ಹುಣ್ಣಿನಿಂದ ಕುಷ್ಠ ಬಂದಿದೆ.